Home ಜಿಲ್ಲೆ ಮೈಸೂರು ಕೊಲೆಗೆ ಯತ್ನ: ಆರೋಪಿ ಶಿಕ್ಷಕ ಬಂಧನ

ಕೊಲೆಗೆ ಯತ್ನ: ಆರೋಪಿ ಶಿಕ್ಷಕ ಬಂಧನ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.22:-
ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ಕಲಿಸ ಬೇಕಾದ ಶಿಕ್ಷಕ ಮಹಿಳೆಯರ ಎದುರೇ ಮೂತ್ರ ವಿಸರ್ಜನೆ ಮಾಡುವಾಗ ವ್ಯಕ್ತಿಯೊಬ್ಬರು ಪ್ರಶ್ನೆ ಮಾಡಿದ್ದಕ್ಕೆ, ಚಾಕುವಿನಿಂದ ನಾಲೈದು ಕಡೆ ಚುಚ್ಚಿ ಕೊಲೆಗೆ ಯತ್ನಿಸಿದ ಘಟನೆ ಜಿಲ್ಲೆಯ ಸಾಲಿಗ್ರಾಮ ತಾ. ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆರೋಪಿ ಶಿಕ್ಷಕನನ್ನು ಸಾಲಿಗ್ರಾಮ ಪೆÇಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಚಾಕುವಿನಿಂದ ಇರಿತಗೊಳಗಾಗಿರುವ ವ್ಯಕ್ತಿಯನ್ನು ಸಿ.ಎಂ.ಗೋಪಾಲ್ ಎಂದು ಗುರುತಿಸಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಆರೋಪಿ ಶಿಕ್ಷಕ ಚಿಕ್ಕನಾಯಕನಹಳ್ಳಿ ಗ್ರಾಮದ ನರಸಿಂಹೇಗೌಡರ ಮಗ ಸಿ.ಎನ್.ಮಂಜುನಾಥ್. ಈತ ಕೆ.ಆರ್.ನಗರ ಪಟ್ಟಣದ ಆಂಜನೇಯ ಬಡಾವಣೆಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕ ಎನ್ನಲಾಗಿದೆ.
ಅಮಾನತ್ತು: ಆರೋಪಿ ಶಿಕ್ಷಕ ಮಂಜುನಾಥ್ ವಿರುದ್ದ ದೂರು ದಾಖಲಾಗಿ ನ್ಯಾಯಾಂಗ ಬಂಧನಕ್ಕೆ ನೀಡಿರುವ ಬಗ್ಗೆ ಪೆÇಲೀಸ್ ಇಲಾಖೆಯ ವರದಿ ಆದರಿಸಿ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಿ. ಉದಯಕುಮಾರ್ ಅವರು ಆರೋಪಿ ಶಿಕ್ಷಕ ಸಿ.ಎನ್.ಮಂಜುನಾಥ್ ನನ್ನು ಅಮಾನತ್ತು ಪಡಿಸಿ ಆದೇಶ ಹೊರಡಿಸಿದ್ದಾರೆ.