(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.11: ಇಲ್ಲಿನ ಗುಗ್ಗರಹಟ್ಟಿಯ ಮನೆಯೊಂದರಲ್ಲಿ ದಾಖಲೆ ಇಲ್ಲದೆ ಸಂಗ್ರಹಿಸಿದ್ದ ಎಂಟು ಟನ್ ತಂಬಾಕನ್ನು ಗ್ರಾಮೀಣ ಠಾಣೆಯ ಪೊಲೀಸರು ಕೆಲ ದಿನಗಳ ಹಿಂದೆ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಆಂದ್ರಪ್ರದೇಶ ಆಲೂರಿನಿಂದ ತರಲಾಗಿರುವ ತಂಬಾಕನ್ನು ಗುಗ್ಗರಹಟ್ಟಿಯ ಹನುಮಾನ್ ಎಂಬ ವ್ಯಕ್ತಿಯ ಕಟ್ಟಡದಲ್ಲಿ ಸಂಗ್ರಹಿಸಿ ಇಡಲಾಗಿತ್ತು.
ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದಾಗ ಇದು ಅಕ್ರಮ ಸಂಗ್ರಹ ಎಂದು ತಿಳಿದಿದೆ
ಈ ಸಂಬಂಧ ಹನುಮಾನ್ ಮತ್ತು ಆಂದ್ರಪ್ರದೇಶದ ಗಿದ್ದಲೂರಿನ ಕಾಶಿರಾವ್ ಎಂಬ ಇಬ್ಬರನ್ನು ಬಂಧಿಸಲಾಗಿದೆ.

























