ಸಂಜೆವಾಣಿ ನ್ಯೂಸ್
ಮೈಸೂರು.ಡಿ.02:- ಕ್ಯಾನ್ಸರ್ ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮಹತ್ವದ ಬದಲಾವಣೆಗಳನ್ನು ತರುತ್ತಿದೆ ಎಂದು ಭಾರತ್ ಆಸ್ಪತ್ರೆ ಮತ್ತು ಆಂಕೋಲಾಜಿ ಸಂಸ್ಥೆ BHIO) ಅಧ್ಯಕ್ಷ ಹಾಗೂ ಹಿರಿಯ ಆಂಕೋಲಾಜಿಸ್ಟ್ ಡಾ. ಬಿ. ಎಸ್. ಅಜಯ್ ಕುಮಾರ್ ಅಭಿಪ್ರಾಯ ಪಟ್ಟರು.
ಮೈಸೂರಿನ ಸದರ್ನ್ ಸ್ಟಾರ್ ಹೋಟೆಲ್ನಲ್ಲಿ ನಡೆದ ಕ್ಯಾನ್ಸರ್ ಆರೈಕೆಯಲ್ಲಿ ಅತ್ಯಾಧುನಿಕ ನವೀನತೆಗಳು'' ಎಂಬ ರಾಷ್ಟ್ರೀಯ ಶೃಂಗಸಭೆ 2.0 ಅನ್ನು ಉದ್ಘಾಟಿಸಿದ ಅವರು, ಎಐ ಈಗಾಗಲೇ ರೋಗಶಾಸ್ತ್ರ, ರೇಡಿಯಾಲಜಿ ಮತ್ತು ಭವಿಷ್ಯಾನುಮಾನ ವಿಶ್ಲೇಷಣೆಯಲ್ಲಿ ಬಳಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ನಿಖರವಾದ ರೋಗನಿರ್ಣಯಕ್ಕೆ ದಾರಿ ಮಾಡಿಕೊಡಲಿದೆ ಎಂದು ಹೇಳಿದರು. ಫಲಿತಾಂಶಗಳನ್ನು ಊಹಿಸಲು ಅಗತ್ಯವಿರುವ ಕ್ರಮಾವಳಿಗಳನ್ನು ಅಭಿವೃದ್ಧಿಪಡಿಸುವ ಕೆಲಸ ನಡೆಯುತ್ತಿದ್ದು, ರೋಗಿಯ ಚಿಕಿತ್ಸಾ ಪ್ರತಿಕ್ರಿಯೆಗಳ ಆಧಾರದ ಮೇಲೆ ಎಐ ಕಲಿಯುವ ಸಾಮಥ್ರ್ಯ ಹೆಚ್ಚುತ್ತಿದೆ ಎಂದು ತಿಳಿಸಿದರು. ಎಚ್ಸಿಜಿ (ಊಅಉ) ಸಂಸ್ಥೆಯಲ್ಲಿ ಈಗಾಗಲೇ ಎಐ ವಿಭಾಗ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ಇದೇ ರೀತಿಯ ಘಟಕವನ್ನು ಮೈಸೂರಿನ ಃಊIಔ ಯಲ್ಲೂ ಸ್ಥಾಪಿಸಲಾಗುವುದು ಎಂದರು. ಜೊತೆಗೆ, ಜೀನೋಮಿಕ್ಸ್ ಪ್ರಾಮುಖ್ಯತೆ ವೇಗವಾಗಿ ಹೆಚ್ಚುತ್ತಿರುವುದರಿಂದ ಮೊದಲ ಪ್ರಯತ್ನದಲ್ಲೇ ಸೂಕ್ತ ಚಿಕಿತ್ಸೆ ಆಯ್ಕೆ ಮಾಡಲು ಇದು ವೈದ್ಯರಿಗೆ ಸಹಕಾರಿಯಾಗಿದೆ ಎಂದು ಅವರು ವಿವರಿಸಿದರು. ಶೃಂಗಸಭೆಯಲ್ಲಿ ಮಾತನಾಡಿದ ಹಿರಿಯ ಆಂಕೋಲಾಜಿಸ್ಟ್ ಡಾ. ಶೇಖರ್ ಪಾಟೀಲ್, 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವುದನ್ನು