Home ಜಿಲ್ಲೆ ಮೈಸೂರು ಕ್ರೈಸ್ಟ್ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆ

ಕ್ರೈಸ್ಟ್ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆ

ಸಂಜೆವಾಣಿ ನ್ಯೂಸ್
ಮೈಸೂರು, ಏ.01:-
ಕರ್ನಾಟಕ ರಾಜ್ಯ ವೈಚಾರಿಕ ಚಿಂತಕರ ವೇದಿಕೆ ಶ್ರೀರಾಂಪುರದ ಕ್ರೈಸ್ಟ್ ಕಾಲೇಜಿನಲ್ಲಿ ಮಂಗಳವಾರ ವಿಶ್ವ ಮಹಿಳಾ ದಿನಾಚರಣೆ ಏರ್ಪಡಿಸಿತ್ತು.
ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಜಂಟಿ ಆಯುಕ್ತ ಡಾ.ಬಿ.ಟಿ.ಬಾಣೇಗೌಡ ಉದ್ಘಾಟಿಸಿದರು. ಪ್ರಾಂಶುಪಾಲ ಫಾ.ಜಿಂಟೋ ಜೋಸ್ ಅಧ್ಯಕ್ಷತೆ ವಹಿಸಿದ್ದರು. ಸಾಧಕರನ್ನು ನಗರಪಾಲಿಕೆ ಉಪ ಆಯುಕ್ತೆ ಪ್ರತಿಭಾ ಚಂದ್ರಶೇಖರ್ ಸನ್ಮಾನಿಸಿದರು. ವೇದಿಕೆಯ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್ ಪ್ರಾಸ್ತಾವಿಕ ಭಾಷಣ ಮಾಡಿದರು.


ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ವೇದರಾಜ್ ಕೂರಗಲ್, ಶ್ರೀ ವೇದವ್ಯಾಸ ಸೇವಾ ಟ್ರಸ್ಟ್ ಅಧ್ಯಕ್ಷೆ ಪನ್ನಗ ವಿಜಯಕುಮಾರ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಜಿಲ್ಲಾ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ಡಾ. ಕಾವೇರಿ ಪ್ರಕಾಶ್ ಮುಖ್ಯಅತಿಥಿಗಳಾಗಿದ್ದರು.


ಕೆ.ಆರ್.ಆಸ್ಪತ್ರೆಯ ಪ್ರಾಧ್ಯಾಪಕಿ ಡಾ.ಎ. ಮಂಜುಳಾದೇವಿ, ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ.ರೇಖಾ ಅರುಣ್ ಅವರಿಗೆ ಕರ್ನಾಟಕ ಗಾನವೈದ್ಯರತ್ನ, ಗಾಯಕಿಯರಾದ ಮೈಸೂರಿನ ತೇಜಾವತಿ, ನೀತು ಉಮೇಶ್, ಜಿ. ಪಲ್ಲವಿ ಪೈ, ಆನಗಟ್ಟಿಯ ಜ್ಞಾನವೇಣಿ ಅವರಿಗೆ ಕರ್ನಾಟಕ ಗಾನಕೋಗಿಲೆ, ಶ್ರೀರಾಂಪುರ ಗ್ರಾಪಂ ಮಾಜಿ ಸದಸ್ಯೆ ಕಮಲಮ್ಮ ನಟರಾಜ್, ಪೀಸ್ ಆಟೋ ಮತ್ತು ಟ್ಯಾಕ್ಸಿ ಅಸೋಸಿಯೇಷನ್ ಅಧ್ಯಕ್ಷೆ ಸೌಮ್ಯಾ ಆಟೋರಾಣಿ, ಭಾರತ್ ಭೀಮ್ ಸೇನೆ ಮಹಿಳಾ ಘಟಕದ ಅಧ್ಯಕ್ಷೆ ಮಹದೇವಮ್ಮ, ಮಹದೇವಪುರದ ಸಮಾಜ ಸೇವಕಿ ನಾಗರತ್ನಮ್ಮ ನಾಗರಾಜ್, ಉಷಾರಾವ್, ಪೌರ ಕಾರ್ಮಿಕರಾದ ಸುಶೀಲಾ, ಚೈತ್ರಾ ಅವರಿಗೆ ಸಮಾಜಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.


ರವಿಶಂಕರ್, ದೊರೆಸ್ವಾಮಿ, ಸ್ವಾತಿ ಸತ್ಯ, ಗೀತಾ ಪಾಂಡುಜಿ, ಶಿಕ್ಷಕ ಪ್ರಕಾಶ್ ಮೊದಲಾದವರು ಇದ್ದರು. ಸ್ನೇಹಾ ಪ್ರಾರ್ಥಿಸಿದರು. ಸ್ನೇಹ ಹೆಗ್ಡೆ ಸ್ವಾಗತಿಸಿದರು. ಅಲ್ನ ರೋಸ್ ಕಾರ್ಯಕ್ರಮ ನಿರೂಪಿಸಿದರು. ಪನ್ನಗ ವಿಜಯಕುಮಾರ್, ಗೀತಾ ಶ್ರೀಧರ್ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.