
ಕಾಸರಗೋಡು-ಕೆರೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಮೃತಪಟ್ಟ ದಾರುಣ ಘಟನೆ ಕಾಞಾಂಗಾಡ್ ನ ಮಾಣಿಕ್ಕೋತ್ ನಲ್ಲಿ ನಡೆದಿದೆ.
ಓರ್ವನ ಸ್ಥಿತಿ ಗಂಭೀರವಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ . ಪಾಲೆಕ್ಕಿ ಅಝೀಝ್ ರವರ ಪುತ್ರ ಆಫಾಝ್(೯) ಹಾಗೂ ಹೈದರ್ ರವರ ಪುತ್ರ ಅನ್ವರ್ (೧೧) ಮೃತಪಟ್ಟ ಮಕ್ಕಳು.
ಅನ್ವರ್ ನ ಸಹೋದರ ಹಾಶಿಮ್ ನನ್ನು ಗಂಭೀರ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.ಸಂಜೆ ೪ ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮಾಣಿ ಕ್ಕೋತ್ ಪಾಲೆಕ್ಕಿ ಮಸೀದಿಯ ಕೆರೆಯಲ್ಲಿ ಸ್ನಾನಕ್ಕಿಳಿದ ಸಂದರ್ಭದಲ್ಲಿ ಘಟನೆ ನಡೆದಿದೆ.
ಮಾಹಿತಿ ತಿಳಿದು ನಾಗರಿಕರು, ಅಗ್ನಿ ಶಾಮಕ ದಳದ ಸಿಬ್ಬಂದಿಗಳು, ಪೊಲೀಸರು ಮಕ್ಕಳನ್ನು ಹೊರ ತೆಗೆದರೂ ಇಬ್ಬರು ಮೃತಪಟ್ಟಿದ್ದರು. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.