ಒತ್ತಿ ಹೇಳಿದರು. ರೋಗನಿರ್ಣಯ ಹಾಗೂ ಗುರಿ ಆಧಾರಿತ ಚಿಕಿತ್ಸೆಗಳಲ್ಲಿನ ಪ್ರಗತಿಯು ಇತ್ತೀಚಿನ ವರ್ಷಗಳಲ್ಲಿ ರೋಗಿಗಳ ಬದುಕುಳಿವಿನ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿದೆ ಎಂದು ಹೇಳಿದರು. ಇಂದಿನ ಪರಿಸ್ಥಿತಿಯಲ್ಲಿ ಬಹುತೇಕ ಕ್ಯಾನ್ಸರ್ಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದ್ದು, ಸರ್ಕಾರ ಮತ್ತು ದಾನಿಗಳ ಬೆಂಬಲದಿಂದ ಅತಿ ಆಧುನಿಕ ಚಿಕಿತ್ಸೆ ಈಗ ಸುಲಭವಾಗಿ ದೊರೆಯುತ್ತಿದೆ ಎಂದರು. ರೇಡಿಯಾಲಜಿ, ರೋಗಶಾಸ್ತ್ರ, ಚಿಕಿತ್ಸಾ ಮೌಲ್ಯೀಕರಣ ಎಲ್ಲ ಕ್ಷೇತ್ರಗಳಲ್ಲೂ ಎಐ ಪ್ರಮುಖ ಪಾತ್ರವಹಿಸುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಎರಡು ದಿನಗಳ ಶೃಂಗಸಭೆಯಲ್ಲಿ ದೇಶದ ಮೂಲೆ ಮೂಲೆಗಳಿಂದ ಬಂದ ಹೆಸರಾಂತ ವೈದ್ಯಕೀಯ ಹಾಗೂ ಶಸ್ತ್ರಚಿಕಿತ್ಸಾ ಆಂಕೋಲಾಜಿಸ್ಟ್ಗಳು ಭಾಗವಹಿಸಿದರು. 50 ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳು ಮಂಡನೆಯಾಗಿದ್ದು, ಸಂಕೀರ್ಣ ಕ್ಯಾನ್ಸರ್ ಪ್ರಕರಣಗಳ ನಿರ್ವಹಣೆಯ ಅನುಭವ ವಿನಿಮಯಕ್ಕೆ ತಜ್ಞರಿಗೆ ವೇದಿಕೆ ಒದಗಿಸಿತು. ಃಊIಔ ಯ ಹಿರಿಯ ಶಸ್ತ್ರಚಿಕಿತ್ಸಾ ಆಂಕೋಲಾಜಿಸ್ಟ್ ಮತ್ತು ರೋಬಾಟಿಕ್ ಸರ್ಜನ್ ಡಾ. ವಿಜಯ್ ಕುಮಾರ್ ಎಂ.,ಆಂಕೋಲಾಜಿಯಲ್ಲಿ ರೋಬಾಟಿಕ್ ಶಸ್ತ್ರಚಿಕಿತ್ಸೆಗಳು: ಃಊIಔ ಅನುಭವ” ಕುರಿತು ವಿಶೇಷ ಅಧಿವೇಶನ ನಡೆಸಿದರು.
ಕಾರ್ಯಕ್ರಮದಲ್ಲಿ ಃಊIಔ ವೈದ್ಯಕೀಯ ಅಧೀಕ್ಷಕಿ ಡಾ. ವೈ. ಎಸ್. ಮಾಧವಿ, ಹಿರಿಯ ವೈದ್ಯಕೀಯ ಆಂಕೋಲಾಜಿಸ್ಟ್ ಡಾ. ಶ್ರೀನಿವಾಸ್ ಕೆ. ಜಿ., ರೋಬಾಟಿಕ್ ಸರ್ಜನ್ ಡಾ. ವಿಜಯ್ ಕುಮಾರ್ ಮತ್ತು ಅಔಔ ಗೌತಮ್ ಧಮೇರ್ಲಾ ಉಪಸ್ಥಿತರಿದ್ದರು.




























