Home ಜಿಲ್ಲೆ ಕೊಟ್ಟೂರು ಸಂತೆಯಲ್ಲಿ ತೀವ್ರ ಅವ್ಯವಸ್ಥೆ – ಸಾರ್ವಜನಿಕರು ಹಾಗೂ ವರ್ತಕರ ಪರದಾಟ

ಕೊಟ್ಟೂರು ಸಂತೆಯಲ್ಲಿ ತೀವ್ರ ಅವ್ಯವಸ್ಥೆ – ಸಾರ್ವಜನಿಕರು ಹಾಗೂ ವರ್ತಕರ ಪರದಾಟ

ಸಂಜೆವಾಣಿ ವಾರ್ತೆ:

ಕೊಟ್ಟೂರು: ಆಗಸ್ಟ್ 19: ವಿಜಯನಗರ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾದ ಕೊಟ್ಟೂರಿನ ಸಂತೆಯಲ್ಲಿ ಮೂಲಸೌಕರ್ಯಗಳ ಕೊರತೆಯಿಂದಾಗಿ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ಪಟ್ಟಣ ಪಂಚಾಯಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ ಸರಿಯಾದ ಮಾರುಕಟ್ಟೆ ಜಾಗದ ವ್ಯವಸ್ಥೆ ಇಲ್ಲದೆ ರಸ್ತೆ ಬದಿಯಲ್ಲೇ ವ್ಯಾಪಾರ ನಡೆಸಲಾಗುತ್ತಿದ್ದು, ಇದರಿಂದ ತೀವ್ರ ವಾಹನ ದಟ್ಟಣೆ ಉಂಟಾಗುತ್ತಿದೆ ಪಾದಚಾರಿಗಳು ನಡೆದಾಡಲು ಜಾಗವಿಲ್ಲದಂತಾಗಿದೆ ಮಳೆ ಬಂದರಂತೂ ಸಮಸ್ಸೆ ಹೇಳತೀರದು ಶುಚಿತ್ವದ ಕೊರತೆ ಹಾಗೂ ದುರ್ನಾತ ಸಂತೆಯ ಸುತ್ತಮುತ್ತ ಕಸ-ಕಡ್ಡಿ ಕೊಳೆತ ತರಕಾರಿಗಳನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದ್ದು ದುರ್ನಾತ ಬೀರುತ್ತಿದೆ ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಸ್ಥಳೀಯರನ್ನು ಕಾಡುತ್ತಿದೆ.ಕೂಡಲೇ ಸ್ಥಳೀಯ ಪಟ್ಟಣ ಪಂಚಾಯಿತಿ ತಕ್ಷಣವೇ ಜಾಗೃತರಾಗಿ ಸಂತೆಗೆ ಸೂಕ್ತ ಜಾಗ ಗುರುತಿಸಿ ನೈರ್ಮಲ್ಯ ಮತ್ತು ಮೂಲಸೌಕರ್ಯಗಳನ್ನು ಒದಗಿಸಬೇಕು. ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಸ್ಥಳೀಯ ನಿವಾಸಿಗಳು ಹಾಗೂ ವ್ಯಾಪಾರಸ್ಥರು ಎಚ್ಚರಿಸಿದ್ದಾರೆ.