ಗೋದ್ರೆಜ್‌ನಲ್ಲಿರಿಸಿದ್ದ ನಗ-ನಗದು ಕಳವು

ಸುಳ್ಯ:ಮನೆಯ ಗೋದ್ರೇಜ್‌ನಲ್ಲಿರಿಸಿದ್ದ ನಗ-ನಗದು ಕಳವಾಗಿರುವ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಯ ಕಸಬಾ ಗ್ರಾಮದ ಕೆ.ಎ.ಅಬ್ದುಲ್ ಬಶೀರ್ ಈ ಬಗ್ಗೆ ಸುಳ್ಯ ಠಾಣೆಗೆ ದೂರು ನೀಡಿದ್ದಾರೆ. ಕೆ.ಎ.ಅಬ್ದುಲ್ ಬಶೀರ್ ಅವರು ವಾಸದ ಮನೆಯಲ್ಲಿ ಸೆ. ೭ ರಂದು ಮನೆಯ ಗೋದ್ರೇಜ್‌ನಲ್ಲಿ ಸುಮಾರು ರೂ.೨೫ ಸಾವಿರ ನಗದು ಹಾಗೂ ಚಿನ್ನಾಭರಣಗಳನ್ನು ಇಟ್ಟಿದ್ದರು. ಸೆ.೧೧ರಂದು ನೋಡಿದಾಗ ಹಣ ರೂ.೨೫ ಸಾವಿರ ಹಾಗೂ ೨೦ ಗ್ರಾಂ ತೂಕದ ಚಿನ್ನದ ಕಾಲು ಚೈನು ಕಾಣೆಯಾಗಿರುವುದು ಕಂಡುಬಂದಿದೆ. ಕಳವಾಗಿರುವ ನಗದು ಹಾಗೂ ಚಿನ್ನದ ಒಟ್ಟು ಅಂದಾಜು ಮೌಲ್ಯ ರೂ.೧,೪೫,೦೦೦ ಆಗಿದೆ. ಕಳವಾದ ವಸ್ತುಗಳ ಬಗ್ಗೆ ಕುಟುಂಬಸ್ಥರು ಹಾಗೂ ನೆರೆ ಮನೆಯವರ ಮೇಲೆ ಅನುಮಾನ ವ್ಯಕ್ತಪಡಿಸಲಾಗಿದೆ. ಕಳವಾದ ವಸ್ತಗಳನ್ನು ವಾಪಾಸು ಇಡುತ್ತಾರೆ ಎಂದು ಅಂದಾಜಿಸಿ ತಡವಾಗಿ ದೂರು ನೀಡಲಾಗಿದೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಶುಕ್ರವಾರ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.