(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.17: ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯದ ತಜ್ಞರ ತಾಂತ್ರಿಕ ಸಮಿತಿ ಆಗಮಿಸಿ ತುಂಗಭದ್ರ ಡ್ಯಾಮ್ ನ್ನು ವೀಕ್ಷಿಸಿ, ಗೇಟುಗಳ ಬಗ್ಗೆ ಸಮಗ್ರ ಅದ್ಯಯನ ಮಾಡಿ ಬದಲಿಸಲೇಬೇಕು ಎಂಬ ಎಚ್ಚರಿಕೆಯನ್ನು ಕೊಟ್ಟಿದ್ದನ್ನು. ರಾಜ್ಯ ಸರ್ಕಾರ
ಭಂಡ ದೈರ್ಯದಿಂದ ಆ ಎಚ್ಚರಿಕೆಯನ್ನು ಸಾರಸಗಟಾಗಿ ಉಪೇಕ್ಷೆ ಮಾಡಿದ್ದೇ ಇಂದು ತುಂಗಭದ್ರ ಡ್ಯಾಂನಲ್ಲಿನಲ್ಲಿ ಸಂಪೂರ್ಣ ನೀರು ಸಂಗ್ರಹಿಸಲಾಗದ ದುಸ್ಥಿತಿಗೆ ಬಂದಿದೆ ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು.
ತುಂಗಭದ್ರ ನೀರಾವರಿ ಸಲಹಾ ಸಮಿತಿ ಸಭೆಯ
ನಿರ್ಣಯಗಳಿಗೆ ಅನುಸಾರ ಡ್ಯಾಮ್ ಕೆಳಭಾಗದ 19 ಲಕ್ಷ ಹೆಕ್ಟಾರ್ ಭೂ ಭಾಗದಲ್ಲಿ ಭತ್ತ, ಹತ್ತಿ ಜೋಳ ಮೆಣಸಿನಕಾಯಿ ಬೆಳೆ ಬಿತ್ತಲಾಗಿದೆ ಹಾಗೇ ಬಿತ್ತಿದ ಬೆಳೆಗಳು ಕೂಡ ಮಳೆಯ ಆಶ್ರಯದಲ್ಲಿ ಎರಡು ತಿಂಗಳು ಬೆಳೆದಿವೆ.
ಈಗ ಮುಂಗಾರು ಕೊನೆಯ ಹಂತದಲ್ಲಿ ಡ್ಯಾಮ್ ನೀರನ್ನು ಪಡೆಯುವ ಕಾಲಘಟ್ಟದಲ್ಲಿ, ಗೇಟುಗಳ ಶಿತಿಲಾವಶ್ಥೆ ಬಗ್ಗೆ ಸಚಿವ ಶಿವರಾಜ್ ತಂಗಡಗಿ
ತಿಳಿಸಿ, ರೈತರಲ್ಲಿ ಗೊಂದಲ ಸೃಷ್ಟಿಸಿರುವುದು ತಮ್ಮ ಬೇಜವಾಬ್ದಾರಿ ಮನಶ್ಥಿತಿಯನ್ನು ತೋರಿಸುತ್ತಿದೆ.
ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ 8 ಸಲ ತುಂಗಭದ್ರ ಮಂಡಳಿಗೆ ನಮ್ಮ ರಾಜ್ಯದ ಕಾರ್ಯದರ್ಶಿ ನೇಮಕಕ್ಕೆ ಬೇಡಿಕೆ ಹಾಗು ಒತ್ತಾಯ ಮಾಡಿದ್ದಾರೆ ಎಂಬುದು ಬಾಲಿಷ ಹಾಗು ಗೂಬೆ ಕೂಡಿಸುವಂತಹ ಮಾತು. ಇದರಲ್ಲಿ ಕೇಂದ್ರ ಸರ್ಕಾರ ಕೇವಲ ತಾಂತ್ರಿಕ ಸಲಹೆಯ ಅವಕಾಶವೊಂದನ್ನು ಬಿಟ್ಟು ಆಡಳಿತಾತ್ಮಕವಾಗಿ ಹಾಗು ನಿರ್ವಹಣೆಯ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ.
ಈ ಬಗ್ಗೆ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಜೊತೆ ಸಮಾಲೋಚನೆ ಮಾಡಬೇಕು.
