ವಾಷಿಂಗ್ಟನ್,ಆ,28:- ಅಮೆರಿಕಾದ ಮಿನ್ನಿಯಾ ಪೋಲಿಸ್‍ನ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿ 17 ಜನರು ಗಾಯಗೊಂಡಿರುವ ಘಟನೆ ನಡೆದಿದ್ದು ಗಾಯಗೊಂಡ ಎಲ್ಲ ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕ್ಯಾಥೋಲಿಕ್ ವಿರೋಧಿ ದ್ವೇಷ ಅಪರಾಧವೇ ಮಕ್ಕಳ ಮೇಲೆ ಗುಂಡಿನ ದಾಳಿ ನಡೆಸಲು ಕಾರಣ ಎನ್ನಲಾಗಿದ್ದಯ ಘಟನೆ ಸಂಬಂಧ ಎಫ್ ಬಿಐ ತನಿಖೆ ನಡೆಯುತ್ತಿದೆ.
“ಈ ಗುಂಡಿನ ದಾಳಿಯಲ್ಲಿ ದೇಶೀಯ ಭಯೋತ್ಪಾದನೆ ಮತ್ತು ಕ್ಯಾಥೋಲಿಕರನ್ನು ಗುರಿಯಾಗಿಸಿಕೊಂಡು ನಡೆದ ದ್ವೇಷ ಅಪರಾಧ ಎಂದು ಎಫ್‍ಬಿಐ ನಿರ್ದೇಶಕ ಕಾಶ್ ಪಟೇಲ್ ಮಾಹಿತಿ ಹಂಚಿಕೊಂಡಿದ್ಧಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಶಾಲೆಯಲ್ಲಿ ಮಕ್ಕಳು ಬೆಳಿಗ್ಗೆ ಮಕ್ಕಳು ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ದಾಳಿಕೋರನೊಬ್ಬ ಗುಂಡು ಹಾರಿಸಿದಾಗ 8 ಮತ್ತು 10 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಬಳಿಕ ಸ್ವಯಂ ಪ್ರೇರಿತವಾಗಿ ದಾಳಿಕೋರ ಗುಂಡು ಹಾರಿಸಿಕೊಂಡ ಹಿನ್ನೆಲೆಯಲ್ಲಿ ಆತ ಮೃತಪಟ್ಟಿದ್ದಾರೆ. ಮೃತಪಟ್ಟ ದಾಳಿಕೋರನ್ನು 23 ವರ್ಷದ ರಾಬಿನ್ ವೆಸ್ಟ್‍ಮನ್ ಎಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ಧಾರೆ
ಮೊದಲ ಅಮೇರಿಕನ್ ಪೆÇಪ್ ಪೆÇಪ್ ಲಿಯೋ ಘಿIಗಿ ಅವರು ಮಕ್ಕಳ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು ಗಾಯಗೊಂಡ ಮಂದಿ ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ
ಪೆÇಲೀಸ್ ಮುಖ್ಯಸ್ಥ ಬ್ರಿಯಾನ್ ಒ’ಹಾರಾ ಪ್ರತಿಕ್ರಿಯೆ ನೀಡಿ ಮುಗ್ಧ ಮಕ್ಕಳ ಮೇಲೆ ನಡೆದ ದಾಳಿ ಅತ್ಯಂತ ಖಂಡನೀಯ, ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ
“ಮಕ್ಕಳ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವುದು ಸಂಪೂರ್ಣ ಕ್ರೌರ್ಯ ಮತ್ತು ಹೇಡಿತನದ ಪರಮಾವಧಿ, ಇದು ಕ್ಷಮೆಗೆ ಅನರ್ಹ ಎಂದು ಹೇಳಿದ್ದು ಗುಂಡಿನ ದಾಳು ಬಗ್ಗೆ ಮಿನ್ನಿಯಾ ಪೆÇಲಿಸ್ ಇಲಾಖೆ ಫೆಡರಲ್ ಏಜೆನ್ಸಿಗಳ ಬೆಂಬಲದೊಂದಿಗೆ ಬಹು ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ, ಘಟನೆಗೆ ನಿಖರವಾದ ಮಾಹಿತಿ ಕಲೆ ಹಾಕಲಾಗುವುದು ಎಂದಿದ್ದಾರೆ.
ದಾಳಿಕೋರ ಮೂರು ಬಂದೂಕುಗಳನ್ನು ಬಳಸಿ ಕಿಟಕಿಗಳ ಮೂಲಕ ಹಲವು ಭಾರಿ ಗುಂಡ ಹಾರಿಸಿದ್ದಾರೆ. ಒಂದು ರೈಫಲ್, ಒಂದು ಶಾಟ್‍ಗನ್ ಮತ್ತು ಒಂದು ಪಿಸ್ತೂಲ್. ಪೆÇಲೀಸರು ಸ್ಥಳದಲ್ಲಿ ಹೊಗೆ ಬಾಂಬ್ ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ಧಾರೆ.
























