ಉಡುಪಿ: ಕೋಡಿಬೆಂಗ್ರೆ ಡೆಲ್ಟಾ ಬೀಚ್ ಪಾಯಿಂಟ್‌ನಿಂದ ಹೊರಟ ದೋಣಿ ಪಲ್ಟಿಯಾಗಿ ಇಬ್ಬರು ಮೃತ ಪಟ್ಟಿರುವುದು ಧೃಡಪಟ್ಟಿದೆ.
ಮೃತರನ್ನು ಶಂಕರಪ್ಪ (೨೨), ಸಿಂಧು (೨೩) ಎಂದು ಗುರುತಿಸಲಾಗಿದೆ. ದಿಶಾ (೨೬) ಅವರು ಗಂಭೀರ ಸ್ಥಿತಿಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಧರ್ಮರಾಜ (೨೬) ಎಂಬುವವರ ಸ್ಥಿತಿ ಸ್ಥಿರವಾಗಿದೆ.

ಮಾಹಿತಿಯಂತೆ ೧೪ ಮಂದಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ಇಂದು ಮಧ್ಯಾಹ್ನ ೧೨ ಗಂಟೆಗೆ ನದಿ ಮತ್ತು ಸಮುದ್ರ ಸಂಧಿಸುವ ಹಂಗರಕಟ್ಟೆ ಹಡಗು ನಿರ್ಮಾಣ ಪ್ರದೇಶದ ಬಳಿ (ಮಲ್ಪೆ-ಕೋಟ ಪಿಎಸ್ ಗಡಿ ಮಿತಿಯಲ್ಲಿ) ದೋಣಿ ಮಗುಚಿಬಿದ್ದಿದೆ. ದೋಣಿಯಲ್ಲಿ ೧೪ ಜನರಿದ್ದರು. ಎಲ್ಲರಿಗೂ ಲೈಫ್ ಜಾಕೆಟ್‌ಗಳನ್ನು ನೀಡಲಾಗಿತ್ತು ಎನ್ನಲಾಗುತ್ತಿದೆ. ಆದರೆ ಇನ್ನು ಧೃಡಪಟ್ಟಿಲ್ಲ. ಆದರೆ ಎಲ್ಲರೂ ಅದನ್ನು ಧರಿಸಿರಲಿಲ್ಲ. ದೋಣಿ ವೇವರ್‌ರೈಡರ್ಸ್ ಕಂಪನಿಗೆ ಸೇರಿದ್ದು ಎನ್ನಲಾಗಿದೆ.
ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರವಾಸಿಗರು ಮೈಸೂರಿನ ಸರಸ್ವತಿಪುರಂನ ತಂಡವಾಗಿದ್ದು, ಅಲ್ಲಿ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುವವರಾಗಿದ್ದಾರೆ.
ಕೋಡಿಬೆಂಗ್ರೆಯ ಅಳಿವೆ ಪ್ರದೇಶದಲ್ಲಿ ತೀವ್ರವಾದ ಒಳ ಸುಳಿ ಇದ್ದು ಸಣ್ಣ ನಿರ್ಲಕ್ಷ್ಯವು ಪ್ರಾಣಕ್ಕೆ ಕುತ್ತಾಗಲಿದೆ. ಇದೀಗ ದೋಣಿ ಪಲ್ಟಿಯಾಗಿ ಇಬ್ಬರು ಪ್ರವಾಸಿಗರು ಜೀವ ತೆತ್ತಿದ್ದಾರೆ. ಇದೀಗ ತನಿಖೆ ನಡೆಯುತ್ತಿದ್ದು ಈ ಘಟನೆಯ ಸತ್ಯಾಂಶ ಹೊರ ಬರಲಿದೆ. ಲೈಫ್ ಜಾಕೆಟ್ ಹಾಕದೆ ಪ್ರವಾಸಿಗರು ಹೇಗೆ ದೋಣಿಯಲ್ಲಿ ಪ್ರಯಾಣಿಸಿದರು ಎಂಬ ಕುರಿತು ತನಿಖೆ ನಡೆಯಬೇಕಾಗಿದೆ.
ತನಿಖೆಗೆ ಉಸ್ತುವಾರಿ ಸಚಿವರ ಸೂಚನೆ
ಉಡುಪಿ-ಮಲ್ಪೆ ಕೋಡಿಬೆಂಗ್ರೆ ಪ್ರದೇಶದಲ್ಲಿ ದೋಣಿ ಮುಳುಗಿ ಚಾಮರಾಜನಗರದಿಂದ ಆಗಮಿಸಿದ್ದ ಇಬ್ಬರು ಪ್ರವಾಸಿಗರು ಮೃತಪಟ್ಟಿರುವ ದುರ್ಘಟನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿರುವ ಸಚಿವರು, ಗಾಯಾಳುಗಳಿಗೆ ಸೂಕ್ತ ಹಾಗೂ ತ್ವರಿತ ಚಿಕಿತ್ಸೆ ಒದಗಿಸುವಂತೆ ಹಾಗೂ ಘಟನೆಯ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯವೇ ಕಾರಣ
ಕೋಡಿ ಬೆಂಗ್ರೆ ಪ್ರವಾಸಿ ಬೋಟ್ ದುರಂತದಿಂದ ಪ್ರವಾಸಿಗರ ಸಾವಿಗೆ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಯಶ್ ಪಾಲ್ ಸುವರ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರವಾಸಿ ಬೋಟ್ ಗಳು ನಿಯಮಾವಳಿಗಳನ್ನು ಮೀರಿ, ಸೂಕ್ತ ಪರವಾನಿಗೆ ಇಲ್ಲದೆ ಕಾರ್ಯಾಚರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದ್ದರೂ ಪ್ರವಾಸೋದ್ಯಮ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ನಕಲಿ ದಾಖಲೆಗಳನ್ನು ನೀಡಿ ಕೆಲವು ಪ್ರವಾಸಿ ಬೋಟ್ ಗಳು ಪ್ರವಾಸಿ ಚಟುವಟಿಕೆ ನಡೆಸುತ್ತಿರುವ ಬಗ್ಗೆಯೂ ಇಲಾಖೆ ಕ್ರಮವಹಿಸಿಲ್ಲ.
ಮಲ್ಪೆ ಬೀಚಿನಲ್ಲಿ ಕೇವಲ ಪಾರ್ಕಿಂಗ್ ಶುಲ್ಕ ಸಂಗ್ರಹಕ್ಕೆ ಆಸಕ್ತಿ ತೋರುವ ಪ್ರವಾಸೋದ್ಯಮ ಇಲಾಖೆ ಸ್ವಚ್ಚತೆ, ಜೀವ ರಕ್ಷಕ ವ್ಯವಸ್ಥೆಯ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದೆ.
ಇಂತಹ ಘಟನೆಗಳು ಉಡುಪಿ ಜಿಲ್ಲಾ ಪ್ರವಾಸೋದ್ಯಮಕ್ಕೆ ಕಪ್ಪು ಚುಕ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ಕೋಡಿಬೆಂಗ್ರೆ ದೋಣಿ ಪಲ್ಟಿ ಪ್ರಕರಣ: ಇಬ್ಬರು ಮೃತ್ಯು