ಸರ್ಕಾರ ಟೆಂಡರ್ ಕರೆದಾಗಲೇ ಕೆಲಸದ ಕಾಲಮಿತಿ ನಿಗಧಿ ಪಡಿಸಿರುತ್ತದೆ. ಟೆಂಡರ್ ಪ್ರಕ್ರಿಯೆಯನ್ನೇ ತಡವಾಗಿ ಮಾಡಿದ್ದೀರಿ, ಮುಂಗಾರು ಹಂಗಾಮು ಪ್ರಾರಂಭವಾಗಿದ್ದರಿಂದ ಕಾಮಗಾರಿ ತೆಗೆದುಕೊಳ್ಳದೇ ಸುಖಾಸುಮ್ಮನೆ ತಡ ಮಾಡಿ, ಕಾಮಗಾರಿ ನಡೆಸದೇ ನೀರು ತುಂಬಲಾಗಿದೆ,
ಕಳೆದ ಆಗಷ್ಟ್ ನಲ್ಲಿ 19 ನೇ ಗೇಟ್ ಮುರಿದುಬಿದ್ದಿತ್ತು, ಅಂದರೆ ಬೇಸಿಗೆಯಲ್ಲಿ ತಮಗೆ ಸಿಕ್ಕ ಮೂರು ತಿಂಗಳ ಅವಧಿಯಲ್ಲಿ, 33 ಗೇಟುಗಳನ್ನು ಒಬ್ಬರಿಗೇ, ಕೊಡದೇ 11 ಜನ ಗುತ್ತೇದಾರರಿಗೆ 3 ಗೇಟು ಗಳಂತೆ ತುಂಡು ಗುತ್ತಿಗೆ ಕೊಟ್ಟು ಮಾಡಿಸಿದ್ದರೆ, ಪ್ರತಿ ಗೇಟ್ ನ್ನು ಕೂಡಿಸಲು, ಒಬ್ಬಬ್ಬರಿಗೂ ಒಂದೊಂದು ಗೇಟು ಕೂಡಿಸಲು ಒಂದು ತಿಂಗಳ ಅವಕಾಶ ಸಿಗುತ್ತಿತ್ತು.
ಸಚಿವರ ಪ್ರಕಾರ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಕಷ್ಟು ಕಂಪನಿಗಳು ಬರಲಿಲ್ಲ ಎಂದು ಹೇಳುತ್ತಿದ್ದಾರೆ, ಅಲ್ಲಿಗೆ ಸರ್ಕಾರದ ಮೇಲೆ ಅವರಿಗೆ ವಿಶ್ವಾಸ ಇಲ್ಲ ಎಂದೇ ಅರ್ಥ.
ಬೇಜಾವ್ದಾರಿ ಹೇಳಿಕೆಯನ್ನು ಕೊಡುವುದನ್ನು ಮೊದಲು ನಿಲ್ಲಿಸಿ, ಮುಂದಿನ ಹಂಗಾಮು ಮುಗಿದ ಮೇಲೆ ಪ್ರತಿ ಗುತ್ತಿಗೆ ದಾರನಿಗೆ ಮೂರು ಗೇಟು ಗಳನ್ನು ಕೂಡಿಸಲು ಮೂರು ತಿಂಗಳ ಕಾಲ ಮಿತಿ ನೀಡಿ, ಒಂದು ತಿಂಗಳಿಗೆ ಒಂದು ಗೇಟು ಕೂಡಿಸುವಷ್ಟು ಪುರುಸೊತ್ತು ಕೊಟ್ಟು ಕೇವಲ ಮೂರು ಗೇಟು ಕೂಡಿಸುವ ಜವಾಬ್ದಾರಿ ಕೊಡಿ. ತೊಂದರೆ ಕಂಡು ಬಂದ ತಕ್ಷಣ ಕೇಂದ್ರದ ಮೇಲೆ ಹೊತ್ತು ಹಾಕುವುದನ್ನು ಮೊದಲು ನಿಲ್ಲಿಸಿ.
ತಮ್ಮ ಬೇಜವಾಬ್ದಾರಿ ಹಾಗು ಬಾಲಿಷ ಹೇಳಿಕೆಗಳಿಂದ ರೈತರನ್ನು ಅಂಜಿಸುವುದನ್ನು ನಿಲ್ಲಿಸಿ. ಹಾಗೇನಾದರೂ ನೀವು ಹೇಳಿಕೊಂಡಂತೆ ಆದರೆ, ರೈತರಿಗೆ ಪ್ರತಿ ಎಕರೆಗೆ ಒಂದು ಲಕ್ಷ ಕೊಡಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂದಿದ್ದಾರೆ.


























