Home ಜಿಲ್ಲೆ ಮೈಸೂರು ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿಸುವಾಗ ಎಚ್ಚರ ವಹಿಸಬೇಕು: ಹೆಚ್.ಎನ್. ಶ್ರೀನಿಧಿ

ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿಸುವಾಗ ಎಚ್ಚರ ವಹಿಸಬೇಕು: ಹೆಚ್.ಎನ್. ಶ್ರೀನಿಧಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ.10:-
ಗ್ರಾಹಕರು ಯಾವುದೇ ವಸ್ತುಗಳನ್ನು ಖರೀದಿಸುವಾಗ ಎಚ್ಚರವಹಿಸಬೇಕು, ವಸ್ತುಗಳ ಮೇಲಿನ ದಿನಾಂಕ ದಿನಾಂಕವನ್ನು ಪರಿಶೀಲಿಸಿದರೆ ಉತ್ತಮ ಆ ವಸ್ತುವು ನಿಗಧಿತ ದಿನಾಂಕವನ್ನು ಮೀರಿದ್ದರೆ ಆ ವಸ್ತುವು ತನ್ನ ಗುಣವನ್ನು ಕಳೆದು ಕೊಂಡಂತೇ ಎಂದು ಚಾಮರಾಜನಗರ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಹೆಚ್.ಎಸ್. ಶ್ರೀನಿಧಿ ತಿಳಿಸಿದರು.
ನಗರದ ಶ್ರೀಗಂಧ ಮಹಿಳಾ ಅಭಿವೃದ್ದಿ ಸಂಘ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ, ಕಾನೂನು ಮಾಪನ ಶಾಸ್ತ್ರ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ಸರ್ಕಾರಿ ಪ್ರೌಢಶಾಲೆ ದೊಡ್ಡರಾಯಪೇಟೆ ಇವರ ಸಹಯೋಗದಲ್ಲಿ ತಾಲ್ಲೂಕಿ ದೊಡ್ಡರಾಯಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಗ್ರಾಹಕ ಹಕ್ಕುಗಳು ಮತ್ತು ಜಾಗೃತಿ ಕುರಿತು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಮನುಷ್ಯನು ಜನಿಸಿದ ದಿನದಿಂದ ಗ್ರಾಹಕನೆ ಎಂದು ತಿಳಿದಿರಬೇಕು. ಯಾವುದೇ ವಸ್ತುಗಳನ್ನು ಅಂಗಡಿಗಳಲ್ಲಿ ಕೊಂಡುಕೊಳ್ಳುವಾಗ ಅಳತೆ ನೋಡಿಕೊಳ್ಳಬೇಕು.
ಜೊತೆಗೆ ರಶೀತಿ ಪಡೆಯಬೇಕು. ಎಂದು ಹೇಳೀದರು. ಭಾರತ ಸರ್ಕಾರವು 1986 ರಂದು ಒಂದು ಕಾನೂನು ಹೊರಡಿಸಿ ನಮ್ಮ ದೇಶದ ಗ್ರಾಹಕರಿಗೆ ವ್ಯಾಪಾರ ಮಾಡುವಾಗ ಅವರಿಗಾಗುವ ಅನೇಕ ಮೋಸ ವಂಚನೆ ಹಾಗೂ ಸೇವೆಗಳಲ್ಲಿ ನ್ಯೂನ್ಯತೆ ಗಳನ್ನು ಸರಿಪಡಿಸವ ಈ ನಿಟ್ಟಿನಲ್ಲಿ ಗ್ರಾಹಕರಿಗೆ ಶೀಘ್ರ ನ್ಯಾಯ ಒದಗಿಸುವ ದೃಷ್ಟಿಯಿಂದ ಗ್ರಾಹಕರ ಸಂರಕ್ಷಣಾ ಕಾಯ್ದೆ 1986ನ್ನು ಜಾರಿಗೆ ತಂದಿದೆ ಮೋಸದಿಂದ ಗ್ರಾಹಕರ ರಕ್ಷಣೆಗಾಗಿ ಕಾನೂನುಗಳನ್ನು ರೂಪಿಸುವ ಉದ್ದೇಶದಿಂದ ಗ್ರಾಹಕ ಸಂರಕ್ಷಣೆ ಕಾನೂನು 2019 ತಂದಿದ್ದು ಈ ಕಾಯ್ದೆಯು ದಿನಾಂಕ 24-07-2020ರಂದು ಜಾರಿಗೆ ಬಂದಿರುತ್ತದೆ ಇಂತಹ ಮಾಹಿತಿಗಳನ್ನು ವಿದ್ಯಾರ್ಥಿಗಳು ತಿಳಿದಿರಬೇಕು ಎಂದು ಹೇಳಿದರು.


ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮಹಿಳಾ ಸದಸ್ಯರಾದ ಭಾರತಿ ಮಾತನಾಡಿ ವಿದ್ಯಾರ್ಥಿಗಳು ಶಾಲೆಯ ಮುಂಭಾಗದಲ್ಲಿ ಮಾರಾಟ ಮಾಡುವ ತಿಂಡಿಗಳನ್ನು ತಿನ್ನುವ ಮೊದಲು ಅದು ಉತ್ತಮ ಗುಣಮಟ್ಟದ ಪದಾರ್ಥವ ಎಂದು ತಿಳಿಯಬೇಕು. ನಂತರ ಪ್ಯಾಕಿನ ಮೇಲೆ ದಿನಾಂಕವನ್ನು ನೋಡಬೇಕು ನಂತರ ಪಡೆಯಬೇಕು. ಯಾವುದೇ ವಸ್ತುಗಳನ್ನು ಕೊಳ್ಳಬೇಕಾದರೆ ರಶೀತಿಯನ್ನು ಪಡೆದರೆ ಮಾತ್ರ ದಾವೆ ಹೂಡಲು ಸಾಧ್ಯವಾಗುತ್ತದೆ ಎಂದರು.


ವೇದಿಕೆಯಲ್ಲಿ ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಯೋಜಕರಾದ ಶಿವರಾಜಮ್ಮ, ಮಾತನಾಡಿ ಶಾಲೆಯ ವಿದ್ಯಾರ್ಥಿಗಳಲ್ಲಿ ಹರಿವು ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಸಹ ಗ್ರಾಹಕರೇ ಅಂಗಡಿಗಳಲ್ಲಿ ಖರೀದಿಸುವ ವಸ್ತುಗಳಿಗೆ ರಶೀತಿಯನ್ನು ಪಡೆದರೆ ಉತ್ತಮ ಎಂದು ಹೇಳಿದರು.
ಪ್ರೌಢಶಾಲಾ ಮುಖ್ಯ ಶಿಕ್ಷಕಿ ವನಜಾಕ್ಷಿ ಎನ್.ವಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಶ್ರೀಗಂಧ ಮಹಿಳಾ ಅಭಿವೃದ್ದಿ ಸಂಘದ ಅಧ್ಯಕ್ಷೆ ಉಮಾ ವಹಿಸಿದ್ದರು ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ರೇಚಣ್ಣ, ಕೆಂಪಣ್ಣ, ಜಗನ್ ಮೋಹನ್ ಹಾಗೂ ವಿದ್ಯಾರ್ಥಿಗಳು ಇದ್ದರು.