
ಸಂಜೆವಾಣಿ ವಾರ್ತೆ
ಕೊಳ್ಳೇಗಾಲ:ಜ.31:- ನೆನ್ನೆ ದಿನ ಪಟ್ಟಣದಲ್ಲಿ ಮದುಮಗನಿಗೆ ಚಾಕುವಿನಿಂದ ಇರಿತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುವನ್ನು ಜೆಡಿಎಸ್ ವಿಧಾನಸಭಾ ಕ್ಷೇತ್ರಾಧ್ಯಕ್ಷ ಹಾಗೂ ನಿವೃತ್ತ ಪೆÇಲೀಸ್ ಇನ್ಸ್‍ಪೆಕ್ಟರ್ ಬಿ.ಪುಟ್ಟಸ್ವಾಮಿ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು.
ಇಲ್ಲಿನ ಉಪವಿಭಾಗ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿಗೆ ಹಣ್ಣು ಹಂಪಲು ನೀಡು ಧೈರ್ಯ ತುಂಬಿದರು.
ಬಳಿಕ ಮಾತನಾಡಿದ ಅವರು, ಪಟ್ಟಣದಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಈ ಘಟನೆಯಿಂದ ವಧುವರರು ಇಬ್ಬರು ದೂರವಾಗಿದ್ದಾರೆ. ವರ ಆಸ್ಪತ್ರೆಯಲ್ಲಿ, ವಧು ಕಲ್ಯಾಣ ಮಂಟಪದಲ್ಲಿ ಇದ್ದಾರೆ. ಇದು ಬೇಸರದ ಸಂಗತಿ ಎಂದು ವಿಷಾಧ ವ್ಯಕ್ತಪಡಿಸಿದರು.
ಘಟನೆ ಕಾರಣರಾದ ಆರೋಪಿಯನ್ನು ಕೂಡಲೇ ಬಂಧಿಸಿ ಗಾಯಾಳು ನ್ಯಾಯ ಕೊಡಿಸಬೇಕು.
ಕಲೆ ಮತ್ತು ಮಾನವಿಯತೆ ಸ್ಥಳವಾಗಿದ್ದು ಇಂತಹ ಘಟನೆ ನಡೆಯಬಾರದು. ಇಂತಹ ಘಟನೆ ಮತ್ತೊಮ್ಮೆ ನಡೆಯದಂತೆ ಪೆÇಲೀಸ್ ಇಲಾಖೆ ಹೆಚ್ಚಿನ ಬಂದೋಬಸ್ತ ಒದಗಿಸಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಕುಣಗಳ್ಳಿ ಹಾಗೂ ಹೊಸ ಅಣಗಳ್ಳಿ ಗ್ರಾಮದ ಯಜಮಾನರು ಇದ್ದರು.




























