ಚಾಮರಾಜನಗರ ಬೈಪಾಸ್ ಅಪಘಾತ ಪ್ರಕರಣ: ನಾಲ್ವರೂ ಬಾಲಕರು ಸಾವು

ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.07-
-ಲಾರಿ, ಕಾರು ಹಾಗೂ ಬೈಕ್ ನಡುವೆ ಅಪಘಾತ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮೂವರು ಸೇರಿ ಒಟ್ಟು ನಾಲ್ವರೂ ಬಾಲಕರು ಮೃತಪಟ್ಟಿದ್ದಾರೆ.
ಚಾಮರಾಜನಗರದ ಕೆ.ಪಿ.ಮೊಹಲ್ಲಾದ ಮೆರಾನ್( 10) ಸ್ಥಳದಲ್ಲೇ ಮೃತಪಟ್ಟಿದ್ದನು. ಚಿಂತಾಜನಕ ಸ್ಥಿತಿಯಲ್ಲಿದ್ದ ಮೆರಾನ್ ನ ಅಣ್ಣ ಫೈಜಲ್, ಅದಾನ್ ಪಾಷಾ ಹಾಗೂ ರಿಯಾಸ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಅಸುನೀಗಿದ್ದಾರೆ.


ಕಾರಿನ ಚಾಲಕ ಶ್ರೀಕಾಂತ್ (22) ಹಾಗೂ ಮಣಿಕಾಂತ್(45) ಎಂಬಿಬ್ಬರಿಗೆ ಗಾಯಗಳಾಗಿದ್ದು ಇವರು ಸಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶನಿವಾರ ಮಧ್ಯಾಹ್ನ ಎಕ್ಸ್ ಎಲ್ ಸ್ಕೂಟರ್ ನಲ್ಲಿ ನಾಲ್ವರು ಬಾಲಕರು ತೆರಳುತ್ತಿದ್ದಾಗ ಬೆಂಗಳೂರಿನಿಂದ ತಾಳವಾಡಿಗೆ ತೆರಳುತ್ತಿದ್ದ ಕಾರು ಬೈಕ್ ಸವಾರರಿಗೆ ಗುದ್ದಿದ್ದು ಬೈಕ್ ಲಾರಿ ಕೆಳಕ್ಕೆ ಸಿಲುಕಿ ಈ ಅವಘಡ ಉಂಟಾಗಿತ್ತು.


ಕಾರಿನಲ್ಲಿದ್ದವರು ಸೊಲ್ಲಾಪುರದ ಮೂಲದವರಾಗಿದ್ದು ಖಾಸಗಿ ಟ್ಯಾಕ್ಸಿ ಮೂಲಕ ತಮಿಳುನಾಡಿನ ತಾಳವಾಡಿಗೆ ತೆರಳುತ್ತಿದ್ದರು.
ಸ್ಥಳಕ್ಕೆ ಚಾಮರಾಜನಗರ ಎಸ್ಪಿ ಡಾ.ಬಿ.ಟಿ.ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಾಮರಾಜನಗರ ಟ್ರಾಫಿಕ್ ಠಾಣೆ ಪೆÇಲೀಸರು ಮೂರು ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ.


ಮೈಸೂರಿನಲ್ಲಿ ಮೂವರು ಬಾಲಕರ ಶವಗಳನ್ನು ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಒಪ್ಪಿಸಲಿದ್ದಾರೆ.