ತಾರೀಕು ೦೩.೦೮.೨೦೨೫ ರಂದು ಪವಿತ್ರ ಆತ್ಮರ ದೇವಾಲಯ ಇದರ ಸ್ಪೋಟ್ಸ್ ಕ್ಲಬ್ ವತಿಯಿಂದ ಗಾಧ್ಯಂತ್ ಉಡ್ಕಾಣಾ೦ – ೨೦೨೫ ಎಂಬ ಕೆಸರು ಗದ್ದೆಯಲ್ಲಿ ಆಟೋಟ ಸ್ಪರ್ಧೆ ನಡೆಯಿತು. ಕಾರ್‍ಯಕ್ರಮವನ್ನು ಪವಿತ್ರ ಆತ್ಮರ ದೇವಾಲಯ ಧರ್ಮ ಗುರುಗಳಾದ ಫಾ. ಲಿಯೋ ಲೋಬೊ ರವರು ಉದ್ಘಾಟಿಸಿದರು. ಯುವ ಪೀಳಿಗೆಗೆ ಕೃಷಿಯ ಅಗತ್ಯತೆ ಹಾಗೂ ಹಿಂದೆ ಕೃಷಿಯಿಂದ ಜನರು ಜೀವನ ನಡೆಸಿ ಪ್ರಕೃತಿಯಿಂದ ಒಲವು ತೋರಿಸಿದ್ದ ಬಗ್ಗೆ ತಿಳಿ ಹೇಳಿದರು ಹಾಗೂ ಕಾರ್‍ಯಕ್ರಮವನ್ನು ಆರ್ಶೀವದಿಸಿದರು, ಮುಖ್ಯ ಅತಿಥಿಯಾಗಿ ಮಂಗಳೂರು ಮಹಾನಗರ ಪಾಲಿಕೆ ನಿಕಟ ಪೂರ್ವ ಕಾರ್ಪೊರೇಟರ್ ಶ್ರೀ ಪ್ರವಿಣ್ ಚಂದ್ರ ಅಳ್ಚ ರವರು ಹಾಜರಿದ್ದು, ಹಿಂದಿನ ದಿನಗಳಲ್ಲಿ ಕೃಷಿ ಕಾರ್‍ಯದ ಬಗ್ಗೆ ಮೆಲುಕು ಹಾಕಿ ಅದರ ಪವಿತ್ರತೆಯನ್ನು ಬಗ್ಗೆ ಹೇಳಿದರು. ಅತಿಥಿಗಳಾಗಿ ಜನತಾ ವ್ಯಾಯಮ ಶಾಲೆಯ ಅಧ್ಯಕ್ಷರಾದ ದೀಪಕ್ ಬಜಾಲ್, ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯ ಆಡಳಿತ ಸದಸ್ಯರಾದ ಶಶಿಧರ ಕೊಟ್ಟಾರಿ, ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷರಾದ ಮೌರಿಸ್ ಡಿಸೋಜ, ಕಾರ್‍ಯಧ್ಯಕ್ಷಿಯಾಗಿ ಲಿಡ್ವಿನ್ ಲೋಬೊ, ಆಯೋಗಗಳ ಸಂಚಲಕರಾದ ಲಿಸ್ಟನ್ ಡಿಸೋಜ, ಆಟೋಟ ಸ್ಪರ್ಧೆ ನಡೆಸಲು ಸ್ಥಳಾವಕಾಶ ನೀಡಿದ ಗದ್ದೆಯ ಮಾಲೀಕರಾದ ಕೇಶವ ಭಂಡಾರಿ, ಜನತಾ ವ್ಯಾಯಮ ಶಾಲೆಯ ಹಿರಿಯ ಗುರುಗಳಾದ ಹರೀಶ್ ಚಂದ್ರ ನಾಯಕ್ ರವರು ಉಪಸ್ಥಿದರಿದ್ದರು.
ನಂತರ ದಿನವಿಡಿ ಸೇರಿದ ಎಲ್ಲಾ ಜನರಿಗೆ ವಿವಿಧ ಹಂತದ ಕ್ರೀಡೆಗಳನ್ನು ನಡೆಸಲಾಯಿತು. ಸೇರಿದ ಎಲ್ಲಾ ಜನರಿಗೆ ಊಟ ಚಹಾದ ವ್ಯವಸ್ಥೆ ಮಾಡಲಾಗಿದ್ದು, ಅಂತಿಮವಾಗಿ ಬಹುಮಾನ ವಿತರಣೆಯೊಂದಿಗೆ ಕಾರ್‍ಯಕ್ರಮ ಕೊನೆಗೊಳಿಸಲಾಯಿತು.


































