
ಪುತ್ತೂರು: ಪುತ್ತೂರು ಕೋ-ಒಪರೇಟಿವ್ ಟೌನ್ ಬ್ಯಾಂಕ್ ವತಿಯಿಂದ ಗ್ರಾಹರಿಕಗಾಗಿ ನೂತನ ವೆಬ್‌ಸೈಟ್ ಹಾಗೂ ಸ್ಟೇಷನರಿ ಹಾಗೂ ರೆಕಾರ್ಡ್ ರೂಮ್ ಅನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.
ಬ್ಯಾಂಕಿನ ಅಧ್ಯಕ್ಷ ಎನ್. ಕಿಶೋರ್ ಕೊಳತ್ತಾಯ ಅವರು ಬ್ಯಾಂಕಿನ ನೂತನ ವೆಬ್‌ಸೈಟ್ ಮತ್ತು ಸುಸಜ್ಜಿತ ಸ್ಟೇಷನರಿ ಮತ್ತು ರೆಕಾರ್ಡ್ ರೂಮ್ ಉದ್ಘಾಟಿಸಿ ಮಾತನಾಡಿ, ಗ್ರಾಹಕರು ಮತ್ತು ಸದಸ್ಯರಿಗೆ ಇದು ಬಹು ಉಪಯುಕ್ತವಾಗಲಿದೆ. ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುವ ಈ ವೆಬ್‌ಸೈಟ್ ಮುಖಾಂತರ ಬ್ಯಾಂಕಿನ ವಿವಿಧ ಸೇವೆಗಳು, ಯೋಜನೆಗಳು ಮತ್ತು ಮಾಹಿತಿ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗಲಿದೆ ಎಂದರು.
ಕಾರ್ಯಕ್ರಮವನ್ನು ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ. ಶೇಖರ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿ ಮಾತನಾಡಿ, ನೂತನ ವೆಬ್‌ಸೈಟ್ ಭೇಟಿ ನೀಡುವ ಮೂಲಕ ಬ್ಯಾಂಕಿನ ಸೌಲಭ್ಯಗಳು ಮತ್ತು ಪ್ರಯೋಜನಗಳ ಬಗ್ಗೆ ಜನಸಾಮಾನ್ಯರು ಸಂಪೂರ್ಣ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.
ಬ್ಯಾಂಕಿನ ಉಪಾಧ್ಯಕ್ಷ ಶ್ರೀಧರ ಗೌಡ, ನಿರ್ದೇಶಕರಾದ ಬಪ್ಪಳಿಗೆ ಚಂದ್ರಶೇಖರ ರಾವ್, ಕಿರಣ್ ಕುಮಾರ್ ರೈ, ರಾಜು ಶೆಟ್ಟಿ, ರಾಮಚಂದ್ರ ಕಾಮತ್, ಮಲ್ಲೇಶ್ ಕುಮಾರ್, ಸುಜೀಂದ್ರ ಪ್ರಭು, ಶ್ರೀಧರ ಪಟ್ಲ , ಸಿ.ಎ. ಅರವಿಂದ ಕೃಷ್ಣ, ಗಣೇಶ ಕೌಕ್ರಾಡಿ, ಹರೀಶ ಭಿಜತ್ರೆ, ಸೀಮಾ ಎ.ಎ., ವೀಣಾ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.




























