ಗುಂಡೇಟು ತಗುಲಿದ ಕಡವೆ ಮೃತದೇಹ ಪತ್ತೆ

ಸುಳ್ಯ:ಗುಂಡೇಟು ತಗುಲಿ ಮೃತಪಟ್ಟ ಸ್ಥಿತಿಯಲ್ಲಿ ಕಡವೆ ಯೊಂದರ ಮೃತ ದೇಹ ಪೆರಾಜೆ – ನಿಡ್ಯಮಲೆ ರಸ್ತೆಯ ಸಮೀಪ ಪತ್ತೆಯಾಗಿದೆ.
ರಾತ್ರಿ ವೇಳೆ ಕಡವೆಗೆ ಗುಂಡು ಹಾರಿಸಿದ್ದು, ಇದು ಬಂದು ರಸ್ತೆ ಬಲಿ ಬಂದು ಸತ್ತಿದೆ. ಬೆಳಗ್ಗಿನ ಜಾವ ಸ್ಥಳೀಯರಿಗೆ ಈ ದೃಶ್ಯ ಕಂಡು ಬಂದಿದ್ದು ಕೂಡಲೇ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಸಂಪಾಜೆ ಅರಣ್ಯಾಧಿಕಾರಿಗಳು ಕಡವೆಯ ಮೃತ ದೇಹದ ಪರಿಶೀಲನೆ ನಡೆಸಿದ್ದು ಪಶುವೈದ್ಯಾಧಿಕಾರಿಗಳು ಮರಣೋತರ ಪರೀಕ್ಷೆ ಮಾಡಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ಹಲವರನ್ನು ತನಿಖೆಗೆ ಒಳಪಡಿಸಿದ್ದಾರೆ.