
ಸಂಜೆವಾಣಿ ವಾರ್ತೆ
ಬಳ್ಳಾರಿ.ಡಿ.26- ಬಳ್ಳಾರಿಯ ಬೆಂಗಳೂರು ರಸ್ತೆಯಲ್ಲಿ ನಿನ್ನೆ ಚಂದನ ಸ್ವರ್ಣ ಮಂದಿರ್ ನೂತನ ಮಳಿಗೆಗೆ ಗಣ್ಯರು ಚಾಲನೆ ನೀಡಿದ್ದು ತನ್ನ ಕಾರ್ಯವನ್ನು ಆರಂಭಿಸಿದೆ.
ನಿನ್ನೆ ಬೆಳಗ್ಗೆಯಿಂದಲೇ ನಡೆದ ನಾನಾ ಧಾರ್ಮಿಕ ವಿಧಿವಿಧಾನಗಳ ನಂತರ ಸಾರ್ವಜನಿಕರಿಗೆ ಮುಕ್ತಗೊಳಿಸಲಾಯಿತು.
ನೂತನ ಮಳಿಗೆಯ ಒಳಾಂಗಣ ವಿನ್ಯಾಸವು ಗ್ರಾಹಕರಿಗೆ ಅರಮನೆಯಂತಹ ಅನುಭೂತಿ ನೀಡುವಂತಿದೆ. ನಗರದ ನೂರಾರು ಗ್ರಾಹಕರು ಮೊದಲ ದಿನವೇ ಭೇಟಿ ನೀಡಿ ಆಭರಣಗಳ ವೀಕ್ಷಣೆ ಮಾಡಿದರು. ಮಧ್ಯಮ ವರ್ಗದ ಜನರಿಗಾಗಿ ವಿಶೇಷ ಮಾಸಿಕ ಉಳಿತಾಯ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಚಂದನ ಸ್ವರ್ಣ ಮಂದಿರ್ ಮಾಲೀಕರಾದ ಎಂ.ಶ್ರೀನಿವಾಸ ರಾವ್, ಎಂ.ಭದ್ರಾವತಿ, ನಿರ್ದೇಶಕರಾದ ಎಂ.ಸಂತೋಷ್ ರಾಮ್ ಮೋಹನ್, ಎಂ. ವೆಂಕಟ್ ಗಣೇಶ್, ಅತಿಥಿಗಳಾಗಿ ಸಿ.ನಾಗೇಶ್ ಆನಂದ್, ಎಂ.ಪೆಂಚಲಯ್ಯ, ಜಿ.ತಿಮ್ಮಾರೆಡ್ಡಿ, ಗುಲಾ ಗುಲಾಬ್ ಚಂದ್, ರಾಕೇಶ್ ಜೈನ್ ಸೇರಿ ಉದ್ಯಮಿಗಳು, ನಾನಾ ಮುಖಂಡರು, ಸಂಸ್ಥೆಯ ಸಿಬ್ಬಂದಿ ಇದ್ದರು.























