Home ಜಿಲ್ಲೆ ಕ್ಷಯ  ರೋಗಿಗಳಿಗೆ ಸಲಾಂ ಇಂಡಿಯಾ ಪೌಂಡೇಷನ್  ವತಿಯಿಂದ ಪೌಷ್ಠಿಕ ದಾನ್ಯ ಕಿಟ್ ವಿತರಣೆ 

ಕ್ಷಯ  ರೋಗಿಗಳಿಗೆ ಸಲಾಂ ಇಂಡಿಯಾ ಪೌಂಡೇಷನ್  ವತಿಯಿಂದ ಪೌಷ್ಠಿಕ ದಾನ್ಯ ಕಿಟ್ ವಿತರಣೆ 

ಸಂಜೆವಾಣಿ ವಾರ್ತೆ

 ಹಗರಿಬೊಮ್ಮನಹಳ್ಳಿ. ಸೆ.01 ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಯಲ್ಲಿ ಮಂಗಳವಾರ 80 ಕ್ಷಯ ರೋಗಿಗಳಿಗೆ ಸಲಾಂ ಇಂಡಿಯಾ ಪೌoಡೇಷನ್  ವತಿಯಿಂದ ಪೌಷ್ಠಿಕ ದಾನ್ಯ ಕಿಟ್ ವಿತರಣೆ ಮಾಡಿದರು. 

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ  ಯು . ಕೆ. ಕೊಟ್ರೇಶ್ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ  ಪತ್ರಕರ್ತ ಬುಡ್ಡಿ ಬಸವರಾಜ್ ಮಾತನಾಡಿ ಕ್ಷಯ ರೋಗ ದೊಡ್ಡ ರೋಗ ಅಲ್ಲ ನಿಮ್ಮ ಚಟಗಳಿಂದ ನೀವು ದೂರ ಇದ್ದಾಗ ಮಾತ್ರ  ಗುಣ ಮುಖರಾಗಬಹುದು. ಜೊತೆಗೆ ಪೌಷ್ಠಿಕ ಆಹಾರ ನೀಡುವ ಮೂಲಕ ಸಲಾಂ ಇಂಡಿಯಾ ಪೌoಡೇಷನ್ ಮಾದರಿಯಾಗಿದೆ. ಹಿಂದೆ ಇಂತಹ ಹಲವಾರು ಸೇವೆ ಮಾಡುವ ಈ ಸಂಸ್ಥೆ ಯಲ್ಲಿ  ನಿಸ್ವಾರ್ಥ ಸೇವೆ ಮಾಡುವ ಇದಾಯಿತ್ ಒಬ್ಬ ಪ್ರಾಮಾಣಿಕ ವ್ಯಕ್ತಿ ಅಂದರು ತಪ್ಪುಲ್ಲ, ಇನ್ನು ಹಲವಾರು ಸೇವೆ ಗಳು ಬಡವರಿಗೆ ದೊರಕಲಿ ಎಂದರು.        

ಆಸ್ಪತ್ರೆ ಯ ಮುಖ್ಯ ವೈದ್ಯಧಿಕಾರಿ  ಡಾ. ಶಿವಕುಮಾರ್,  ಫಿಜಿಸನ್ ಡಾ. ವಿನಯ್ ಕುಮಾರ್,ಜಿಲ್ಲಾ  ಅರೋಗ್ಯ ನಿರೀಕ್ಷಣಾಧಿಕಾರಿ ಧರ್ಮನಗೌಡ ಮಾತನಾಡಿದರು.

ಕಾರ್ಯಕ್ರ ಮದ ಅಧ್ಯಕ್ಷತೆ ವಹಿಸಿ ಟಿ ಎಚ್ಒ ಡಾ.ಪ್ರವೀಣ್ ಕುಮಾರ್ ಮಾತನಾಡಿ ಕ್ಷಯ ರೋಗಿಗಳು ಮಧ್ಯದಲ್ಲೇ ಔಷಧ ನಿಲ್ಲಿಸದಂತೆ ನಿರಂತರವಾಗಿ ಅವರ ಆರೋಗ್ಯವನ್ನು ವಿಚಾರಿಸಿ, ಚಿಕಿತ್ಸೆ ಪೂರ್ಣಗೊಳಿಸಲು ಮಾನಸಿಕ ಧೈರ್ಯ ತುಂಬಬೇಕು.

ಖಾಸಗಿ ರಂಗ, ದಾಸೋಹ ಸಂಸ್ಥೆಗಳು ಮತ್ತು ಎನ್.ಜಿ.ಒಗಳ ಈ ಜಂಟಿ ಪಾಲುದಾರಿಕೆಯು ದೇಶದಲ್ಲಿ ಕ್ಷಯರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಅವರ ಬಹುದೊಡ್ಡ ಶಕ್ತಿಯಾಗಿದೆ ಎಂದರು. ಈ ಸಂದರ್ಭದಲ್ಲಿ  ಸಲಾಂ ಇಂಡಿಯಾ ಪೌoಡೇಷನ್ ಕಾರ್ಯಕರ್ತ  ಗುಜರಿ ಇದಾಯಿತ್, ಅರೋಗ್ಯ ನಿರೀಕ್ಷ ಶ್ರೀನಿವಾಸ್ ರೆಡ್ಡಿ,ಶಿವಲಿಂಗಪ್ಪ ಯಮುನಮ್ಮ ನಿರ್ವಹಿಸಿದರು. ಲಿಂಗರಾಜ್ ಯಾದವ್, ಆಂಬುಲೆನ್ಸ್ ನಜೀರ್,ಇದ್ದರು

hbh03