ಗಣೇಶೋತ್ಸವ; ಅಂದ್ರಾಳ್ ನಲ್ಲಿ ಅನ್ನದಾನ  ರಕ್ತ ದಾನ ಶಿಬಿರ.

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಸೆ01 : ನಗರದ 8  ಅಂದ್ರಾಳ್ ನ ಜನತಾ ಕಾಲೋನಿ 2 ಕ್ರಾಸ್ ನಲ್ಲಿ  ಗಣೇಶ್ ಗ್ರೂಪ್ ಅಪ್ ಬಾಯ್ಸ್  ಯುವಕರ ಸಂಘದಿಂದ ಬಿಎಂಸಿಆರ್ ಸಿ

 ಆಸ್ಪತ್ರೆಯ ರಕ್ತ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಗಣೇಶೋತ್ಸವದ ನಿಮಿತ್ತ ನಿನ್ನೆ ರಕ್ತದಾನ ಶಿಬಿರ ನಡೆಸಿ ಯುವಕರು ರಕ್ತದಾನ ಮಾಡಿದರು.

ನಂತರ ಸಾರ್ವಜನಿಕವಾಗಿ ಅನ್ನದಾನ ಕಾರ್ಯಕ್ರಮ ಏರ್ಪಡಿಸಿದ್ದರು. ಸಂಜೆ ವಿಘ್ನ ನಿವಾರಕನನ್ನು ಅದ್ಧೂರಿ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಯ್ತು.

 ಯುವಕರಾದ ವಿನಯ್, ಮಠಿಕಂಟ, ವೇಣು, ಗೌತಮ್, ವಂಶಿ, ಕಾರ್ತಿಕ್ , ಸುರೇಶ್, ಭುವೇಂದ್ರ, ಶಿವಕುಮಾರ್, ವಿಶಾಲ್, ತಿಪ್ಪೇಶ್ವಾಮಿ, ರಾಮಚಂದ್ರ ವಾರ್ಡಿನ ಇನ್ನು ಅನೇಕ ಮುಖಂಡರು, ಯುವಕರು, ಮಹಿಳೆಯರು ಭಾಗವಹಿಸಿದ್ದರು.