ಗ್ರಾಮೀಣ ಪ್ರತಿಭೆಗಳಿಗೆ ಸರಿಯಾದ ಮಾರ್ಗದರ್ಶನ ಸಿಕ್ಕಿದರೆ ಗುರಿ ಮುಟ್ಟಲು ಸಾಧ್ಯ: ಬಿಕೆಆರ್

ಸಂಜೆವಾಣಿ ವಾರ್ತೆ
ಚಾಮರಾಜನಗರ.ಜ.24:-
ಗ್ರಾಮೀಣ ಪ್ರತಿಭೆಗಳಿಗೆ ಸರಿಯಾದ ಮಾರ್ಗದರ್ಶನ ಸಿಕ್ಕಿದರೆ ಹಾಗೂ ಶ್ರಮಪಟ್ಟರೆ ಗುರಿ ಮುಟ್ಟಲು ಸಾಧ್ಯ ಎಂದು ಎಪಿ ಎಂಸಿ ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್ ತಿಳಿಸಿದರು
ಅವರು ರಾಷ್ಟ್ರ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಖೋ ಖೋ ಪಂದ್ಯಾವಳಿಯಲ್ಲಿ ತಂಡವನ್ನು ಗೆಲ್ಲಿಸಿ ಗಮನಾರ್ಹ ಸಾಧನೆ ಮಾಡಿದ ತಾಲೂಕಿನ ಸಿದ್ದಯನಪುರ ಗ್ರಾಮದ ಕ್ರೀಡಾಪಟು ಚಂದನ್ ಅವರನ್ನು ಅವರ ಹುಟ್ಟೂರಿನಲ್ಲಿ ಸನ್ಮಾನಿಸಿ ಮಾತನಾಡಿದರು.


ಗುರಿ ಸಾಧನೆಗೆ ಬಡತನ ಸಿರಿತನ ಯಾವುದೂ ಅಡ್ಡಿಬರಲ್ಲ ಮುಂದೆ ಗುರಿ ಹಿಂದೆ ಗುರು ಇದ್ದರೆ ಯಶಸ್ಸು ಸಿಗಲಿದೆ ಇದಕ್ಕೆ ಖೋ ಖೋ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ತಂಡದ ಜಯಕ್ಕೆ ಕಾರಣವಾಗಿ ಗಮನಾರ್ಹ ಸಾಧನೆ ಮಾಡಿದ ಚಂದನ್ ಒಂದು ಸ್ಪಷ್ಟ ಉದಾರಣೆ ಎಂದು ತಿಳಿಸಿದರು. ಕ್ರೀಡೆಯಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡಲಿ ಹಾಗೆಯೇ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು ಇಂತಹ ಪ್ರತಿಭೆಗಳಿಗೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಪೆÇ್ರೀತ್ಸಾಹ ಹಾಗೂ ಉತ್ತಮ ತರಬೇತಿ ನೀಡಿದರೆ ಇನ್ನಷ್ಟು ಸಾಧಿಸಲು ಸಹಾಯಕವಾಗುತ್ತದೆ ಎಂದರು. ಯುವಕರು ನಾಯಕತ್ವ ಗುಣ ಪಡೆಯಲು ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿ ಕೊಳ್ಳಲು ಚಂದನ್ ಇತರರಿಗೆ ಸ್ಪೂರ್ತಿಯಾಗಿದ್ದಾನೆ ಎಂದು ಶ್ಲಾಘಿಸಿದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಚಂದನ್ ನನ್ನ ಇಂದಿನ ಸಾಧನೆಗೆ ನನ್ನ ಕುಟುಂಬ ಶಾಲೆಯ ಶಿಕ್ಷಕರು ಗ್ರಾಮಸ್ಥರ ಪೆÇ್ರೀತ್ಸಾಹ ಕಾರಣ ಎಂದರಲ್ಲದೆ ಇದೇ ಪೆÇ್ರೀತ್ಸಾಹ ಮುಂದುವರಿದರೆ ಕ್ರೀಡೆಯಲ್ಲಿ ಇನ್ನಷ್ಟು ಸಾಧನೆ ಮಾಡಿ ದೇಶ ರಾಜ್ಯ ಜಿಲ್ಲೆ ಹುಟ್ಟೂರಿಗೆ ಹೆಸರು ತರುತ್ತೇನೆ ಎಂದರು ಜಿಲ್ಲಾಡಳಿತ ಕ್ರೀಡಾ ಇಲಾಖೆ ಸಂಘ ಸಂಸ್ಥೆಗಳು ನನ್ನ ಸಾಧನೆಯನ್ನು ಮೆಚ್ಚಿ ಗೌರವಿಸುತ್ತಿರುವುದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ತಿಳಿಸಿದರು.


ಗ್ರಾಮದ ಮುಖಂಡರಾದ ಎಸ್.ಆರ್. ಗೋವಿಂದರಾಜು, ಹನುಮಂತು, ನೀರು ಬಳಕೆದಾರರ ಸಂಘದ ಅಧ್ಯಕ್ಷ ಗೋವಿಂದರಾಜು, ಗ್ರಾಮದ ಯಜಮಾನರುಗಳಾದ ಚನ್ನಂಜಯ್ಯ, ಮಲ್ಲಿಕಾರ್ಜುನ, ಚಿನ್ನಸ್ವಾಮಿ, ಮುಖಂಡರಾದ ಸೋಮಣ್ಣ, ಮಾಜಿ ಗ್ರಾಪಂ ಉಪಾಧ್ಯಕ್ಷ ನಂಜುಂಡಸ್ವಾಮಿ, ಚಂದನ್ ಅವರ ತಂದೆ ಪ್ರಕಾಶ್, ತಾಯಿ ಶೋಭಾ ಹಾಗೂ ಗ್ರಾಮಸ್ಥರು ಹಾಜರಿದ್ದರು.