Home ಸುದ್ದಿ ರಾಷ್ಟ್ರೀಯ ಕೇರಳ ಕಾಂಗ್ರೆಸ್‍ನಲ್ಲಿ ಬಿರುಕು: ವೇಣು -ಸತೀಶನ್ ಬಣ ನಡುವೆ ಸಂಘರ್ಷ

ಕೇರಳ ಕಾಂಗ್ರೆಸ್‍ನಲ್ಲಿ ಬಿರುಕು: ವೇಣು -ಸತೀಶನ್ ಬಣ ನಡುವೆ ಸಂಘರ್ಷ

ತಿರುವನಂತಪುರ,ಮೇ13: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ಯುಡಿಎಫ್ ಮೈತ್ರಿಕೂಟದಲ್ಲಿ ಈಗ ‘ಮುಖ್ಯಮಂತ್ರಿ’ ಪಟ್ಟಕ್ಕಾಗಿ ತೀವ್ರ ಪೈಪೆÇೀಟಿ ಆರಂಭವಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದರೆ, ಹಿರಿಯ ನಾಯಕ ವಿ.ಡಿ. ಸತೀಶನ್ ಅವರು ಸಚಿವ ಸಂಪುಟದಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.


ಕೇರಳದ ಮುಂದಿನ ಸಾರಥ್ಯ ವಹಿಸಲು ಕಾಂಗ್ರೆಸ್‍ನಲ್ಲಿ ಮೂವರು ಪ್ರಮುಖ ನಾಯಕರ ನಡುವೆ ಪೈಪೆÇೀಟಿ ಏರ್ಪಟ್ಟಿದೆಕೆ.ಸಿ. ವೇಣುಗೋಪಾಲ್: ಹೈಕಮಾಂಡ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇವರು, ಹೆಚ್ಚಿನ ಸಂಖ್ಯೆಯ ಶಾಸಕರ ಬೆಂಬಲ ಹೊಂದಿದ್ದಾರೆ ಎನ್ನಲಾಗಿದೆ.ವಿ.ಡಿ. ಸತೀಶನ್: ಪ್ರತಿಪಕ್ಷ ನಾಯಕರಾಗಿ ಪಕ್ಷದ ಯಶಸ್ಸಿನಲಿ ಪ್ರಮುಖ ಪಾತ್ರ ವಹಿಸಿರುವ ಇವರ ಪರವಾಗಿಯೂ ಒಂದು ಬಣ ದನಿಯೆತ್ತಿದೆ.


ಪಕ್ಷದ ಹಿರಿಯ ನಾಯಕ ಮತ್ತು ದೀರ್ಘಕಾಲದ ಸಾಂಘಿಕ ಅನುಭವ ಹೊಂದಿರುವ ಇವರು ಕೂಡ ರೇಸ್‍ನಲ್ಲಿದ್ದಾರೆ.
ವೇಣುಗೋಪಾಲ್ ಅವರು ಸದ್ಯ ಆಲಪ್ಪುಳ ಕ್ಷೇತ್ರದ ಲೋಕಸಭಾ ಸದಸ್ಯರಾಗಿದ್ದಾರೆ. ಒಂದು ವೇಳೆ ಅವರು ಮುಖ್ಯಮಂತ್ರಿಯಾದರೆ, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಮತ್ತು ವಿಧಾನಸಭೆ ಪ್ರವೇಶಿಸಲು ಉಪಚುನಾವಣೆ ಎದುರಿಸಬೇಕಾಗುತ್ತದೆ. ಇದು ರಾಜಕೀಯವಾಗಿ ಪಕ್ಷಕ್ಕೆ ಅನಗತ್ಯ ಹೊರೆಯಾಗಬಹುದು ಎಂಬುದು ಸತೀಶನ್ ಬೆಂಬಲಿಗರ ವಾದವಾಗಿದೆ.


ಮೇ 4 ರಂದು ಪ್ರಕಟವಾದ ಫಲಿತಾಂಶದಲ್ಲಿ ಯುಡಿಎಫ್ 140 ಸ್ಥಾನಗಳ ಪೈಕಿ 102 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ ಹೈಕಮಾಂಡ್ ನಿಯೋಜಿಸಿದ್ದ ವೀಕ್ಷಕರು ಈಗಾಗಲೇ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಆದರೂ, ಬಣ ರಾಜಕೀಯ ಮತ್ತು ಮಿತ್ರಪಕ್ಷಗಳಾದ ಮುಸ್ಲಿಂ ಲೀಗ್ ಹಾಗೂ ಕೇರಳ ಕಾಂಗ್ರೆಸ್‍ನ ನಿಲುವುಗಳು ಅಂತಿಮ ನಿರ್ಧಾರವನ್ನು ವಿಳಂಬಗೊಳಿಸಿವೆ.
ಮುಂದಿನ ಕೆಲವು ದಿನಗಳಲ್ಲಿ ದೆಹಲಿಯಲ್ಲಿ ನಡೆಯಲಿರುವ ಉನ್ನತ ಮಟ್ಟದ ಸಭೆಯ ನಂತರ ಕೇರಳದ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವ ನಿರೀಕ್ಷೆಯಿದೆ.