ಸಂಜೆವಾಣಿ ವಾರ್ತೆ
ಗುಂಡ್ಲುಪೇಟೆ ಆ 17 :- ಕರ್ನಾಟಕ ರಾಜ್ಯ ಮೂಲಭೂತ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ (ರಿ)ಯ ತೆರಕಣಾoಬಿ ಯಲ್ಲಿರುವ ಪ್ರಧಾನ ಕಛೇರಿ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಮಹಾತ್ಮಾ ಗಾಂಧೀಜಿ ಹಾಗೂ ಅಂಬೇಡ್ಕರ್ ರವರುಗಳ ಭಾವಚಿತ್ರ ಗಳಿಗೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು. ನಂತರ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಲಕ್ಷ್ಮೀಮಹೇಶ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ನಂತರ ಲಕ್ಷ್ಮಿ ಮಹೇಶ್ ಅವರು ಮಾತನಾಡಿ ಬ್ರಿಟೀಷರಿಂದ ಸ್ವಾತಂತ್ರ ಪಡೆದಿರುವ ನಮ್ಮ ದೇಶ ಸದ್ಯ ಭ್ರಷ್ಟಾಚಾರದ ದಾಸ್ಯದಲ್ಲಿಸಿಕ್ಕಿ ನರಳುತ್ತಿದೆ, ಬಡ ಮತ್ತು ಮಧ್ಯಮ ವರ್ಗದವರು ಇದರಿಂದ ದುಸ್ತರವಾದ ಜೀವನ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ,
ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲೂ ಪ್ರತಿಯೊಂದು ಹಂತದಲ್ಲೂ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳುವ ಪರಿಸ್ಥಿತಿಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವ ಪ್ರಾಮಾಣಿಕ ಪ್ರಯತ್ನವನ್ನ ನಮ್ಮ ಸಮಿತಿ ನಡೆಸುತ್ತಿರುವುದಾಗಿ ತಿಳಿಸಿದರು.
ನಂತರ ಮಾತನಾಡಿದ ರಾಜ್ಯ ಸಹಕಾರ್ಯದರ್ಶಿ ಕೆಂಪರಾಜು ರವರು ಖಾಸಗಿ ಶಾಲೆಗಳನ್ನ ತೆರೆಯಲು ಸರ್ಕಾರ ಹೆಚ್ಚಿನಸಂಖ್ಯೆಯಲ್ಲಿ ಅನುಮತಿ ನಡುತ್ತಿರುವುದರಿಂದ ಸರ್ಕಾರಿ ಶಾಲೆಗಳು ನಶಿಸುತ್ತಿದೆ. ಸರ್ಕಾರಿ ಆಸ್ಪತ್ರೆಗಳನ್ನು ಉನ್ನತಿಕರಿಸಿ ಖಾಸಗಿ ಆಸ್ಪತ್ರೆಗಳ ಸುಲಿಗೆ ಕಡಿವಾಣ ಹಾಕಬೇಕು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬೊಮ್ಮನಹಳ್ಳಿ ಮಂಜುನಾಥ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಆರ್ ರೇಖಾ, ಉಪಾಧ್ಯಕ್ಷ ಸವಿತಾ, ಗುಂಡ್ಲುಪೇಟೆ ತಾಲ್ಲೂಕು ಅಧ್ಯಕ್ಷ ಕಿಲಗೆರೆ ವಾಸು, ಪದಾಧಿಕಾರಿಗಳಾದ ಲಕ್ಕೂರು ಕುಮಾರ, ರಾಜು, ಮಂಜುನಾಥ್, ಶಿವಯ್ಯ, ಪ್ರಸನ್ನ, ಹೋಬಳಿ ಅಧ್ಯಕ್ಷರು ರತ್ನಶೇಖರ್ ಹಾಗೂ ಅತಿಥಿಗಳಾಗಿ ಶಾಂತಿಸಂಗಪ್ಪ ಹಾಗೂ ಐಯಣ್ಣ ಹಾಗೂ ಹಲವರು ಉಪಸ್ಥಿತರಿದ್ದರು.




























