ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬುದು ರಾಜಶೇಖರಮೂರ್ತಿ ಆಶಯ: ಮರಿಯಾಲ ಶ್ರೀಗಳು

ಸಂಜೆವಾಣಿ ವಾರ್ತೆ
ಚಾಮರಾಜನಗರ, ಡಿ.08:-
ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತು ಅವರು ಉನ್ನತ ಪದವಿ ಪಡೆದುಕೊಂಡಾಗ ಮಾತ್ರ ಭಾರತ ಅಭಿವೃದ್ದಿ ಹೊಂದಿದ ರಾಷ್ಟ್ರಗಳಿಗೆ ಸೇರಿಸಲು ಸಾಧ್ಯ ಎಂಬುದನ್ನು ದಿ.ರಾಜಶೇಖರಮೂರ್ತಿ ಅವರು ಹೊಂದಿದ್ದರು ಎಂದು ಮರಿಯಾಲ ಶ್ರೀ ಮಠಾಧ್ಯಕ್ಷರಾದ ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ ತಿಳಿಸಿದರು.

ಕೇಂದ್ರ ಸಚಿವÀರಾಗಿದ್ದ ದಿ. ಎಂ. ರಾಜಶೇಖರಮೂರ್ತಿ ಅವರ 15ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ನಗರದ ಸಮೀಪದ ಮರಿಯಾಲದ ಶ್ರೀ ಮುರುಘರಾಜೇಂದ್ರಸ್ವಾಮಿ ವಿದ್ಯಾಸಂಸ್ಥೆ ಆವರಣದಲ್ಲಿರುವ ಅವರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ, ಪುಣ್ಯ ಸ್ಮರಣಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ರಾಜಶೇಖಮೂರ್ತಿ ಅವರು ರಾಜಕಾರಣದಲ್ಲಿ ಶುದ್ದ ಹಸ್ತರು, ರಾಜಕಾರಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡವರು. ಶಿಕ್ಷಣ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ತಮ್ಮದೇ ಆದ ಕನಸು ಕಟ್ಟಿಕೊಂಡಿದ್ದರು. ಹೀಗಾಗಿ ಮರಿಯಾಲದಲ್ಲಿ ಶಿಕ್ಷಣ ಸಂಸ್ಥೆಯ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ್ದರು. ಅವರು ಈ ಭಾಗ ಮಕ್ಕಳಿಗೂ ಸಹ ಬೆಂಗಳೂರು ಹಾಗೂ ಮೈಸೂರಿನಲ್ಲಿ ದೊರೆಯುವಂತಹ ಗುಣಾತ್ಮಕ ಶಿಕ್ಷಣ ಸಿಗಬೇಕು. ಎಲ್ಲರು ಸಹ ದೊಡ್ಡ ಹುದ್ದೆಗಳಿಗೆ ಹೋಗಬೇಕು. ಇಂಥ ವಾತಾವರಣವನ್ನು ಕಲ್ಪಿಸುವ ನಿಟ್ಟಿನಲ್ಲಿ ರಾ.ಮೂರ್ತಿಗಳು ತಮ್ಮ ಅನುಭವವನ್ನು ಧಾರೆ ಎರೆದರು. ಜೊತೆಗೆ ಹಿರಿಯ ಶ್ರೀಗಳೊಂದಿಗೆ ಕೈಜೋಡಿಸಿ, ವಿದ್ಯಾಸಂಸ್ಥೆಯ ಬೆಳವಣಿಗೆಗೆ ಪ್ರಮುಖ ಕಾರಣೀಭೂತರಾಗಿದ್ದರು. ಅವರ ಸೇವೆಯನ್ನು ಸ್ಮರಿಸಿಕೊಳ್ಳುವ ಜೊತೆಗೆ ಅವರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ನಾವೆಲ್ಲರು ಶ್ರಮಿಸೋಣ ಎಂದರು.

ದಿ. ರಾಜಶೇಖರ ಮೂರ್ತಿ ಅವರ ಪುತ್ರಿ ಶೀಲಾ ಹರಹಳಕಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಕ್ರೀಡಾ ಸಲಕರಣೆ ಮತ್ತು ಗ್ರಂಥಾಲಯಗಳಿಗೆ ಪುಸ್ತಕಗಳನ್ನು ನೀಡಿ ಅವರು ಮಾತನಾಡಿ, ನಮ್ಮ ತಂದೆಯವರಾದ ರಾಜಶೇಖರಮೂರ್ತಿ ಅವರು ಕೇಂದ್ರ ಮತ್ತು ರಾಜ್ಯದಲ್ಲಿ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದ್ದರು. ಬಹಳಷ್ಟು ಯುವ ರಾಜಕಾರಣಿಗಳನ್ನು ಬೆಳೆಸಿದವರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹಾಸು ಹೊಕ್ಕಾಗಿರುವುದನ್ನು ನೋಡಿ ತುಂಬಾ ನೊಂದಿದ್ದರು ಎಂದರು.

