ಬೆಂಗಳೂರು, ಆ.1:- ನಗರದ ಗೌತಮ್ ನರ್ಸಿಂಗ್ ಮಹಾವಿದ್ಯಾಲಯದ ವತಿಯಿಂದ ಇಂದು ನಡೆದ ದೀಪೋತ್ಸವ ಮತ್ತು ಮೊದಲ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ಮಣಿಪಾಲ ಆಸ್ಪತ್ರೆಯ ನರ್ಸಿಂಗ್ ಮುಖ್ಯಸ್ಥೆ ಜೀಜಿರಾಜನ್ ಅವರು ಭಾಗವಹಿಸಿ ನರ್ಸಿಂಗ್ ತರಬೇತಿಯಲ್ಲಿ ಇರಬೇಕಾದ ರೊಗಿಗಳಿಗೆ ಆದ್ಯತೆ ಮತ್ತು ನರ್ಸಿಂಗ್ ವಿದ್ಯಾರ್ಥಿಗಳ ಕಲಿಕಾ ವಿಚಾರವನ್ನು ತಿಳಿಸಿದರು. ಸಂಸ್ಥೆಯ ಮುಖ್ಯಸ್ಥರಾದ ಡಾ. ಎ.ಟಿ.ಎಸ್. ಗಿರಿಯವರು ಮಾತನಾಡಿ, ರೋಗಿಗಳ ಜೊತೆ ಮೃಧುಸ್ವಭಾವ ಮತ್ತು ರೋಗಿಗಳ ಆರೈಕೆಯನ್ನು ಶ್ರದ್ಧೆಯಿಂದ ಮಾಡಬೇಕೆಂದು ತಿಳಿಸಿದರು. ಅಧ್ಯಕ್ಷೆ ಲೀಲಾವತಿ, ಆಡಳಿತಾಧಿಕಾರಿ ಸತೀಶ್ ಕುಮಾರ್, ಮಣಿಮಾಲ, ರೀನಾ ಮತ್ತಿತರರು ಉಪಸ್ಥಿತರಿದ್ದರು.

































