
ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.2:ಜೆ ಎಸ್ ಡಬ್ಲ್ಯೂ ಫೌಂಡೇಷನ್ ಸಿ ಎಸ್ ಆರ್ ಅಡಿಯಲ್ಲಿ ಗ್ರಾಮೀಣ ಯುವಕ ಯುವತಿಯರಿಗಾಗಿ ಓ ಪಿ ಜೆ ಕೇಂದ್ರ ತೋರಣಗಲ್ಲಿನಲ್ಲಿ ಹಾಸ್ಪಿಟಾಲಿಟಿ ತರಬೇತಿ ಕಾರ್ಯಕ್ರಮ ಪ್ರಾರಂಭಿಸಿದ್ದು, ಹತ್ತನೇ ತರಗತಿ ಅಥವಾ ಪಿ ಯು ಸಿ ಅಥವಾ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ನಿರಂತರ 3 ತಿಂಗಳ ತರಬೇತಿಯಲ್ಲಿ ಸ್ಟಾರ್ ಹೋಟೆಲ್ ಗಳಲ್ಲಿ ಆಥಿತ್ಯ ನಿರ್ವಹಣೆ, ಸಂವಹನ, ಹೋಟೆಲ್ ನಿರ್ವಹಣೆ ಮತ್ತು ಅತಿಥಿಗಳ ನಿರ್ವಹಣೆಯ ಕೌಶಲ್ಯಗಳನ್ನು ಕಲಿಸಿಕೊಡುವುದರ ಮೂಲಕ ಅವರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿಕೊಡುವುದಾಗಿದೆ. ಈಗಾಗಲೇ 3ನೇ ತಂಡದಲ್ಲಿ ಒಟ್ಟು 23 ಅಭ್ಯರ್ಥಿಗಳು ತರಬೇತಿಯನ್ನು ಪೂರ್ಣಗೊಳಿಸಿದ್ದು ತರಬೇತಿ ಪ್ರಮಾಣ ಪತ್ರ ಮತ್ತು ಉದ್ಯೋಗ ಪ್ರಮಾಣ ಪತ್ರ ಹಸ್ತಾಂತರಿಸುವ ಕಾರ್ಯಕ್ರಮವನ್ನು ಓ ಪಿ ಜೆ ಕೇಂದ್ರದಲ್ಲಿ ಆಯೋಜಿಸಿದ್ದು. ಕಾರ್ಯಕ್ರಮದಲ್ಲಿ ಜೆ ಎಸ್ ಡಬ್ಲ್ಯೂ ಫೌಂಡೇಶನ್ ಮುಖ್ಯಸ್ಥೆಯಾದ ಸಂಗೀತ ಜಿಂದಾಲ್ ಉದ್ಯೋಗ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿ ” ಗ್ರಾಮೀಣ ಯುವಕ ಯುವತಿಯರು ಕೌಶಲ್ಯ ತರಬೇತಿಯಿಂದ ಕೆಲಸ ಪಡೆದುಕೊಂಡು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು, ಹೋಟೆಲ್ ಉದ್ಯಮದಲ್ಲಿ ಕೆಲಸ ಮಾಡುವಾಗ ಮಹಿಳೆಯರು ಎಚ್ಚರದಿಂದಿದ್ದು, ಸಾದ್ಯವಾದರೆ ಸ್ವಯಂ ರಕ್ಷಣೆ ತರಬೇತಿಯನ್ನು ಪಡೆದುಕೊಂಡು ಕೆಲಸ ನಿರ್ವಹಿಸಬೇಕು, ಅಲ್ಲದೆ ಆರೋಗ್ಯದ ಮೇಲೆ ಹೆಚ್ಚಿನ ಗಮನವಹಿಸಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಬೇಕು. ಗ್ರಾಮೀಣ ಯುವಕ ಯುವತಿಯರು ಬೆಂಗಳೂರು, ಮುಂಬೈ ಮತ್ತು ವಿದೇಶಗಳಲ್ಲಿ ಕೆಲಸ ಮಾಡುವಷ್ಟು ಕೌಶಲ್ಯಗಳನ್ನು ಪಡೆದುಕೊಳ್ಳಬೇಕು. ಅಲ್ಲದೆ ಪ್ರಸ್ತುತ ತರಬೇತಿ ಪಡೆದವರಲ್ಲಿ ಯಾರಿಗಾದರೂ ವಿದೇಶದಲ್ಲಿ ಕೆಲಸ ಮಾಡಲು ಆಸಕ್ತರಿದ್ದರೆ ಅದಕ್ಕೆ ಜೆ ಎಸ್ ಡಬ್ಲ್ಯೂ ಕಡೆಯಿಂದ ಅನುಕೂಲ ಮಾಡಿಕೊಡಲಾಗುವುದು” ಎಂದು ತಿಳಿಸಿದಿರು.
ಕಾರ್ಯಕ್ರಮದಲ್ಲಿ ಸಿ ಎಸ್ ಆರ್ ಮುಖ್ಯಸ್ಥ ಪೆದ್ದಣ್ಣ ಬೀಡಲಾ ಮಾತನಾಡಿ 2ನೇ ತಂಡದಲ್ಲಿ ಒಟ್ಟು 23 ಅಭ್ಯರ್ಥಿಗಳು ತರಬೇತಿ ಪಡೆದಿದ್ದು ಒಟ್ಟು 9 ಅಭ್ಯರ್ಥಿಗಳಿಗೆ ಸ್ಥಳೀಯ ಹೋಟೆಲ್ ಗಳಾದ ಹಯಾತ್ ಮತ್ತು ಶಿವಲೀಲಾ ಪ್ಯಾಲೇಸ್ ಗಳಲ್ಲಿ ಕೆಲಸ ದೊರಕಿದ್ದು ಉಳಿದವರಿಗೆ ಸಂದರ್ಶನ ನಡೆಯುತ್ತಿದೆ ಮತ್ತು 3 ನೇ ಬ್ಯಾಚ್ ನಲ್ಲಿ ಒಟ್ಟು 100 ಅಭ್ಯರ್ಥಿಗಳು ಅಪ್ಲಿಕೇಶನ್ ಸಲ್ಲಿಸಿದ್ದು ಅದರಲ್ಲಿ 30 ಅಭ್ಯರ್ಥಿಗಳಿಗೆ ತರಬೇತಿಯನ್ನು ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು
ತರಬೇತಿ ಕಾರ್ಯಕ್ರಮದ ಮಾರ್ಗದರ್ಶಕರಾದ ಜೆ ಎಸ್ ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ನ ಹಿರಿಯ ಉಪಾಧ್ಯಕ್ಷರಾದ ಸುನಿಲ್ ರಾಲ್ಫ್ ಅಭ್ಯರ್ಥಿಗಳನ್ನು ಪ್ರೋತ್ಸಾಹಿಸಿದರು. ಕಾರ್ಯಕ್ರಮದಲ್ಲಿ ಜೆ ಎಸ್ ಡಬ್ಲ್ಯೂ ಫೌಂಡೇಶನ್ ನ ರಾಜಶೇಖರ ರಾಜು, ಶ್ರೇಷ್ಠ, ಅರ್ಜುನ್ ಮತ್ತು ತರಬೇತಿ ಉಸ್ತುವಾರಿ ವಹಿಸಿದ್ದ ಅಡೆವೋ ಬೆಂಗಳೂರು ಸಂಸ್ಥೆಯ ಅಧಿಕಾರಿಗಳು ಮತ್ತು ಅಭ್ಯರ್ಥಿಗಳು ಬಾಗವಹಿಸಿದ್ದರು.
