ಕೊಲೆ ಪ್ರಕರಣ: ಸಹೋದರರ ಸೆರೆ

ಶಿವಮೊಗ್ಗ, ಜು.3: ವ್ಯಕ್ತಿಯೋರ್ವರ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ಶಿವಮೊಗ್ಗ ತಾಲೂಕಿನ ಕುಂಸಿ ಠಾಣೆ ಪೆÇಲೀಸರು ಅಣ್ಣ ಹಾಗೂ ಆತನ ತಮ್ಮನನ್ನು ಬಂಧಿಸಿದ ಘಟನೆ ನಡೆದಿದೆ.
ಕುಂಸಿ ಗ್ರಾಮದ ಎ ಕೆ ಕಾಲೋನಿ ನಿವಾಸಿ ಮಲ್ಲೇಶಪ್ಪ ಎಂಬುವರ ಪುತ್ರರಾದ ಹರೀಶ್ (23) ಹಾಗೂ ಆಕಾಶ್ (21) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಇವರಿಬ್ಬರು ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಆಯುಧ ವಶಕ್ಕೆ ಪಡೆದುಕೊಳ್ಳಲಾಗಿದೆ. ಇಬ್ಬರನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ ಎಂದು ಜು. 2 ರಂದು ಜಿಲ್ಲಾ ಪೆÇಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಘಟನೆ ಹಿನ್ನೆಲೆ: ಜೂನ್ 29 ರ ರಾತ್ರಿ ಕುಂಸಿ ಪೆÇಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಮರಸ ರಸ್ತೆಯಲ್ಲಿ ವಸಂತ್ (36) ಎಂಬಾತನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿತ್ತು.
ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ವಸಂತ್ ಹತ್ಯೆ ಮಾಡಲಾಗಿದೆ ಎಂಬ ವಿಚಾರವನ್ನು ಆರೋಪಿಗಳು ಪೆÇಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇನ್ಸ್’ಪೆಕ್ಟರ್ ದೀಪಕ್ ಎಂ ಎಸ್, ಸಬ್ ಇನ್ಸ್’ಪೆಕ್ಟರ್ ಶಾಂತರಾಜ್, ಸಿಬ್ಬಂದಿಗಳಾದ ಹೆಚ್’ಸಿಗಳಾದ ಪ್ರಕಾಶ್, ರಾಘುಶೆಟ್ಟಿ, ವಾಹನ ಚಾಲಕ ಶಿವಪ್ಪ, ಪಿಸಿಗಳಾದ ಶಶಿಧರ್, ಮಂಜುನಾಥ್, ರಘು, ನಿತಿನ್, ಆದರ್ಶ, ವಿನಾಯಕ, ಶಶಿಧರ್, ಬುರಾನ್ ರವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.