ಬೀದರ್: ಅ.೧೭:ನಗರದ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೇಷಾಲಿಟಿ ಸಹಕಾರ ಅಸ್ಪತ್ರೆಯಲ್ಲಿ ಶುಕ್ರವಾರ ಸ್ವಾತಂತ್ರö್ಯ ದಿನಾಚರಣೆ ಸಡಗರ, ಸಂಭ್ರಮದಿAದ ನಡೆಯಿತು.
ಆಸ್ಪತ್ರೆಯ ಅಧ್ಯಕ್ಷರಾದ ತರುಣ್ ಸೂರ್ಯಕಾಂತ್ ನಾಗಮಾರಪಳ್ಳಿ ಅವರು ಸ್ವ್ವಾತಂತ್ರö್ಯ ದಿನಾಚರಣೆ ನಿಮಿತ್ತ ರಾಷ್ಟç ಧ್ವಜಾರೋಹಣ ನೆರವೇರಿಸಿದರು. ದೇಶದ ಸ್ವಾತಂತ್ರö್ಯಕ್ಕಾಗಿ ಹೋರಾಡಿದ, ಪ್ರಾಣಾರ್ಪಣೆ ಮಾಡಿದ ಹೋರಾಟಗಾರರನ್ನು ಪ್ರತಿಯೊಬ್ಬರು ಸ್ಮರಿಸಬೇಕು. ಈ ಮಹಾನ್ ದೇಶಭಕ್ತರ ದೃಢ ಸಂಕಲ್ಪ ಮತ್ತು ಹೋರಾಟದಿಂದಾಗಿಯೇ ಸ್ವಾತಂತ್ರö್ಯ ಲಭಿಸಿದೆ ಎಂದು ತರುಣ್ ನಾಗಮಾರಪಳ್ಳಿ ಹೇಳಿದರು.
ಆಸ್ಪತ್ರೆಯ ನಿರ್ದೇಶಕ ಶಿವಕುಮಾರ ಭಾಲ್ಕೆ, ಸಿಇಒ ಕೃಷ್ಣಾರೆಡ್ಡಿ, ರಾಮಶೆಟ್ಟಿ ಹಾವಶೆಟ್ಟಿ ಮತ್ತಿರ ಗಣ್ಯರು, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.