ಹೀಗಾಗಿ ವಿದ್ಯಾರ್ಥಿಗಳಾದ ನೀವು ಭ್ರಷ್ಟಾಚಾರದ ವಿರುದ್ದವಾಗಿರಬೇಕು. ಸಂಸ್ಕಾರಯುತ ಶಿಕ್ಷಣವನ್ನು ಪಡೆದುಕೊಳ್ಳುವ ಜೊತೆಗೆ ಭ್ರಷ್ಟಚಾರ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವ ಗುರಿ ನಿಮ್ಮದಾಗಬೇಕು. ಚಿಕ್ಕ ವಯಸ್ಸಿನಿಂದಲೇ ಸರಳತೆ ಮತ್ತು ಪ್ರಾಮಾಣಿಕತೆಯನ್ನು ರೂಡಿಸಿಕೊಂಡರೆ, ತಾವು ದೊಡ್ಡರಾಗಿ, ಉನ್ನತ ºುದ್ದೆಗಳಿಗೆ ಹೋದಾಗ ಅಲ್ಲಿ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ ಎಂದರು.
ಇಂತಹ ತಮ್ಮ ಭವ್ಯ ಕನಸಿನ ಸಿದ್ದಿಗೆ ಅವರು ಆಯ್ಕೆ ಮಾಡಿಕೊಂಡಿದ್ದು, ಜಿಲ್ಲೆಯ ಮರಿಯಾಲ ಗ್ರಾಮವನ್ನು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಬೌದ್ದಿಕ, ಆಧ್ಯಾತ್ಮಿಕ ಶಿಕ್ಷಣ ನೀಡಿ ಅವರನ್ನು ಸಮಾಜದ ಆಸ್ತಿಯನ್ನು ಮಾಡುವ ಜೊತೆಗೆ ಸಂಸ್ಕಾರಯುತ ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಒತ್ತು ನೀಡಿದ್ದರು. ಎಲ್ಲಾ ವರ್ಗದ ಬಡ ಮಕ್ಕಳಿಗೆ ಹಾಗೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಅಖಿಲ ಭಾರತ ಮಾದರಿ ಶಿಕ್ಷಣ ಕೇಂದ್ರವನ್ನು ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಶ್ರಮಿಸಿದ್ದರು ಎಂದರು.

ಅವರ ಪರಿಶ್ರಮ ಹಾಗೂ ಹಿರಿಯಶ್ರೀಗಳ ಆರ್ಶೀವಾದದಿಂದ ಮರಿಯಾದಲ್ಲಿ ಬೃಹತ್ ಶ್ರೀ ಮುರುಘರಾಜೇಂದ್ರಸ್ವಾಮಿ ಶೈಕ್ಷಣಿಕ ಸಂಸ್ಥೆ ಆರಂಭಗೊಂಡಿದೆ. ಇಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಹಾಗೂ ಶಿಸ್ತು ರೂಡಿಸುವ ಮೂಲಕ ರಾಜಶೇಖರಮೂರ್ತಿ ಅವರು ಕನಸು ಅವರ ಪುಣ್ಯಭೂಮಿಯಲ್ಲಿಯೇ ನೆನಸು ಮಾಡುವ ಪ್ರಯತ್ನ ನಿರಂತರವಾಗಿ ಸಾಗಿದೆ ಎಂದು ಶೀಲಾ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ದಿ. ರಾಜಶೇಖರಮೂರ್ತಿರವರ ಮಕ್ಕಳಾದ ಶೀಲಾ ಹರಹಳಕಟ್ಟಿ, ಸುಮ, ಶಶಿ, ಶೋಭಾ, ಕಾಳನಹುಂಡಿ ಶಿವಕುಮಾರಸ್ವಾಮಿ, ಸಂಸ್ಥೆಯ ಪ್ರಾಂಶುಪಾಲರಾದ ಮೂಡ್ನಾಕೂಡು ಮಹದೇವಸ್ವಾಮಿ, ಶಿಕ್ಷಕರ ವೃಂದದವರು ಹಾಗೂ ತಡಿಮಾಲಂಗಿ ಮತ್ತು ಮರಿಯಾಲ ಗ್ರಾಮಸ್ಥರು, ವಿದ್ಯಾಸಂಸ್ಥೆಯ ಅಧ್ಯಕ್ಷರು, ಸದಸ್ಯರು, ನೌಕರರು, ವಿದ್ಯಾರ್ಥಿಗಳು, ದಿ ಎಂ. ರಾಜಶೇಖರಮೂರ್ತಿ ಅಭಿಮಾನಿಗಳು ಉಪಸ್ಥಿತರಿದ್ದರು.