ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.03:- ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಚಾಮರಾಜನಗರ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿದ ವೆಂಕಟಯ್ಯನಛತ್ರ ಫ್ರೆಂಡ್ಸ್ ಕ್ಲಬ್ ತಂಡದ ಕ್ರೀಡಾಪಟುಗಳು ಖೋ-ಖೋ ಕ್ರೀಡೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಎರಡು ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಆಟಗಾರರಿಗೆ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಿದರು.
ಕಳೆದ 10-15 ವರ್ಷಗಳಿಂದ ವೆಂಕಟಯ್ಯನಛತ್ರ ಗ್ರಾಮದ ಫ್ರೆಂಡ್ಸ್ ಕ್ಲಬ್ ಯುವಕರು ಖೋ-ಖೋ ಕ್ರೀಡೆಯಲ್ಲಿ ತನ್ನದೇ ಆದ ಸಾಧನೆಯನ್ನು ಮಾಡುತ್ತಿದ್ದಾರೆ, ಖೋ-ಖೋ ಕ್ರೀಡೆಯನ್ನು ತಮ್ಮ ಗ್ರಾಮದ ತವರು ಕ್ರೀಡೆಯಾಗಿ ಮಾಡಿಕೊಂಡಿರುವ ಇವರು ಸತತವಾಗಿ ಗೆಲವನ್ನು ಸಾಧಿಸಿಕೊಂಡು ಬರುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಫ್ರೆಂಡ್ಸ್ ಕ್ಲಬ್‍ನ ಸದಸ್ಯರಾದ ಸತೀಶ್, ರಾಜು ಹೊಸೂರು, ಮಹದೇವ ಪ್ರಸಾದ್, ಮಣಿಕಂಠ, ಪ್ರಸಾದ್, ಚಂದು, ಕೆಂಪರಾಜು, ವೆಂಕಟೇಶ, ನಿತಿನ್, ಮಹದೇವಸ್ವಾಮಿ, ಚೇತನ್, ರಾಹುಲ್, ಚಂದ್ರಶೇಖರ್, ಅಭಿ ಸೇರಿದಂತೆ ಕ್ರೀಡಾಪಟುಗಳು ಹಾಜರಿದ್ದರು.




























