ಕೋಟ ಪೊಲೀಸರ ಕಾರ್ಯಾಚರಣೆ ಕಳ್ಳತನ ಆರೋಪಿಯ ಬಂಧನ ಹಾಗೂ ಸ್ವತ್ತು ವಶ

ಉಡುಪಿ | ಶಿರಿಯಾರ ಗ್ರಾಮದ ಶಿರ್ಣ್ ಕ್ರಾಸ್ ಬಳಿ ಚೇತನ್ ದೇವಾಡಿಗ ಎಂಬವರು ನಂದಿಕೇಶ್ವರ ಫಾಸ್ಟ್ ಫುಡ್ ಎಂಬ ಅಂಗಡಿಯನ್ನು ನಡೆಸಿಕೊಂಡಿದ್ದು ದಿನಾಂಕ ೧೪.೦೫.೨೦೨೫ ರಂದು ರಾತ್ರಿ ೦೯.೩೦ ಗಂಟೆಗೆ ಅಂಗಡಿಯನ್ನು ಬೀಗ ಹಾಕಿ ಮನೆಗೆ ಹೋಗಿದ್ದು ದಿನಾಂಕ ೧೫.೦೫.೨೦೨೫ ರಂದು ಬೆಳಿಗ್ಗೆ ೦೮.೩೦ ಗಂಟೆಗೆ ಅಂಗಡಿಗೆ ಬಂದು ನೋಡಿದಾಗ ಯಾರೋ ಕಳ್ಳರು ಅಂಗಡಿಯ ಹಿಂಬದಿಯ ಸೀಟನ್ನು ಕತ್ತರಿಸಿ ಅಂಗಡಿಯ ಒಳಗಿದ್ದ ಸ್ವತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ ಬಗ್ಗೆ ದೂರು ನೀಡಿದ್ದು ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅ. ಕೃ. ೯೭/೨೫ ಕಲಂ ೩೦೫,೩೩೧(೪) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.
ಪೊಲೀಸ್ ಉಪಾಧೀಕ್ಷಕರಾದ ಶ್ರೀ ಪ್ರಭು ಡಿ.ಟಿ. ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಶ್ರೀ ಗೋಪಿಕೃಷ್ಣ ರವರ ಇವರ ಮಾರ್ಗದರ್ಶನದಲ್ಲಿ ಕೋಟಾ ಪೊಲೀಸ್ ಠಾಣೆಯ ಪೊಲೀಸ್ ಉಪ-ನಿರೀಕ್ಷಕರಾದ ರಾಘವೇಂದ್ರ ಸಿ. ಪಿ.ಎಸ್.ಐ.(ಕಾ&ಸು.) ಸುಧಾಪ್ರಭು, ಪಿ.ಎಸ್.ಐ. ( ತನಿಖೆ) ಸಿಬ್ಬಂದಿಗಳಾದ ಕೃಷ್ಣ ಶೇರೆಗಾರ, ವಿಜಯೇಂದ್ರ, ದುಂಡಪ್ಪ ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಪ್ರಕರಣದ ಆರೋಪಿಯಾದ ರಾಕೇಶ್ ಎಂಬಾತನನ್ನು ದಸ್ತಗಿರಿಗೊಳಿಸಿ, ಆತನಿಂದ ಸುಮಾರು ೭೦,೦೦೦/- ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾನ್ಯ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಮ ಶಂಕರ್, ಐ. ಪಿ. ಎಸ್. ರವರು ಹಾಗೂ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸುಧಾಕರ ನಾಯ್ಕ ಮತ್ತು ಪರಮೇಶ್ವರ ಹೆಗಡೆ ರವರು ಅಭಿನಂದಿಸಿರುತ್ತಾರೆ.