ಗಾಳಿ ಇಲ್ಲ ಮಳೆ ಇಲ್ಲ ಮರ ಬಿತ್ತು

oplus_10485760

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಫೆ.05: ಜೋರಾದ ಮಳೆ ಗಾಳಿ ಇಲ್ಲದಿದ್ದರೂ ನಗರದ ಹಳೇ ತಹಶಿಲ್ದಾರರ ಕಚೇರಿ ಆವರಣದೊಳಗಿದ್ದ ಮರವೊಂದು ಇಂದು ಅಕಸ್ಮಿಕವಾಗಿ ಬಿದ್ದಿತು. ಇದರಿಂದ ಯಾವುದೇ ಹಾನಿಯಾಗಿಲ್ಲ.

ಅಲ್ಲಿಯೇ ಅನೇಕ ಜನ ಟೀ ಕುಡಿಯುತ್ತಿದ್ದರು. ಅನತಿದೂರದಲ್ಲಿನ ಮರ ಬೀಳುತ್ತಿದ್ದುದನ್ನು ಕಂಡು ಬೆರಗಾದರು. ಆದರೆ ಯಾರಿಗೂ ತೊಂದರೆಯಾಗಲಿಲ್ಲ. ಮರ ಬಿದ್ದ ರಭಸಕ್ಕೆ ವಿದ್ಯುತ್ ಕಂಬದ ವೈರ್ ಗಳು ಕಿತ್ತು ಕೊಂಡು ಹೋದವು

ಘಟನೆ ಬಳಿಕ ಸಾರ್ವಜನಿಕರಲ್ಲಿ ಕೆಲಕಾಲ ಆತಂಕ ಉಂಟಾಯಿತು. ಮಾಹಿತಿ ತಿಳಿದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರವನ್ನು ತೆರವು ಗೊಳಿಸುವ ಕಾರ್ಯ ನಡೆಸಿದರು ವಾಹನ ಸಂಚಾರಕ್ಕೆ ಅಲ್ಪ ಕಾಲ ಅಡಚಣೆ ಉಂಟಾಗಿತ್ತು.