Home ಜಿಲ್ಲೆ ಮೈಸೂರು ಗುಂಡಾಲ್ ಜಲಾಶಯದಲ್ಲಿ ಹುಲಿ ಸಾವು ಪ್ರಕರಣ ಬೇಟೆಗಾರನ ಬಂಧನ

ಗುಂಡಾಲ್ ಜಲಾಶಯದಲ್ಲಿ ಹುಲಿ ಸಾವು ಪ್ರಕರಣ ಬೇಟೆಗಾರನ ಬಂಧನ

ಸಂಜೆವಾಣಿ ವಾರ್ತೆ
ಹನೂರು.ಫೆ.21 :-
ಬಿ.ಆರ್.ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವಿಭಾಗ ವ್ಯಾಪ್ತಿಯ ಗುಂಡಾಲ್ ಜಲಾಶಯದ ದಡದಲ್ಲಿ ಬೃಹತ್ ಗಾತ್ರದ ಗಂಡು ಹುಲಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಟೆಗಾರನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.


ಕೊಳ್ಳೇಗಾಲ ತಾಲೂಕಿನ ಕೊಂಗರಹಳ್ಳಿ ಗ್ರಾಮದ ಕುಮಾರ್ (35) ಬಂಧಿತ ವ್ಯಕ್ತಿ. ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಯಳಂದೂರು ವನ್ಯಜೀವಿ ಉಪ ವಿಭಾಗದ ಕೊಳ್ಳೇಗಾಲ ವನ್ಯಜೀವಿ ವಲಯದ ವ್ಯಾಪ್ತಿಯ ಗುಂಡಾಲ್ ಜಲಾಶಯದ 1ನೇ ತೂಬಿನ ಹತ್ತಿರ ಗಂಡು ಹುಲಿ ಮೃತದೇಹ ಪತ್ತೆಯಾಗಿತ್ತು.


ಈ ಸಂಬಂಧ ಅರಣ್ಯಾಧಿಕಾರಿಗಳು ತನಿಖೆ ಕೈಗೊಂಡು ಕುಮಾರ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಿದ್ದಾರೆ. ಹುಲಿ ಸಾವು ಪ್ರಕರಣದ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೇಟೆಗಾರರ ಕುಮಾರ್ ಇತರೆ ಪ್ರಾಣಿಗಳನ್ನು ಬೇಟೆಯಾಡಲು ಉರುಳು ಹಾಕಿದ್ದು ಇಲ್ಲಿ ಉರುಳಿಗೆ ಹುಲಿ ಸಿಕ್ಕಿ ಬಿದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.