ಖಮೇನಿ ಹತ್ಯೆಯಿಂದ ಸಂಘರ್ಷ ಅಂತ್ಯ :ನೆತನ್ಯಾಹು

ಟೆಲ್ ಅವಿವ್,ಜೂ.17-ಇರಾನ್‍ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಕೊಲ್ಲುವುದರಿಂದ ಎರಡೂ ರಾಷ್ಟ್ರಗಳ ನಡುವಿನ ಸಂಘರ್ಷ ಕೊನೆಗೊಳ್ಳುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇರಾನ್ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕ್ರಮಗಳನ್ನು ಅವರು ಸಮರ್ಥಿಸಿಕೊಂಡಿದ್ದಾರೆ , ಇದು ಸಂಘರ್ಷವನ್ನು ಹೆಚ್ಚಿಸುವ ಬದಲು ಕೊನೆಗೊಳಿಸುವ ಗುರಿಯನ್ನು ಹೊಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.


ಪ್ರಧಾನಿ ನೆತನ್ಯಾಹು ಅವರ ಈ ಹೇಳಿಕೆಗೂ ಮುನ್ನ, ಇರಾನ್‍ನ ಸರ್ವೋಚ್ಚ ನಾಯಕನನ್ನು ಗುರಿಯಾಗಿಸುವ ಇಸ್ರೇಲ್‍ನ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ ಎಂಬ ವರದಿಗಳು ಬಂದಿದ್ದವು.ಏಕೆಂದರೆ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ ಎಂದು ಡೊನಾಲ್ಡ್ ಟ್ರಂಪ್ ಅನಿಸಿಕೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸಂದರ್ಶನವೊಂದರಲ್ಲಿ ಇರಾನ್‍ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯು ಉಭಯ ದೇಶಗಳ ನಡುವೆ ನಡೆಯುತ್ತಿರುವ ಯುದ್ಧ ಮತ್ತು ಉದ್ವಿಗ್ನತೆಯನ್ನು ಕೊನೆಗೊಳಿಸುತ್ತದೆ ಎಂದು ಹೇಳಿದ್ದಾರೆ. ಇಸ್ರೇಲ್‍ನ ಮಿಲಿಟರಿ ಕ್ರಮವು ಸಂಘರ್ಷವನ್ನು ಉತ್ತೇಜಿಸುವ ಗುರಿಯನ್ನು ಹೊಂದಿಲ್ಲ, ಬದಲಿಗೆ ಅದನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.


ಇರಾನ್ ಶಾಶ್ವತವಾಗಿ ಯುದ್ಧವನ್ನು ಬಯಸುತ್ತದೆ
ಎಂದು ನೆತನ್ಯಾಹು ಆರೋಪಿಸಿದ್ದಾರೆ.ಅದು ನಮ್ಮನ್ನು ಪರಮಾಣು ಯುದ್ಧದತ್ತ ತಳ್ಳುತ್ತಿದೆ. ಇಸ್ರೇಲ್ ಅದನ್ನು ನಿಲ್ಲಿಸಲು ಪ್ರಯತ್ನಿಸುತ್ತಿದೆ ಎಂದು ನೆತನ್ಯಾಹು ಹೇಳಿದ್ದಾರೆ. ದುಷ್ಟತನದ ವಿರುದ್ಧ ನಿಲ್ಲುವ ಮೂಲಕ ಮಾತ್ರ ನಾವು ಅದನ್ನು ತಡೆಯಬಹುದು ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ ಆದರೆ ಇಸ್ರೇಲ್ ಇರಾನ್‍ನ ಪರಮಾಣು ವಿಜ್ಞಾನಿಗಳನ್ನು ಗುರಿಯಾಗಿಸಿಕೊಂಡಿದೆ. ಅವರು ಹೇಳಿದ್ದಾರೆ ಇದು ಮೂಲತಃ ಹಿಟ್ಲರ್‍ನ ಪರಮಾಣು ತಂಡ ಎಂದು ಕಿಡಿಕಾರಿದ್ದಾರೆ.


ಇತ್ತ ಇರಾನ್ ಅಧ್ಯಕ್ಷ ಟ್ರಂಪ್ ನಿಜವಾಗಿಯೂ ರಾಜತಾಂತ್ರಿಕತೆಯನ್ನು ಬಯಸಿದರೆ ಮತ್ತು ಈ ಯುದ್ಧವನ್ನು ನಿಲ್ಲಿಸಲು ಆಸಕ್ತಿ ಹೊಂದಿದ್ದರೆ, ಮುಂದಿನ ಹಂತಗಳು ಮುಖ್ಯವಾಗುತ್ತವೆ. ಇಸ್ರೇಲ್ ತನ್ನ ಮಿಲಿಟರಿ ಕ್ರಮವನ್ನು ತಕ್ಷಣವೇ ನಿಲ್ಲಿಸಬೇಕು, ಇಲ್ಲದಿದ್ದರೆ ನಮ್ಮ ಪ್ರತಿಕ್ರಿಯೆ ಮುಂದುವರಿಯುತ್ತದೆ. ನೆತನ್ಯಾಹು ಅವರ ಮೇಲೆ ಕೇವಲ ಒಂದು ಫೆÇೀನ್ ಕರೆಯ ಮೂಲಕ ಒತ್ತಡ ಹೇರಬಹುದು, ಇದು ರಾಜತಾಂತ್ರಿಕತೆಗೆ ದಾರಿ ತೆರೆಯಬಹುದು ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಎಕ್ಸ್ ಪೆÇೀಸ್ಟ್‍ನಲ್ಲಿ ಹೇಳಿದ್ದಾರೆ.


ವರದಿಯ ಪ್ರಕಾರ, ಟ್ರಂಪ್ ಇಸ್ರೇಲ್ ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಒತ್ತಾಯಿಸಲು ಅವರ ಮೇಲೆ ಒತ್ತಡ ಹೇರುವಂತೆ ಇರಾನ್ ಕತಾರ್, ಸೌದಿ ಅರೇಬಿಯಾ ಮತ್ತು ಒಮಾನ್‍ಗಳನ್ನು ಒತ್ತಾಯಿಸಿದೆ.
ವರದಿಯ ಪ್ರಕಾರ, ಇರಾನ್‍ನ ಪರಮೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರನ್ನು ಅವರ ಸುರಕ್ಷತೆಗಾಗಿ ಟೆಹ್ರಾನ್‍ನಲ್ಲಿರುವ ಭೂಗತ ಬಂಕರ್‍ಗೆ ಕಳುಹಿಸಲಾಗಿದೆ. ಅವರ ಕುಟುಂಬವೂ ಖಮೇನಿಯೊಂದಿಗೆ ಇದೆ. ಖಮೇನಿಯ ಉತ್ತರಾಧಿಕಾರಿ ಎಂದು ಪರಿಗಣಿಸಲಾದ ಅವರ ಮಗ ಮೊಜ್ತಬಾ ಕೂಡ ಇರಾನಿನ ನಾಯಕನ ಜೊತೆ ಇದ್ದಾರೆ.