
(ಸಂಜೆವಾಣಿ ವಾರ್ತೆ)
ಪಾರ್ಲ್ಸ, ಜೂ.15: ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಉತ್ತಮ ಕೆಲಸ ಮಾಡಿದ್ದಕ್ಕಾಗಿ ಕರ್ನಾಟಕದ ಗಂಗಾವತಿಯ ಅಪೂರ್ವಾ ಬಸೂರ್ ಅವರಿಗೆ ‘ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಯೋಜನಾ ಅಧಿಕಾರಿ ಪ್ರಶಸ್ತಿ’ ಒಲಿದಿದೆ
ಇವರು 2022ನೇ ಬ್ಯಾಚ್ನ ಐಎಎಸ್ ಅಧಿಕಾರಿ ಆಗಿದ್ದಾರೆ. ಬುಡಕಟ್ಟು ಅಭಿವೃದ್ಧಿ ಯೋಜನೆಗ ಳಲ್ಲಿ ಅಸಾಧಾರಣ ನಾಯಕತ್ವ, ನಾವೀನ್ಯತೆ ಮತ್ತು ಅವುಗಳ ಪ್ರಭಾವವನ್ನು ಗುರುತಿಸಿ, ಮಹಾರಾಷ್ಟ್ರದ ಜವ್ಹಾರ್ನ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಸಂಸ್ಥೆಯಲ್ಲಿ ಯೋಜನಾಧಿಕಾರಿಯಾಗಿರುವ ಅಪೂರ್ವಾ ಬಸೂರ್ ಅವರಿಗೆ ದೆಹಲಿಯ ವಿಜ್ಞಾನ ಭವನದಲ್ಲಿ ಬುಧವಾರ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದು 5 ಲಕ್ಷ ರು. ನಗದು ಬಹುಮಾನವನ್ನು ಒಳ ಗೊಂಡಿದೆ.
































