ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಬೆವರಳಿಸಿದ ಶಾಸಕ ದರ್ಶನ್

ಸಂಜೆವಾಣಿ ವಾರ್ತೆ
ನಂಜನಗೂಡು.ಜು.05:
– ರಾಜ್ಯ ಸರ್ಕಾರದಿಂದ ತಾಲೂಕಿನ ಅಭಿವೃದ್ಧಿಗೆ ನೂರಾರು ಕೋಟಿ ಹಣ ಅಭಿವೃದ್ಧಿಗೆ ಬಿಡುಗಡೆಯಾಗುತ್ತಿದೆ ಅಧಿಕಾರಿಗಳು ಜಾಗೃತಿಯಿಂದ ಕಾರ್ಯನಿರ್ವಹಿಸಿ ಇನ್ನಷ್ಟು ಅಭಿವೃದ್ಧಿಗೆ ಜಾಗೃತಿ ವಹಿಸಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಜನರ ಸೇವೆ ಮಾಡುವ ಬದಲಾಗಿ ಕೇವಲ ಕಾಲಹರಣ ಮಾಡಿ ದಿನದೊಡಬಾರದು ಎಂದು ತಾಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಇಂದು ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನ ಸಭೆಯಲ್ಲಿ ಶಾಸಕ ದರ್ಶನ್ ದ್ರುವ ನಾರಾಯಣ್ ತಾಲೂಕು ಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಮಾತನಾಡಿದರು.


ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನ ಸಭೆಯನ್ನು ಆಯೋಜನೆ ಮಾಡಲಾಗಿತ್ತು.
ಇ.ಓ,ಜೆರಾಲ್ಡ್ ರಾಜೇಶ್ ನೇತೃತ್ವದಲ್ಲಿ ತಹಸಿಲ್ದಾರ್ ಶಿವಕುಮಾರ್ ಕಾಸ್ನೂರು ಸೇರಿದಂತೆ ತಾಲೂಕಿನ ಎಲ್ಲಾ ಅಧಿಕಾರಿಗಳು ಕೆಡಿಪಿ ಸಭೆಯಲ್ಲಿ ಭಾಗವಹಿಸಿದರು.
ತಾಲೂಕು ಮಟ್ಟದ ಪ್ರತಿ ಇಲಾಖೆಯಲ್ಲಿ ನಡೆದಿರುವ ಪ್ರಗತಿಯ ವರದಿಯನ್ನು ಅಧಿಕಾರಿಗಳ ಬಳಿ ಕೇಳಿ ಮಾಹಿತಿ ಪಡೆದುಕೊಂಡರು.


ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ಸ್ಮಶಾನ, ಕೆರೆಕಟ್ಟೆಗಳು ,ಮತ್ತು ರೈತರು ತಿರುಗಾಡುವ ಜಮೀನಿರುವ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಬೇಕು ನ್ಯಾಯಾಲಯಗಳಲ್ಲಿರುವ ಪ್ರಕರಣಗಳನ್ನು ಮುಂದೂಡದೇ ಕೂಡಲೇ ಇತ್ಯರ್ಥಪಡಿಸಿ ಕಡಿಮೆಗೊಳಿಸಬೇಕು ಕಂದಾಯ ಇಲಾಖೆಗೆ ಸಾರ್ವಜನಿಕರು ಆಗಮಿಸಿದಾಗ ವಿಳಂಬ ಮಾಡದೆ ಶೀಘ್ರಗತಿಯಲ್ಲಿ ಕೆಲಸ ಕಾರ್ಯಗಳ ನಡೆಯಬೇಕು ಎಂದು ಸೂಚಿಸಿದರು.


ಮಧ್ಯದ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಿ
ಅಬಕಾರಿ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಅಕ್ರಮ ಮಧ್ಯಕ್ಕೆ ಕಡಿವಾಣ ಹಾಕಬೇಕು ಮಧ್ಯದ ಅಂಗಡಿಯ ಮಾಲೀಕರ ವಿರುದ್ಧ ಕ್ರಮ ಕೈಗೊಂಡಾಗ ಮಾತ್ರ ಅಕ್ರಮ ಮಧ್ಯ ತಡೆಯಲು ಸಾಧ್ಯ ಎಂದು ಅಧಿಕಾರಿಗಳಿಗೆ ಸೂಚಿಸಿದರು.


ನೀರಾವರಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಹೆಗ್ಗಿಲ್ಲದೆ ಅಕ್ರಮ ಮಣ್ಣು ಮಾರಾಟದ ದಂದೆ ನಡೆಯುತ್ತಿದೆ ಯಾಕಾಗಿ ಅಧಿಕಾರಿಗಳು ಪ್ರಕರಣ ದಾಖಲಿಸಿಲ್ಲ ಕ್ರಮಕ್ಕೆ ಮುಂದಾಗಿಲ್ಲ ಎಂದು ನೀರಾವರಿ ಇಲಾಖೆ ಇಂಜಿನಿಯರ್ ದರ್ಶನ್ ಎಂಬುವರಿಗೆ ಮಣ್ಣು ಲೂಟಿ ಕೋರರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಬೇಕು ಎಂದು ಸಭೆಯಲ್ಲಿ ಶಾಸಕರು ಎಚ್ಚರಿಕೆ ನೀಡಿದರು. ನೀರಾವರಿ ಇಲಾಖೆಯ ಮೇಲಾಧಿಕಾರಿಗಳ ಜೊತೆ ಮಾತನಾಡಿ ನಿಮ್ಮ ವಿರುದ್ಧ ಶಿಸ್ತು ಕ್ರಮ ಜರುಗಲು ಮಾತನಾಡುತ್ತೇನೆ ಎಂದು ಸಭೆಯಲ್ಲಿ ತಿಳಿಸಿದರು. ಗ್ರಾಮೀಣ ಕುಡಿಯುವ ನೀರು ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳು ಕಂಡು ಬಂದಿದೆ ಜಲಜೀವನ್ ಮಿಷನ್ ಎಂಬ ಯೋಜನೆಯ ಬಗೆ ಮಾತನಾಡಲು ಸಾಧ್ಯವಾಗದಂತಹ ಮಟ್ಟಕ್ಕೆ ಸಮಸ್ಯೆಗಳಾಗಿ ಮಾರ್ಪಾಡಾಗಿದೆ.2017 ರಲ್ಲಿ ಪ್ರಾರಂಭವಾದ ಕೆರೆ ನೀರು ತುಂಬಿಸುವ ಯೋಜನೆ ಇನ್ನೂ ಕೂಡ ಮುಗಿದಿಲ್ಲ ಒಂದು ತಿಂಗಳ ಒಳಗಾಗಿ ಕಾಮಗಾರಿಗೆ ಚಾಲನೆ ನೀಡಬೇಕೆಂದು ಶಾಸಕರು ತಿಳಿಸಿದರು.


ಶಾಸಕರು ಕೇಳಿದ ಪ್ರಶ್ನೆಗೆ ಉತ್ತರಿಸದೆ ತಬ್ಬಿಬ್ಬಾದ ಂಇಔ ಉಮೇಶ್
ಶ್ರೀ ಶ್ರೀಕಂಠೇಶ್ವರ ದೇವಾಲಯದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಎಂಬುವರಿಗೆ ಹಿಗ್ಗ ಮಗ್ಗ ತರಾಟೆಗೆ ತೆಗೆದುಕೊಂಡರು ಭಕ್ತರಿಗೆ ಬೆಳ್ಳಿರಥ ಯೋಜನೆಯನ್ನು ಯಾವಾಗ ಕಲ್ಪಿಸಿ ಕೊಡುತ್ತೀರಿ ಇನ್ನೆಷ್ಟು ತಿಂಗಳುಗಳು ಬೇಕು ನಿಮಗೆ ಎಂದು ದೇವಾಲಯದ ಅಧಿಕಾರಿಗಳನ್ನು ಜಾಲಾಡಿದರು ದೊಡ್ಡ ಜಾತ್ರೆ ಆಗಿರುವ ದಿನಾಂಕವನ್ನೇ ನೆನಪಿನಲ್ಲಿಟ್ಟುಕೊಳ್ಳದೆ ತಬ್ಬಿಬಾದ ಅಧಿಕಾರಿಗಳು ಪ್ರಗತಿ ಪರಿಶೀಲನ ಸಭೆಯಲ್ಲಿ ನಗೆ ಪಾಟಲಿಗೆ ಈಡಾದರೂ. ಕೊನೆಗೆ ಈ ಓ ಜಗದೀಶ್ ಸಭೆಗೆ ಹಾಜರಾದರು ವಿಐಪಿ ಕೊಠಡಿ ಬೆಳ್ಳಿರಥ ಅಕ್ರಮವಾಗಿ ಅಂಗಡಿಗಳನ್ನು ತೆರವು ಹಳೆಯ ಶೌಚಾಲಯ ತೆರವುಗೊಳಿಸಿ ಲೈಬ್ರರಿ ಮಾಡುವ ವಿಚಾರವಾಗಿ ಶಾಸಕರ ಜೊತೆ ಚರ್ಚಿಸಿ ತಿಂಗಳಗಳ ಒಳಗಡೆ ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕರ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದರು


ನಗರಸಭೆ ವಿಚಾರವಾಗಿ ಫುಡ್ ಜೂನ್ ಮತ್ತು ಗ್ಯಾಸ್ ಲೈನಿಂಗ್ ಹೊಸ ಬಡಾವಣೆಗೆ ಮೂಲಭೂತ ಸೌಕರ್ಯ ಒದಗಿಸುವ ವಿಚಾರವಾಗಿ ಚರ್ಚಿಸಿದರು ಆದಷ್ಟು ಬೇಗ ಕೆಲಸಗಳು ಆಗಬೇಕು ಎಂದು ಎಚ್ಚರಿಸಿದರು
ಇನ್ನು ಅನೇಕ ಇಲಾಖೆಯ ಪ್ರಗತಿ ವರದಿಗಳನ್ನು ಪರಿಶೀಲಿಸಿ ತಾಲೂಕು ಮಟ್ಟದ ಅಧಿಕಾರಿಗಳು ಜಾಗೃತಿಯಿಂದ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ಸಭೆಯಲ್ಲಿ ಶಾಸಕ ದರ್ಶನ್ ಅಧಿಕಾರಿಗಳಿಗೆ ಎಚ್ಚರಿಸಿದರು.


ಕೆಡಿಪಿ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ ಮಾರುತಿ ನಗರಸಭಾ ಅಧ್ಯಕ್ಷರಾದ ಶ್ರೀಕಂಠ ಸ್ವಾಮಿ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಇ ಓ ಜೆರಾಲ್ಡ್ ರಾಜೇಶ್ ಟಿಎಪಿಸಿಎಂಎಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್ ಹಗಿನವಾಳು ಚೆನ್ನಪ್ಪ ಸರಿದಂತೆ ತಾಲೂಕು ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.