
ಸುಳ್ಯ:ಗುತ್ತಿಗಾರು ಸೈಂಟ್ ಮೇರಿಸ್ ಚರ್ಚ್‌ನ ನೂತನ ಧರ್ಮಗುರುಗಳಾಗಿ ಫಾದರ್ ತೋಮಸ್ ಪಾರೇಕಾಟ್ಟಿಲ್ ಆಗಮಿಸಿದ್ದಾರೆ.
ಗುತ್ತಿಗಾರು ಮತ್ತು ನೆಟ್ಟಣ ಎರಡೂ ಕಡೆ ಇವರು ಧರ್ಮಗುರುಗಳಾಗಿ ಕೆಲಸ ಮಾಡಲಿದ್ದಾರೆ. ಕಾರ್ಕಳ ಬಜಗೋಳಿ ಸೈಂಟ್ ತೋಮಸ್ ಚರ್ಚ್‌ನಲ್ಲಿ ಫಾದರ್ ಆಗಿದ್ದವರು. ವರ್ಗಾವಣೆಗೊಂಡು ಇಲ್ಲಿಗೆ ಬಂದಿದ್ದು ಇವರು ಮೂಲತಹ ಕಡಬದ ಕುಟ್ರುಪ್ಪಾಡಿಯವರು. ಇವರು ಮಂಗಳೂರು, ಕುಂದಾಪುರ, ಬೈಂದೂರು, ಜೆಡ್‌ಕಲ್, ಮುದೂರು, ಬೆಳ್ತಂಗಡಿ ಗಂಡಿಬಾಗಿಲು, ಕೊಡಗು ಸಿದ್ದಾಪುರ, ಬೆಳ್ತಂಗಡಿಯ ತೋಟತ್ತಾಡಿ, ಕೇರಳದ ಕಾಸರಗೋಡು ಜಿಲ್ಲೆಯ ಕೆಲಕಡೆ ಫಾದರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.

























