
ಸಂಜೆವಾಣಿ ವಾರ್ತೆ
ಕೆ ಆರ್ ನಗರ.ಡಿ.19:- ಕೆ ಆರ್ ನಗರ ಪೆÇಲೀಸ್ ಠಾಣೆಯಲ್ಲಿ ಪರಿಶೀಲಿಸಿ ಯಾವ್ಯಾವ ಕೆಲಸಗಳು ಹೇಗೆ ನಡೆಯುತ್ತಿದೆ ಎಂಬುದನ್ನು ತಿಳಿದು ತುರ್ತಾಗಿ ಆಗಬೇಕಾಗಿರುವ ಕಡಿತಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಜೊತೆಗೆ ಪುಂಡಪೆÇೀಕರನ್ನು ಮಟ್ಟ ಹಾಕುವಂತೆ ಆರಕ್ಷಕ ನಿರೀಕ್ಷಕ ಸೇರಿದಂತೆ ಪೆÇಲೀಸ್ ಸಿಬ್ಬಂದಿಗಳಿಗೆ ತಿಳಿಸಲಾಗಿದೆ ಎಂದು ಪೆÇೀಲಿಸ್ ಮಹಾ ನಿರೀಕ್ಷಕರಾದ ( ಡಿಐಜಿ ) ಬೋರ್ ಲಿಂಗಯ್ಯ ತಿಳಿಸಿದರು.
ಪಟ್ಟಣದ ಪೆÇಲೀಸ್ ಠಾಣೆಗೆ ಅನಿರೀಕ್ಷಿತವಾಗಿ ಬೇಟೆ ನೀಡಿದ ಪೆÇಲೀಸ್ ಮಹಾ ನಿರೀಕ್ಷೆಕರಾದ ಬೋರ್ ಲಿಂಗಯ್ಯ ಠಾಣೆಯಲ್ಲಿ ಕಡಿತಗಳನ್ನು ಪರಿಶೀಲಿಸಿ ಪೆÇಲೀಸ್ ಸಿಬ್ಬಂದಿಗಳ ಜೊತೆ ಸಭೆ ನಡೆಸಿದ ನಂತರ ಪತ್ರಕರ್ತರಿಗೆ ಮಾಹಿತಿ ನೀಡಿದರು.
ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ಕೆ ಆರ್ ನಗರ ತಾಲೂಕಿನ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು ಈ ಬಗ್ಗೆ ಪರಿಶೀಲಿಸಲಾಗುತ್ತಿದ್ದು ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಟ್ಟಣದಲ್ಲಿ ಗಾಂಜಾ ಸೇರಿದಂತೆ ಇನ್ನಿತರ ಜನಸಾಮಾನ್ಯರಿಗೆ ದುಷ್ಪರಿಣಾಮ ಬೀರುವ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ ಆದರೆ ಈ ಬಗ್ಗೆ ಮಾರಾಟ ಮಾಡುತ್ತಿರುವ ಸ್ಥಳ ಶೇಖರಿಸಿರುವ ಸ್ಥಳದ ಬಗ್ಗೆ ಮಾಹಿತಿಯನ್ನು ನೀಡದಿರುವುದು ನಮ್ಮ ಇಲಾಖೆ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಸಾರ್ವಜನಿಕರು ಸಹ ಪೆÇಲೀಸರ ಜೊತೆ ಕೈಜೋಡಿಸಬೇಕೆಂದು ತಿಳಿಸಿದರು.
ಪಟ್ಟಣದಲ್ಲಿ ರಾತ್ರಿ ವೇಳೆ ಪೆÇಲೀಸರ ಸಂಚಾರ ಮತ್ತು ಯುವಕರು ವಿದ್ಯಾರ್ಥಿಗಳು ರಿಲ್ಸ್ ಮತ್ತು ಕಳ್ಳತನ ದರೋಡೆ ಗಲಾಟೆ ವಾಹನಗಳ ಸಂಚಾರ ನಿಯಂತ್ರಣ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಪತ್ರಿಕರ್ತರು ಮತ್ತು ಸಾರ್ವಜನಿಕರು ದೂರು ನೀಡುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲು ಅರೆಕ್ಷಕ ನಿರೀಕ್ಷಕರು ಸೇರಿದಂತೆ ಪೆÇಲೀಸ್ ಸಿಬ್ಬಂದಿಗಳಿಗೆ ತಿಳಿಸಲಾಗಿದ್ದು ಮುಂದಿನ ದಿನಗಳಲ್ಲಿ ಇವೆಲ್ಲಕ್ಕೂ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದರು.
