ಗೋಪೂಜೆ ಸಲ್ಲಿಸಿ, ಬಕೆಟ್ ವಿತರಿಸಿದ ಶಾಸಕ ಶ್ರೀವತ್ಸ

ಸಂಜೆವಾಣಿ ನ್ಯೂಸ್
ಮೈಸೂರು: ಜ.16:
– ಸಂಕ್ರಾಂತಿಯ ವಿಶೇಷವಾಗಿ ಶಾಸಕ ಶ್ರೀವತ್ಸ ಗೋಪಾಲಕರಿಗೆ ಉಚಿತವಾಗಿ ಹಾಲುಕರೆಯುವ ಬಕೆಟ್ ಗಳನ್ನು ವಿತರಿಸಿದರು.
ಕನಕಗಿರಿಯ ಸುಯೇಜ್ ಫಾರಂನ ಬಳಿ ನಡೆದ ಸರಳ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದೂಗಳ ಪವಿತ್ರ ಹಬ್ಬ ಸಂಕ್ರಾಂತಿ ಆಗಿದೆ. ಈಗ ಜನರಿಗೆ ಗೋವು ಬದುಕಿನ ಭಾಗವಾಗಿವೆ. ಹೈನೋದ್ಯಮ ಹಲವರ ಜೀವನಾಡಿಆಗಿದೆ ಎಂದರು.


ನಗರದಲ್ಲಿ ಗೋಪಾಲಕರ ಹಲವು ಸಮಸ್ಯೆಗಳಿದ್ದು, ಅವುಗಳ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷ ಗೋಪಾಲರಾಜ ಅರಸು, ಪ್ರಧಾನ ಕಾರ್ಯದರ್ಶಿ ಜೈಶಂಕರ್, ಜಯರಾಂ, ಕ್ಷೇತ್ರದ ರೈತ ಮೋರ್ಚಾದ ಅಧ್ಯಕ್ಷ ಡಿ.ಪಿ.ಸುರೇಶ್, ಪ್ರಧಾನ ಕಾರ್ಯದರ್ಶಿ ಹೇಮಂತ್ ಕುಮಾರ್ ಇನ್ನಿತರರು ಭಾಗವಹಿಸಿದ್ದರು.