ಕೋಮು ಉದ್ವಿಗ್ನ ಸೃಷ್ಟಿಸುವ ಪಾಕ್ ಯತ್ನ ವಿಫಲ

ಜಾರ್ಜ್‍ಟೌನ್,ಮೇ.27-ಭಯೋತ್ಪಾದಕರು ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಕೋಮು ಉದ್ವಿಗ್ನತೆ ಉಂಟುಮಾಡಲು ಪ್ರಯತ್ನಿಸಿದರು, ಅದು ವಿಫಲವಾಯಿತು, ಮುಂದೆ ಹಾಗೇನಾದರೂ ಮಾಡಿದರೆ ಈ ಹಿಂದೆ ಕೊಟ್ಟ ಉತ್ತರಕ್ಕಿಂತ ಮತ್ತಷ್ಟು ಉಗ್ರ ರೀತಿಯಲ್ಲಿ ಉಗ್ರರಿಗೆ ಭಾರತ ಪ್ರತ್ಯುತ್ತರ ನೀಡಲಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.


ಶಶಿ ತರೂರ್ ನೇತೃತ್ವದ ಸರ್ವಪಕ್ಷ ನಿಯೋಗ ಗಯಾನಾದ ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ಅವರನ್ನು ಭೇಟಿ ಮಾತುಕತೆ ನಡೆಸಿದ ವೇಳೆ ಪಾಕಿಸ್ತಾನಕ್ಕೆ ನೇರವಾಗಿಯೇ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಪ್ರತಿಕ್ರಿಯೆ ನೀಡಿದೆ. ಭಾರತ ಸರ್ಕಾರ ಸೂಕ್ತ ತಿರುಗೇಟು ನೀಡಿದೆ. ಅದು ಪಾಕಿಸ್ತಾನ ಮತ್ತು ಭಯೋತ್ಪಾದಕರು ಮುಟ್ಟಿನೋಡಿಕೊಳ್ಳಬೇಕೆಂದು ತಿಳಿಸಿದ್ದಾರೆ
ಭಾರತ ಶಾಂತಿಯಿಂದ ಇರಲು ಬಯಸುತ್ತದೆ , ಆದರೆ ಭಯದಿಂದಲ್ಲ. ಪಾಕಿಸ್ತಾನ ಅಥವಾ ಭಯೋತ್ಪಾದಕರು ಮತ್ತೆ ದಾಳಿ ಮಾಡಿದರೆ ನಾವು ಹೆದರುವುದಿಲ್ಲ ಬದಲಾಗಿ ಈಗ ಕೊಟ್ಟ ಉತ್ತರಕ್ಕಿಂತ ಮತ್ತಷ್ಟು ಉಗ್ರ ರೀತಿ ಉತ್ತರ ನೀಡುತ್ತೇವೆ, ಅದನ್ನು ಪಾಕಿಸ್ತಾನ ಮತ್ತಯ ಭಯೋತ್ಪಾದಕರೂ ಕನಸಿನಲ್ಲಿಯೂ ಎಣಿಸಿರಬಾರದು ಎಂದಿದ್ದಾರೆ


ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಮಾತನಾಡಿದ ಶಶಿ ತರೂರ್, ಭಯೋತ್ಪಾದಕರು ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಕೋಮು ಉದ್ವಿಗ್ನತೆ ಉಂಟುಮಾಡಲು ಪ್ರಯತ್ನಿಸಿದರು, ಅದು ಸಾಧ್ಯವಾಗಲಿಲ್ಲ”ಎಲ್ಲಾ ಸಮುದಾಯಗಳು ಬಹಳ ಒಗ್ಗಟ್ಟಿನಿಂದ ಒಟ್ಟುಗೂಡಿದವು. 4 ದಿನಗಳ ಸಂಘರ್ಷದ ಸಮಯದಲ್ಲಿ ಭಾರತ ಸರ್ಕಾರ ಮತ್ತು ಭಾರತೀಯ ಸೇನೆ ಪ್ರತಿದಿನ ನೀಡಿದ ಮಾಹಿತಿ ಪಾಕಿಸ್ತಾನವನ್ನು ಬೆಚ್ಚಿ ಬೀಳಿಸಿದೆ ಎಂದರು


ಈ ಸಂದರ್ಭದಲ್ಲಿ ಗಯಾನ ಸಂಸತ್ತಿನ ಸ್ಪೀಕರ್ ಮಂಜೂರ್ ನಾದಿರ್ ಮಾತನಾಡಿ “ಗಯಾನಾ ಭಾರತದ ಪ್ರಜಾಪ್ರಭುತ್ವ ಮತ್ತು ಜಾಗತಿಕ ದಕ್ಷಿಣಕ್ಕೆ ನೀಡಿದ ಕೊಡುಗೆಗಳಿಗಾಗಿ ಗೌರವಿಸುತ್ತದೆ” ಎಂದು ಹೇಳಿದರು.


ಆಪರೇಷನ್ ಸಿಂಧೂರ್ ನಂತರದ ರಾಜತಾಂತ್ರಿಕ ಸಂಪರ್ಕದಲ್ಲಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಪಾಕಿಸ್ತಾನದ ಭಯೋತ್ಪಾದನೆಯ ಸಂಪರ್ಕಗಳ ಬಗ್ಗೆ ಮತ್ತು ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ಭಾರತದ ಬಲವಾದ ಸಂದೇಶದ ಬಗ್ಗೆ ರಾಷ್ಟ್ರಗಳಿಗೆ ತಿಳಿಸಲು ಏಳು ಸರ್ವಪಕ್ಷ ನಿಯೋಗಗಳನ್ನು ರಚಿಸಿದೆ.