
ಲಕ್ಷ್ಮೇಶ್ವರ,ಜ27: ತಾಲೂಕು ಆಡಳಿತ ವತಿಯಿಂದ 77 ನೇ ಗಣರಾಜ್ಯೋತ್ಸವನ್ನು ಉಮಾ ವಿದ್ಯಾಲಯದ ಮೈದಾನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ತಹಶೀಲ್ದಾರ ಧನಂಜಯವರು ಧ್ವಜಾರೋಹಣ ನೆರವೇರಿಸಿ ಬಳಿಕ ಮಾತನಾಡಿದ ಅವರು, ಭಾರತದಲ್ಲಿ ಪ್ರಜಾಪ್ರಭುತ್ವ ಉದಯವಾದ ಐತಿಹಾಸಿಕ ದಿನವಾದ ಜನವರಿ 26 ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ದಿನವಾಗಿದೆ ಎಂದರು.
ಈ ಸಂದರ್ಭದಲ್ಲಿ ಪಿಎಸ್‍ಐ ನಾಗರಾಜ ಗಡದ,ಗ್ರೇಟ್ 2 ತಹಶೀಲ್ದಾರ ಮಂಜುನಾಥ್ ಅಮವಾಸಿ, ಪಂಚಗ್ಯಾರಂಟಿ ಅಧ್ಯಕ್ಷ ನಾಗರಾಜ ಮಡಿವಾಳರ, ಈಶ್ವರ ಮೇಡ್ಲೇರಿ, ಟಾಕಪ್ಪ ಸಾತಪೂತೆ, ಚಂದ್ರಶೇಖರ ನರಸಮ್ಮನವರ ಕೃಷ್ಣಪ್ಪ ಧರ್ಮರ್,ಹಾಗೂ ತಾಲೂಕ ಆಡಳಿತ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.























