
ಸಂಜೆವಾಣಿ ವಾರ್ತೆ
ಬಳ್ಳಾರಿ ಮೇ.25:ಕೆ.ಸೆಟ್-2025 ಪರೀಕ್ಷೆಯಲ್ಲಿ (ಬೆಸ್ಟ್) ಬಳ್ಳಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ಉತ್ತಮ ಱ್ಯಾಂಕುಗಳನ್ನು ಪಡೆದುಕೊಂಡಿರುತ್ತಾರೆ. ಇಂಜನೀಯರಿಂಗ್ ವಿಭಾಗದಲ್ಲಿ ಪವನ್ ಕುಮಾರ್ ರಾಜ್ಯಕ್ಕೆ 524 ನೇ ಱ್ಯಾಂಕ್, ಜೈ ಕಿಶನ್ ಪಾಟೀಲ್- 561 ನೇ ಱ್ಯಾಂಕ್, ಸೈಯದ್ ಮಾಹಿರ್ 1559 ನೇ ಱ್ಯಾಂಕ್ , ಲಿಖಿತಾ ಬಿ.- 1691 ನೇ , ಸಾಯಿ ಹರ್ಷಿತಾ ವೇಮುಲ- 3522, 5000 ಱ್ಯಾಂಕ್ ಒಳಗೆ 20 ವಿದ್ಯಾರ್ಥಿಗಳು, 10000 ಒಳಗೆ 57 ವಿದ್ಯಾರ್ಥಿಗಳು, 20000 ಒಳಗೆ 98 ವಿದ್ಯಾರ್ಥಿಗಳು ಱ್ಯಾಂಕ್ ಪಡೆದಿದ್ದಾರೆ. ಎಂದು ಕಾಲೇಜಿನ ಪ್ರಾಚಾರ್ಯರಾದ ಕೆ. ವೆಂಕಟೇಶ್ವರರಾವ್ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
