
ಸುಳ್ಯ:ಸುಮಾರು ೩೪ ವರ್ಷಗಳ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿ ೨೦೨೪ ರಂದು ನಿವೃತ್ತಿ ಹೊಂದಿದ ಐವತ್ತೋಕ್ಲು ಗ್ರಾಮದ ನಾರಾಯಣ ಪಲ್ಲೋಡಿಯವರಿಗೆ ಸುರಕ್ಷತಾ ಚಾಲನೆಗಾಗಿ ೨೦೨೨ನೇ ಸಾಲಿನ ಬೆಳ್ಳಿ ಪದಕ ಪುರಸ್ಕಾರ ಪಡೆದಿದ್ದಾರೆ.
೫ ವರ್ಷಗಳ ಅಪಘಾತ ರಹಿತ ಸುರಕ್ಷತಾ ಚಾಲನೆಗಾಗಿ ಈ ಪುರಸ್ಕಾರ ನೀಡಲಾಗುತ್ತಿದ್ದು, ಮಂಗಳವಾರ ಮಂಗಳೂರು ನೆಹರು ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಾರಾಯಣ ಪಲ್ಲೋಡಿಯವರಿಗೆ ಬೆಳ್ಳಿ ಪದಕ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ. ಬ್ರಿಜೇಶ್ ಚೌಟಾ, ಐವನ್ ಡಿಸೋಜ ಸೇರಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.




























