ಗೋಡಂಬಿ(ಗೇರುಬೀಜ)ಯ ಉಪಯೋಗಗಳು

ನಾವು ಉಪಯೋಗಿಸುವ ಗೋಡಂಬಿ, ಗೇರುಹಣ್ಣಿಗೆ ಅಂಟಿಕೊಂಡಂತೆ ಇರುತ್ತದೆ. ಗೇರುಹಣ್ಣು ಹಳದಿ ಹಾಗೂ ಕೆಂಪು ಬಣ್ಣಗಳಲ್ಲಿ ಬಿಡುತ್ತದೆ. ಗೇರುಬೀಜ ಈ ಹಣ್ಣಿಗೆ ಅಂಟಿ-ಕೊಂಡಿರುತ್ತದೆ.ಈಗೇರಿನ ಒಳಗಡೆ ಇರುವುದು ಗೇರು ಸೊಪ್ಪು ಇದನ್ನೇ ನಾವು ಗೋಡಂಬಿ ಎಂದುಕರೆಯುವುದು. ಇದರ ಮರ, ಬೇರು, ತೊಗಟೆ, ಎಲೆ, ಹೂ, ಹಣ್ಣು, ಎಲ್ಲವೂ ಔಷಧೀಯವಾಗಿ ಬಳಕೆ-ಯಾಗುತ್ತದೆ. ಇದರ ಬೇರು ವಿರೇಚನಗುಣವುಳ್ಳದ್ದಾಗಿದ್ದು, ತೊಗಟೆಯಿಂದ ಬರುವ ಕೆಂಪುರಸವು ತುರಿಕೆಯನ್ನು ನಿಲ್ಲಿಸುವಶಕ್ತಿಯುಳ್ಳದ್ದಾಗಿದೆ.ಇದು ಹೆಚ್ಚು ಕ್ಯಾಲೋರೀಸ್‍ಗಳನ್ನು ಹೊಂದಿದ್ದು, ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಶರೀರಕ್ಕೆ ಒದಗಿಸುವುದಲ್ಲದೆ, ಬಿ 5, -6, -1 2 ಇದರಲ್ಲಿ ಹೇರಳವಾಗಿವೆ. ಇದು
ಔಷಧೀಯಗಳ ಭಂಡಾರವೇ ಆಗಿದೆ.

  1. ಗೇರುಹಣ್ಣನ್ನು ಸೌ ವಿ ಸತ್ತಿದರೆ, ಜಂತುಹುಳುಗಳನ್ನು ನಿಯಂತ್ರಿಸಬಹುದು.
  2. ಚರ್ಮರೋಗ, ಹುಣ್ಣುಗಳು, ಮೂಲವ್ಯಾಧಿ, ಆಮಶಂಕೆ ಇವುಗಳ ನಿವಾರಣೆಗೇರುಹಣ್ಣಿನ ಸೇವನೆಯಿಂದ ಸಾಧ್ಯವಾಗುತ್ತದೆ.
  3. ಈ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ವಿಟಮಿನ್ ಸಿ ಕೊರತೆಯಿಂದ ಬರುವಂತಹ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗುತ್ತದೆ.
  4. ವಸಡಿನಲ್ಲಿ ಉಂಟಾಗುವ ಹುಣ್ಣುಗಳ ನಿವಾರಣೆಗೆ ಈ ಗೇರುಹಣ್ಣನ್ನು ಸಕ್ಕರೆಪಾಕದಲ್ಲಿ ಕುದಿಸಿತೆಗೆದಿಟ್ಟುಕೊಂಡುತಿನ್ನುತ್ತಾ ಬಂದರೆ, ವಸಡಿನ ಹುಣ್ಣು ಗುಣವಾಗುತ್ತದೆ.
  5. ಹೃದಯಕ್ಕೆ ಹಿತಕರ: ಬೇರೆ ಬೀಜಗಳಿಗೆ ಹೋಲಿಸಿದರೆ ಇದರಲ್ಲಿ ಕೊಬ್ಬಿನ ಅಂಶ ಕಡಿಮೆ ಇದೆ.
    6.ರಕ್ತದ ಒತ್ತಡಕ್ಕೆ ಮೆಗ್ನಿಷಿಯಂ ಅಧಿಕವಾಗಿರುವುದರಿಂದ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.
  6. ಕಪ್ಪುಕೂದಲಿಗೆ: ತಾಮ್ರದಅಂಶ ಇದರಲ್ಲಿ ಅಧಿಕವಾಗಿರುವುದರಿಂದ ಕೂದಲಿಗೆ ಕಪ್ಪು ಬಣ್ಣವನ್ನು ಒದಗಿಸುತ್ತದೆ.
    8.ಮೂಳೆಗಳಿಗೆ: ಕ್ಯಾಲ್ಸಿಯಂ ಮತ್ತು ಮೆಗ್ನಿಷಿಯಂ ಅಧಿ ಕವಾಗಿರುವುದರಿಂದ ಇದರನಿರಂತರಸೇವನೆಯಿಂದ ಮೂಳೆಗಳು ಗಟ್ಟಿಯಾಗುತ್ತವೆ. ನರಮಂಡಲವನ್ನು ಜೋಪಾನ ಮಾಡುವುದರ ಮುಖಾಂತರ ರಕ್ತನಾಳಗಳನ್ನು ಹಾಗೂ ಮಾಂಸಖಂಡಗಳನ್ನು ಸುಸ್ಥಿತಿಯಲ್ಲಿಡುತ್ತದೆ.
  7. ಅರೆತಲೆನೋವಿಗೆ: ಅರೆತಲೆನೋವಿಗೆ ಇದು ಬಹಳ ಉಪಯೋಗಕರ.
    ತೂಕ 10. ಕೊಬ್ಬಿನ ಅಂಶಕ್ಕೆ: ಕೊಬ್ಬಿನ ಅಂಶ ಇದರಲ್ಲಿ ಕಡಿಮೆ ಇರುವುದರಿಂದ ಹೆಚ್ಚಾಗದಂತೆ ಕಾಪಾಡುತ್ತದೆ. ಇದರಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಜಾಸ್ತಿಮಾಡಿ, ಕೆಟ್ಟಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಿಂದ ಹೃದಯಕ್ಕೂಸಹಒಳ್ಳೆಯದು.
  8. ಗೌರಮ್ಮನ ಆರೋಗ್ಯಸೂತ್ರಗಳು ಪ್ರಿಸ್ಟ್ ಬುಕ್ಸ್ ಪ್ರೈವೇಟ್ ಲಿಮಿಟೆಡ್‍ವತಿಯಿಂದ ಪ್ರಕಟಣೆ
    2.ಡಾ.ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತುಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ.
    9535383921