ಬೇಕಾಗುವ ಸಾಮಗ್ರಿಗಳು
*ಬೋನ್‌ಲೆಸ್ ಚಿಕನ್ ೧/೨
*ದಪ್ಪ ಮೆಣಸಿನಕಾಯಿ -೪
*ಈರುಳ್ಳಿ – ೨ ದಪ್ಪಗೆ ಹೆಚ್ಚಿದ್ದು
*ಬೆಳ್ಳುಳ್ಳಿ – ೧೨ ಎಸಳು, ಸಣ್ಣಗೆ
ಹೆಚ್ಚಿದ್ದು
*ಈರುಳ್ಳಿ ಹೂ ೧
*ಬ್ಯಾಡಗಿ ಮೆಣಸಿನಕಾಯಿ ೫
*ಟೊಮೆಟೊ ಸಾಸ್ -೧ ಚಮಚ
*ಕಾರ್ನ್‌ಫ್ಲೋರ್ ೨ ಟೇಬಲ್ ಸ್ಪೂನ್
*ಎಣ್ಣೆ ೧೦೦ ೨.
ಮಾಡುವ ವಿಧಾನ:ಬ್ಯಾಡಗಿ ಮೆಣಸಿನಕಾಯಿಯನ್ನು ನೀರಿನಲ್ಲಿ ನೆನೆಸಿ ರುಬ್ಬಿ ರೆಡ್‌ಚಿಲ್ಲಿ ಪೇಸ್ಟ್ ತಯಾರಿಸಿಕೊಳ್ಳಿ. ಪ್ಯಾನ್‌ಗೆ ಎಣ್ಣೆ ಹಾಕಿ ಬೆಸಿ ಮಾಡಿ. ಬೆಳ್ಳುಳ್ಳಿ ಹಾಕಿ ಹಸಿವಾಸನೆ ಹೋಗುವವರೆಗೂ ಪ್ರೈ ಮಾಡಿ. ಜೊತೆಗೆ ಬೋನ್ ಲೆಸ್ ಚಿಕನ್, ರೆಡ್ ಚಿಲ್ಲಿ ಪೇಸ್ಟ್, ಉಪ್ಪು ಹಾಕಿ ಕಲಸಿ, ಮುಚ್ಚಳ ಮುಚ್ಚಿ ಬೇಯಿಸಿ. ನಂತರ ಟೊಮೆಟೋ ಸಾಸ್, ನೀರಿನಲ್ಲಿ ಕಲಸಿದ ಕಾರ್ನ್ ಫ್ಲೋರ್, ಈರುಳ್ಳಿ, ದಪ್ಪ ಮೆಣಸಿನಕಾಯಿ ಹಾಕಿ ಮಿಕ್ಸ್ ಮಾಡಿ ಕೊನೆಯಲ್ಲಿ ಈರುಳ್ಳಿ ಹೂ ಹಾಕಿದರೆ ಗಾರ್ಲಿಕ್ ಚಿಕನ್ ರೆಡಿ.