
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ:ಜೂ.05: ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ಬೆಟ್ಟದಪುರ ಸಮೀಪದ ತಂದ್ರೆಗುಡಿಕೊಪ್ಪಲು ಗ್ರಾಮಗಳಲ್ಲಿ ಬುಧವಾರ ನಾಲಾ ಸೇವಾ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಅತ್ತಿಗೋಡು ಹಾಗೂ ಕಿತ್ತೂರು ಗ್ರಾಮಗಳ ನಾಲೆಗಳ ರಸ್ತೆ ಅಭಿವೃದ್ಧಿಯಲ್ಲಿ ಹೆಚ್ಚಿನ ಕಾಳಜಿ ವಹಿಸಿ, ಅಲ್ಲಿಗೆ ಗರಿಷ್ಠ ಮಟ್ಟದ ಅನುದಾನವನ್ನು ನೀಡಲಾಗಿದೆ, ಇದರಿಂದ ರೈತರ ಜಮೀನುಗಳಿಗೆ ಓಡಾಡಲು, ಹಾಗೂ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಿರಿಯಾಪಟ್ಟಣ ತಾಲ್ಲೂಕಿಗೆ ಅತಿ ಹೆಚ್ಚು ಅನುದಾನವನ್ನು ನೀಡಿ, ಅಭಿವೃದ್ಧಿಗೆ ಮುಂದಾಗಿದ್ದಾರೆ, ತಾಲ್ಲೂಕಿನ ಜನತೆಯ ಪರವಾಗಿ ಅವರಿಗೆ ಧನ್ಯವಾದಗಳು ಸಲ್ಲಿಸುತ್ತೇನೆ, ನಾನು ಭೇಟಿ ನೀಡಿದ ಗ್ರಾಮಗಳಲ್ಲಿ ಸಮಸ್ಯೆಗಳಿದ್ದರೆ ಪಟ್ಟಿ ಮಾಡಿ ನನಗೆ ಮಾಹಿತಿ ನೀಡಿ, ಸಾಧ್ಯವಾದಷ್ಟು ಎಲ್ಲವನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಅತ್ತಿಗೋಡು ನಿಂದ ಕಿತ್ತೂರು ಹೋಗುವ ಮುಖ್ಯರಸ್ತೆಯ ಕೆರೆಯನ್ನು ಅಗಲೀಕರಣ ಮಾಡಿಕೊಡಬೇಕು, ತಂದ್ರೆಗುಡಿ ಕೊಪ್ಪಲು ಗ್ರಾಮದ ದೊಡ್ಡಮ್ಮತಾಯಿ ದೇವಾಲಯದ ಅಭಿವೃದ್ಧಿಗೆ, ಕೆಳಗನಹಳ್ಳಿ ಗ್ರಾಮದ ದ್ವಾರದ ಕೆರೆಗೆ ಬ್ರಿಡ್ಜ್ ಮಾಡಿಸಲು, ಗ್ರಾಮದ ಪರಿಮಿತಿಯಲ್ಲಿ ಸಿ.ಸಿ ರಸ್ತೆ ಮಾಡಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ.ವೆಂಕಟೇಶ್ ಸಂಬಂಧಪಟ್ಟ ಇಲಾಖೆಯವರು ಬಳಿ ಚರ್ಚಿಸಿ, ಹಂತ ಹಂತವಾಗಿ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ವಡ್ಡರಹಳ್ಳಿ, ಕೆಳಗನಹಳ್ಳಿ ದೊಡ್ಡಕೊಪ್ಪಲು, ಎನ್. ಶೆಟ್ಟಹಳ್ಳಿ, ಬಾವಲಾಳು, ನಾಗರಘಟ್ಟ, ಹಂಡಿತವಳ್ಳಿ, ತಮ್ಮಡಹಳ್ಳಿ, ಹಾಗೂ ಕಿತ್ತೂರು ಗ್ರಾಮಗಳಲ್ಲಿ ಸಿ.ಸಿ ರಸ್ತೆ, ಡಾಂಬರೀಕರಣ, ಬಸ್ ನಿಲ್ದಾಣ ಉದ್ಘಾಟನೆ, ಅಂಬೇಡ್ಕರ್ ಭವನ ಶಂಕು ಸ್ಥಾಪನೆ, ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸಚಿವರು, ಚಾಲನೆ ನೀಡಿದರು.
ಗ್ಯಾರಂಟಿ ಯೋಜನೆ ಅಧ್ಯಕ್ಷ ನಿತೀನ್ ವೆಂಕಟೇಶ್,ಮೈಮುಲ್ ನಿರ್ದೇಶಕ ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಹಮದ್ ಜಾನ್ ಬಾಬು, ಡಿ.ಟಿ ಸ್ವಾಮಿ, ಸರಸ್ವತಿ, ತಹಸೀಲ್ದಾರ್ ನಿಸರ್ಗಪ್ರಿಯಾ, ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ಸುನೀಲ್ ಕುಮಾರ್, ಪಂಚಾಯಿತಿ ಅಧ್ಯಕ್ಷ ರಾಜೇಗೌಡ,ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಶಿವಣ್ಣ, ಅಭಿಯಂತರ ರಂಗಯ್ಯ, ಮಂಜುನಾಥ್, ವೆಂಕಟೇಶ್, ದಿನೇಶ್,ಮಲ್ಲಿಕಾರ್ಜುನ,ಲವ, ಅಹಮ್ಮದ್, ಕೃಷ್ಣ ಮೂರ್ತಿ, ನವೀನ್,ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ, ಕೃಷಿ ಇಲಾಖೆ ಪ್ರಸಾದ್,ಅಬಕಾರಿ ಇಲಾಖೆ ವೆಂಕಟೇಶ್, ಉಪ ತಹಶೀಲ್ದಾರ್ ಶಶಿಧರ್, ಕಂದಾಯ ನಿರೀಕ್ಷಕ ಆಜ್ಮಲ್ ಷರೀಫ್, ಪಿಡಿಒ ಮನು,ಮಲ್ಲೇಶ್ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.