ಸಂಜೆವಾಣಿ ನ್ಯೂಸ್
ಮೈಸೂರು: ನ.09:- ನಗರದ ಫೆÇೀರಂ ಹಾಲ್ ಮುಂಭಾಗ ನರಸಿಂಹರಾಜ ಯುವ ಕಾಂಗ್ರೆಸ್ ಘಟಕದ ವತಿಯಿಂದ ಕೆಪಿವೈಸಿಸಿ ರಾಜ್ಯ ಕಾರ್ಯದರ್ಶಿ ಅಬ್ರಾರ್ ಮೊಹಮ್ಮದ್ ಅವರ ನೇತೃತ್ವದಲ್ಲಿ ಶಾಸಕ ತನ್ವೀರ್ ಸೇಠ್ ಉಪಸ್ಥಿತಿಯಲ್ಲಿ ಕೇಂದ್ರ ಬಿಜೆಪಿ ವಿರುದ್ಧ ವೋಟ್ ಚೋರಿ ಸಹಿ ಸಂಗ್ರಹದ ಅಭಿಯಾನವನ್ನು ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವದ ಪರವಾಗಿ ಯುವಕರು ಧ್ವನಿ ಎತ್ತುವ ಕೆಲಸ ಆಗಬೇಕು ಮತದಾನದ ಪವಿತ್ರ ಹಕ್ಕನ್ನು ಕದಿಯುವ ಕೇಂದ್ರದ ಬಿಜೆಪಿ ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸಬೇಕು ಶ್ರೇಷ್ಠ ಸಾಮಾಜಿಕ ಉದ್ದೇಶಕ್ಕಾಗಿ ಈ ಅಭಿಯಾನವನ್ನು ಆಯೋಜನೆ ಮಾಡಲಾಗಿದ್ದು ಕೇಂದ್ರದ ಬಿಜೆಪಿ ವಿರುದ್ಧ ಪ್ರತಿಯೊಬ್ಬ ಸಾರ್ವಜನಿಕರಿಗೂ ತಿಳಿ ಹೇಳುವ ಕೆಲಸ ಈ ಮೂಲಕ ನಡೆಯುತ್ತಿದೆ ಎಂದು ಎನ್ ಆರ್ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿವೈಸಿಸಿ ರಾಜ್ಯ ಕಾರ್ಯದರ್ಶಿ ಅಬ್ರಾರ್ ಮೊಹಮ್ಮದ್ ಅವರು ದೇಶದ ದೊಡ್ಡಶಕ್ತಿ ಪ್ರಜಾಪ್ರಭುತ್ವ, ಪ್ರಜಾಪ್ರಭುತ್ವದಲ್ಲಿ ಪವಿತ್ರವಾದದ್ದು ಮತದಾನ ಕೇಂದ್ರದ ಬಿಜೆಪಿ ಅಧಿಕಾರದ ಆಸೆಯಿಂದ ಪ್ರಜಾಪ್ರಭುತ್ವದ ಪವಿತ್ರವಾದ ಮತದಾನದ ಹಕ್ಕನ್ನೆ ಕಳ್ಳತನ ಮಾಡಿ ಅಧಿಕಾರದ ದುರಾಸೆಯಿಂದ ಕದಿಯುತ್ತಿದ್ದಾರೆ ಇದು ಯುವಸಮಹದ ಮೇಲೆ ಪರಿಣಾಮ ಬೀಳುತ್ತದೆ ಹಾಗಾಗಿ ಇದನ್ನು ಖಂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಕೇಂದ್ರದ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ವೇಳೆ ಸಹಿ ಸಂಗ್ರಹ ಅಭಿಯಾನದಲ್ಲಿ ಎನ್ ಆರ್ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಇಕ್ರಂ, ಅಜೀಜ್ ಸೇಠ್ ಬ್ಲಾಕ್ ಅಧ್ಯಕ್ಷ ಐ ವೈ ಸಿ ಸೈಯದ್ ಸಕ್ಲೇನ್, ಎನ್ ಆರ್ ವಿ ಪಿ ರಿಜ್ವಾನ್, ಸೈಯದ್ ಅಬ್ರಾರ್ ಯುವ ಕಾಂಗ್ರೆಸ್ ಅಧ್ಯಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೀರ್ ಕುಸ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತಾಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




























