ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಧರಣೆ: ಅಲ್ಪ ಸಂಖ್ಯಾತ ವೇದಿಕೆ ಬೆಂಬಲ

ಉಡುಪಿ ಜಿಲ್ಲಾಧಿಕಾರಿ ಕಛೇರಿ ಅವರ್ಣದಲ್ಲಿ ಸುಮಾರು ೨೫ದಿನಗಳಿಂದ ಅಹೋರಾತ್ರಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ ಕೊರಗ ಸಮುದಾಯದ ಯುವ ಜನರಿಗೆ ಸರ್ಕಾರಿ ಉದ್ಯೋಗ ನೇರ ನೇಮಕಾತಿಗೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಯುತ್ತಿದೆ. ಈ ಸಮುದಾಯದವರಿಗೆ ಬೆಂಬಲ ಸೂಚಿಸಿ ಇಂದು ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಪದಾಧಿಕಾರಿಗಳು ಭೇಟಿನೀಡಿದರು.
ಕೊರಗ ಸಮುದಾಯದ ಮುಖಂಡರೊಂದಿಗೆ ಸಮಾಲೋಚಿಸಿದಾಗ ದಿನದಿಂದ ದಿನಕ್ಕೆ ತಮ್ಮ ಸಮುದಾಯ ನಶಿಸಿ ಹೋಗುತಾ ಇದೆ ಈ ಕೇವಲ ೧೪೦೦೦ ಜನಸಂಖ್ಯೆ ಮಾತ್ರ ಉಳಿದಿದೆ ಇದಕೆ ಕಾರಣ ನಮ್ಮ ಸಮುದಾಯದವರಿಗೆ ಯಾವುದೇ ರೀತಿಯ ಉತ್ತಮ ದರ್ಜೆಯ ಉದ್ಯೋಗ ಇಲ್ಲಾ ಪದವಿ ಮಾಡಿದವರು ಸಹ ಪೌರ ಕಾರ್ಮಿಕರಾಗಿ ದುಡಿಯುತ್ತಿದುದ್ದು ಕುಡಿಯುವ ದುಶ್ಚಟಕ್ಕೆ ಬಲಿಯಾಗಿ ೩೫-೪೦ ವರ್ಷದಲ್ಲಿಯೇ ಅನಾರೋಗ್ಯ ಪೀಡಿತರಾಗಿ ಸಾಯುತ್ತಿದ್ದಾರೆ . ಇದನ್ನು ಅರಿತಾ ತಮ್ಮ ಸಮುದಾಯದ ಮುಖಂಡರು ಹಲವು ವರ್ಷಗಳಿಂದ ತಮ್ಮ ಯುವಕರಿಗೆ ಸರ್ಕಾರಿ ಉದ್ಯೋಗ ನೇರ ನೇಮಕತಿ ಯಿಂದ ನೀಡುವ ಬೇಡಿಕೆ ನೀಡುತಿದ್ದೇವೆ ಸರ್ಕಾರದ ಹಿರಿಯ ನಾಯಕರು ಕೇವಲ ಮನವಿ ಪಡೆದು ಭರವಸೆ ಮಾತ್ರ ನೀಡುತ್ತಿದ್ದಾರೆ ಅದರಿಂದ ನಾವು ನಮ್ಮ ಬೇಡಿಕೆ ಈಡೇರುವರೆಗೆ ಅಹುವರಾತ್ರಿ ಇಲ್ಲಿ ಧರಣಿ ಮಾಡುತಾ ಇದ್ದೇವೆ ಎಂದು ತಮ್ಮ ದುಃಖವನ್ನು ಹಂಚಿಕೊಂಡರು. ಅಲ್ಪಸಂಖ್ಯಾತರ ವೇದಿಕೆಯ ಅಧ್ಯಕ್ಷರಾದ ಚಾರ್ಸ್ ಅಂಬ್ಲರ್ ಮಾತನಾಡಿ ನಮ್ಮ ವೇದಿಕೆ ಸಂಪೂರ್ಣ ತಮಗೆ ಬೆಂಬಲ ನೀಡುತಾ ಇದ್ದೇವೆ ಮತ್ತು ಈ ಬಗ್ಗೆ ಮುಖ್ಯಮಂತ್ರಿಯವರಿಗೆ ನಾವು ಸಹ ಮನವಿ ನಿಡುತೇವೆ ಎಂದು ಹೇಳಿದರು.
ಅಲ್ಪಸಂಖ್ಯಾತರ ವೇದಿಕೆಯ ಕಾರ್ಯದರ್ಶಿ ಝಫರುಲ್ಲಾ ಖಿ.ಒ. ಹೂಡೆ, ನಿಕಟಪೂರ್ವ ಅಧ್ಯಕ್ಷರಾದ ಇಸ್ಮಾಯಿಲ್ ಹುಸೈನ್ ಕಟ್ಪಾಡಿ, ಮಾಜಿ ಅಧ್ಯಕ್ಷರಾದ ಆಡಿ.ಜೆರಾಲ್ಡ್ ಪಿಂಟೊ, ಉಪಾಧ್ಯಕ್ಷರಾದ ಶ್ರೀಮತಿ ಶಾಂತಿ ಪಿರೇರಾ, ಶ್ರೀಮತಿ ಮೇರಿ ಡಿಸೋಜಾ ಗ್ಲಾಡ್ಸನ್ ಕರ್ಕಡ ಭಾರತೀಯ ಕ್ರಿಸ್ತಾ ಒಕ್ಕೂಟ ಉಡುಪಿ ,ಲಿಯೊನಾರ್ಡ್ ಯುಬಿಎಂಸಿ ಚರ್ಚ್ ಉಡುಪಿ ಮತ್ತು ಹಲವು ಸದಸ್ಯರು ಉಪಸ್ಥಿತರಿದರು.