ಚಂಡೀಗಢ, ಆ.19 –ಪಂಜಾಬ್ ಪೆÇಲೀಸರು ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಪ್ರಮುಖ ಕಾರ್ಯಾಚರಣೆ ನಡೆಸಿದ್ದು, ಇದರಲ್ಲಿ ಒಂದು ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದ್ದು, ಹಲವಾರು ಆರೋಪಿಗಳನ್ನು ಬಂಧಿಸಲಾಗಿದೆ. ಜಲಂಧರ್‍ನಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಪೆÇಲೀಸರು ಇಬ್ಬರು ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ತಮ್ಮ ಸಹಚರರ ಮೂಲಕ ಹೆಚ್ಚಿನ ಶಸ್ತ್ರಾಸ್ತ್ರಗಳನ್ನುಹೊಂದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಘಟನೆಯು ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಪ್ರಮುಖ ಭಯೋತ್ಪಾದಕ ಸಂಚನ್ನು ವಿಫಲಗೊಳಿಸಲು ಸಹಾಯ ಮಾಡಿದೆ
ಜಲಂಧರ್‍ನಲ್ಲಿ ಖಲಿಸ್ತಾನಿ ಪರ ಸಂಘಟನೆ ಬಾಬರ್ ಖಲ್ಸಾ ಇಂಟರ್‍ನ್ಯಾಷನಲ್‍ನ ಇಬ್ಬರು ಕಾರ್ಯಕರ್ತರನ್ನು ಬಂಧಿಸಿದ ನಂತರ ಪಂಜಾಬ್ ಪೆÇಲೀಸರ ಕೌಂಟರ್ ಇಂಟೆಲಿಜೆನ್ಸ್ ಒಂದು ಹ್ಯಾಂಡ್ ಗ್ರೆನೇಡ್ ವಶಪಡಿಸಿಕೊಂಡಿದೆ ಎಂದು ಪೆÇಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಮಂಗಳವಾರ ತಿಳಿಸಿದ್ದಾರೆ.
ಬಂಧಿತ ಕಾರ್ಯಕರ್ತರಲ್ಲಿ ಒಬ್ಬನ ಹೆಸರು ಹೃತಿಕ್ ನರೋಲಿಯಾ, ಮತ್ತೊಬ್ಬ ಅಪ್ರಾಪ್ತ ವಯಸ್ಕ ಎನ್ನಲಾಗಿದೆ.
ಆರೋಪಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ, ಅವರ ಸಹಚರ ವಿಶ್ವಜೀತ್‍ನನ್ನು ಮಲೇಷ್ಯಾಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಕೋಲ್ಕತ್ತಾದಲ್ಲಿ ಬಂಧಿಸಲಾಗಿದೆ ಮತ್ತು ಜಾಕ್ಸನ್‍ನನ್ನು ನಕೋದರ್‍ನಲ್ಲಿ ಬಂಧಿಸಲಾಗಿದೆ, ಅವರಿಂದ 86 ಪಿ ಗ್ರೆನೇಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಲ್ಲಾ ಆರೋಪಿಗಳು ಕೆನಡಾ ಮೂಲದ ಬಿಕೆಐ ಮಾಸ್ಟರ್‍ಮೈಂಡ್‍ಗಳಾದ ಜೀಶನ್ ಅಖ್ತರ್ ಮತ್ತು ಅಜಯ್ ಗಿಲ್ ಅವರ ಸೂಚನೆಗಳ ಮೇರೆಗೆ ಕೆಲಸ ಮಾಡುತ್ತಿದ್ದರು ಎಂದು ಪೆÇಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.
ಆರೋಪಿಗಳಾದ ವಿಶ್ವಜೀತ್ ಮತ್ತು ಜಾಕ್ಸನ್ ಜುಲೈ ಕೊನೆಯ ವಾರದಲ್ಲಿ ತಮ್ಮ ಸಹಚರರ ಮೂಲಕ ಬಿಯಾಸ್‍ನಿಂದ ಎರಡು ಹ್ಯಾಂಡ್ ಗ್ರೆನೇಡ್‍ಗಳನ್ನು ಖರೀದಿಸಿದ್ದರು, ಅದರಲ್ಲಿ ಒಂದು 10 ದಿನಗಳ ಹಿಂದೆ ಎಸ್‍ಬಿಎಸ್ ನಗರದ ಮದ್ಯದ ಅಂಗಡಿಯಲ್ಲಿ ಸ್ಫೋಟಗೊಂಡಿದೆ.
ಅಮೃತಸರದಲ್ಲಿ ಎಫ್‍ಐಆರ್ ದಾಖಲಾಗಿದೆ.
ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ, ಫಿರೋಜ್‍ಪುರ ಕೌಂಟರ್ ಇಂಟೆಲಿಜೆನ್ಸ್ ಇಬ್ಬರು ಬಿಕೆಐ ಕಾರ್ಯಕರ್ತರನ್ನು ಬಂಧಿಸುವ ಮೂಲಕ ಪಾಕಿಸ್ತಾನದ ಐಎಸ್‍ಐ ಬೆಂಬಲಿತ ಭಯೋತ್ಪಾದಕ ಹರ್ವಿಂದರ್ ರಿಂಡಾ ರೂಪಿಸಿದ್ದ ಪ್ರಮುಖ ಭಯೋತ್ಪಾದಕ ಸಂಚನ್ನು ವಿಫಲಗೊಳಿಸಿದೆ.
























