ಗ್ರಾಮಾಂತರ ಪ್ರದೇಶಗಳಲ್ಲಿ ಬೇಸಿಗೆ ಶಿಬಿರ ಆಯೋಜನೆ ಶ್ಲಾಘನೀಯ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಮೇ.19:-
ಗ್ರಾಮಾಂತರ ಪ್ರದೇಶಗಳಲ್ಲಿ ಬೇಸಿಗೆ ಶಿಬಿರ ಆಯೋಜನೆ ಶ್ಲಾಘನೀಯ ಎಂದು ಆಶ್ರಯ ಸಮಿತಿ ಅಧ್ಯಕ್ಷರಾದ ನಿತಿನ್ ವೆಂಕಟೇಶ್ ತಿಳಿಸಿದರು.


ಪಟ್ಟಣದ ನಕ್ಷತ್ರ ಡ್ಯಾನ್ಸ್ ಸ್ಟುಡಿಯೋ ವತಿಯಿಂದ ಡಿ.ದೇವರಾಜು ಅರಸು ಭವನದಲ್ಲಿ ನಡೆದ 4ನೇ ವರ್ಷದ ಬೇಸಿಗೆ ಶಿಬಿರ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಮಕ್ಕಳಲ್ಲಿರುವ ಹಲವು ಬಗೆಯ ವಿಶೇಷ ಪ್ರತಿಭೆಗಳನ್ನು ಹೊರ ತರಲು ಬೇಸಿಗೆ ಶಿಬಿರ ಸಹಕಾರಿಯಾಗಲಿದ್ದು ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಬೇಸಿಗೆ ಶಿಬಿರಗಳು ಪ್ರಸ್ತುತ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿಯೂ ಆಯೋಜನೆಯಾಗುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.


ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷೆ ಕೆ.ಆರ್ ನಿರೂಪ ರಾಜೇಶ್ ಮಾತನಾಡಿ ಮಕ್ಕಳು ಪಠ್ಯದ ಕಲಿಕೆ ಜೊತೆಗೆ ಪಠ್ಯತರ ಚಟುವಟಿಕೆಗಳಲ್ಲಿಯೂ ಭಾಗವಹಿಸುವುದರಿಂದ ಅವರಲ್ಲಿರುವ ಪ್ರತಿಭೆಗಳು ಹೊರಬಂದು ಸಾಧನೆಯ ಗುರಿ ತಲುಪಲು ಸಹಕಾರಿಯಾಗಲಿದೆ ಎಂದರು.


ಮುಖ್ಯ ಶಿಕ್ಷಕರಾದ ಲಕ್ಕಣ್ಣ ಮಾತನಾಡಿ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಉತ್ತಮ ಸಂಸ್ಕಾರ ಅಳವಡಿಸಿಕೊಂಡರೆ ಅವರ ಬೌದ್ಧಿಕ ಶಕ್ತಿ ಪ್ರಗತಿಯಾಗಲಿದೆ, ಮೊಬೈಲ್ ಮತ್ತು ಟಿವಿಯನ್ನು ಉತ್ತಮ ಕಲಿಕೆಗಾಗಿ ಬಳಸಿದಾಗ ನಮ್ಮ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬಹುದು ಎಂದರು.


ನಕ್ಷತ್ರ ಡ್ಯಾನ್ಸ್ ಸ್ಟುಡಿಯೋ ಅಧ್ಯಕ್ಷೆ ಭವ್ಯ ಮಂಜುನಾಥ್ ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ಪಟ್ಟಣದಲ್ಲಿ ಬೇಸಿಗೆ ಶಿಬಿರ ಆಯೋಜನೆ ಮೂಲಕ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳನ್ನು ಪೆÇ್ರೀತ್ಸಾಹಿಸಲಾಗುತ್ತಿದೆ ಎಂದರು.


ಈ ವೇಳೆ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ರಂಜಿಸಿತು, ಸ್ವಾಗತ ಗೀತೆಗೆ ಚಿತ್ರಕಲ ಶಿಕ್ಷಕ ಪವನ್ ಲಕ್ಕಣ್ಣ ಬಿಡಿಸಿದ ಗಣೇಶನ ಚಿತ್ರ ಎಲ್ಲರ ಮೆಚ್ಚುಗೆ ಪಾತ್ರವಾಯಿತು, ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಹಾಗೂ ಸರ್ಟಿಫಿಕೇಟ್ ವಿತರಿಸಲಾಯಿತು, ಈ ಸಂದರ್ಭ ಪುರಸಭಾ ಸದಸ್ಯ ರಾಜೇಶ್, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಮಂಜುನಾಥ್, ಮುಖಂಡರಾದ ಸಚಿನ್, ಮುಕುಂದ, ಕೃಷ್ಣಪ್ಪ, ಮಹೇಶ್, ನೃತ್ಯ ಸಂಯೋಜಕರಾದ ಪ್ರಸನ್ನ, ಸಂಸ್ಥೆಯ ಶ್ರೇಯ, ಚಂದನ, ಕಾರುಣ್ಯ, ಚೈತ್ರ, ವಾಸವಿ, ತುಳಸಿ, ಪ್ರಾರ್ಥನಾ ಹಾಗೂ ಪೆÇೀಷಕರು ಇದ್ದರು.