ಕೆ ಆರ್ ನಗರ ಪಟ್ಟಣ ಸೇರಿದಂತೆ ಈ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಜನಸಂಖ್ಯೆ ಮತ್ತು ಕ್ರಿಮಿನಲ್ ಸೇರಿದಂತೆ ಇನ್ನಿತರ ದೂರುಗಳು ದಾಖಲಾಗುತ್ತಿರುವ ಬಗ್ಗೆ ಮಾಹಿತಿ ಇದ್ದು ಇದಕ್ಕಾಗಿಯೇ ಇನ್ನೊಂದು ಹೊಸ ಠಾಣೆ ಪ್ರಾರಂಭಿಸುವ ಬಗ್ಗೆ ಮತ್ತು ಪೆÇಲೀಸ್ ಸಿಬ್ಬಂದಿಯನ್ನು ನಿಯೋಜಿಸುವ ಬಗ್ಗೆ ಚಿಂತಿಸಲಾಗಿದ್ದು ಅತಿ ಶೀಘ್ರದಲ್ಲಿಯೇ ಇವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪೆÇಲೀಸರು ಮನೆಮನೆ ಸರ್ವೆ ಮಾಡದಿರುವ ಬಗ್ಗೆ ದೂರುಗಳಿದ್ದು ಮತ್ತು ಪಟ್ಟಣದಲ್ಲಿ ಇಸ್ ಮೀಟ್ ಆಡುತ್ತಿರುವ ಬಗ್ಗೆ ಮಾಹಿತಿ ಇದೆ ಈ ಬಗ್ಗೆ ಮೈಸೂರು ಪೆÇಲೀಸ್ ವರಿಷ್ಠಾಧಿಕಾರಿ ಹಾಗೂ ಅಡಿಷನಲ್ ಎಸ್ ಪಿ ಮತ್ತು ಡಿವೈಎಸ್ಪಿ ಈ ಠಾಣಿಯ ಆರಕ್ಷಕ ನಿರೀಕ್ಷಕರಿಗೆ ಕ್ರಮ ವಹಿಸಲು ತಿಳಿಸಲಾಗಿದ್ದು ಶೀಘ್ರವಾಗಿ ಇವೆಲ್ಲವಕ್ಕೂ ಗಮನಹರಿಸುವ ಮೂಲಕ ಸಾರ್ವಜನಿಕರಿಗೆ ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಮೂಲಕ ಠಾಣೆಯಲ್ಲಿರುವ ಹಳೆಯ ದೂರುಗಳು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಮೈಸೂರು ಜಿಲ್ಲಾ ವರಿಷ್ಠಾಧಿಕಾರಿ ವಿಷ್ಣುವರ್ಧನ ಅಡಿಷನಲ್ ಎಸ್ಪಿ ಮಲ್ಲಿಕಾ ಡಿ ವೈ ಎಸ್ ಪಿ ರಾಜಣ್ಣ ಆರಕ್ಷಕ ನಿರೀಕ್ಷಕರಾದ ಶಿವಪ್ರಕಾಶ್ ಪಿ ಎಸ ಐ ಸ್ವಾಮಿಗೌಡ ಎ ಎಸ ಐ ಶ್ರೀನಿವಾಸ್ ಮುಖ್ಯ ಪೇದೆಗಳಾದ ಪರಶುರಾಮ ಗೌಡ ಮಧು ಕುಮಾರ್ ಸೇರಿದಂತೆ ಪೆÇಲೀಸ್ ಅಧಿಕಾರಿಗಳು ಪೆÇಲೀಸ್ ಸಿಬ್ಬಂದಿಗಳು ಹಾಜರಿದ್ದರು.


























