
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.01: ನಗರದ ಜೋತಿಷಿ ಗುರುರಾಜ ಕುಲಕರ್ಣಿ ಅವರು ರಚಿಸಿದ ಗೌತಮ ಸೂರ್ಯ ಸಿದ್ದಾಂತ ಪಂಚಾಂಗ ಲೋಕಾರ್ಪಣೆ ಮತ್ತು ಸಮಾಜದ ಗಣ್ಯರಿಗೆ ಸನ್ಮಾನ ಸಮಾರಂಭ ನಿನ್ನೆ ಸಂಜೆ ನಗರದ ರಾಘವ ಕಲಾಮಂದಿರದಲ್ಲಿ ನಡೆಯಿತು.
ವಿದ್ಯಾ ಸಿಂಧು ಮಾಧವ ತೀರ್ಥರು ಪಂಚಾಂಗ ಬಿಡುಗಡೆ ಮಾಡಿದರು. ಹಿರಿಯ ಲೆಕ್ಕ ಪರಿಶೋಧಕ ಜಯಪ್ರಕಾಶ್ ಜೆ. ಗುಪ್ತ ಅಧ್ಯಕ್ಷತೆವಹಿಸಿದ್ದರು.
ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅವ್ವಾರು ಮಂಜುನಾಥ, ಶಂಕರ ಮಠದ ಆಡಳಿತಾಧಿಕಾರಿ ಬಿಕೆಬಿಎನ್ ಮೂರ್ತಿ, ಡಾ.ಬಿ.ಕೆ.ಸುಂದರ್, ಇಸ್ಕಾನ್ ನ ಸೂರ್ಯನಾಥ ದಾಸ್, ನಿವೃತ್ತ ಪ್ರಾಂಶುಪಾಲ ಹರಿಕುಮಾರ್, ಹಿರಿಯ ಪತ್ರಕರ್ತ ಎಂ.ಅಹಿರಾಜ್ ಮೊದಲಾದವರನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಯ್ತು.
ನಂತರ ಪಂಡಿತ್ ವಿದ್ಯಾಭೂಷಣ ಅವರಿಂದ ಶ್ರೀಕೃಷ್ಣನ ದಾಸವಾಣಿ ನಡೆಯಿತು.



























