ಕೆಡಿಪಿ ಸಭೆಗೆ ಬಾರದ ಸಾರಿಗೆ ಸಂಸ್ಥೆ ಡಿಸಿ ಅಮಾನತಿಗೆ ಸಚಿವರ ಸೂಚನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ,ಸೆ.30: ಕೆಡಿಪಿ ಸಭೆಗೆ ಯಾವುದೇ ಕಾರಣ ನೀಡದೆ ಬಾರದ ಮತ್ತು ಜನರೊಡನೆ ಕೆಟ್ಟದಾಗಿ ನಡವಳಿಕೆ ಮಾಡುತ್ತಿದ್ದಾರೆಂದು ಕೆಕೆಆರ್ ಟಿಸಿಯ ಬಳ್ಳಾರಿ ವಿಭಾಗದ ನಿಯಂತ್ರಣಾಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು. ನಾನು ಹೇಳುವವರೆಗೆ ಅಮಾನತ್ತು ಹಿಂಪಡೆಯಬಾರದು ಎಂದು ವಸತಿ, ವಕ್ಫ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಹೇಳಿದ್ದಾರೆ.
ಅವರು ನಿನ್ನೆ ಇಲ್ಲಿನ  ಜಿಲ್ಲಾ ಪಂಚಾಯತ್  ಸಭಾಂಗಣದಲ್ಲಿ ಪ್ರಸಕ್ತ ಸಾಲಿನ  ಜಿಲ್ಲಾ  ಮಟ್ಟದ  ಮೊದಲ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸಿ,  ಪಂಚ ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಶೇ.96.95 ರಷ್ಟು ಅನುಷ್ಠಾನವಾಗಿದ್ದು, ನೂರಕ್ಕೆ ನೂರರಷ್ಟು ಅನುಷ್ಠಾನವಾಗಬೇಕು ಎಂದರು.
ಅಕ್ರಮ ಅಕ್ಕಿ ಸಾಗಾಣಿಕೆಗೆ ಕಡಿವಾಣ ಹಾಕಿ:
ಪಡಿತರ ಅಕ್ಕಿಯನ್ನು ಜನತೆ ತೆಗೆದುಕೊಳ್ಳದೆ ಅವರು ಪಡಿತರ ಅಂಗಡಿಯವರಿಂದಲೇ ಹಣ ಪಡೆದುಕೊಳ್ಳುತ್ತಿದ್ದಾರಂತೆ.  ಪಡಿತರ ಡಿಪೋದಲ್ಲಿ ಅಕ್ರಮ ಮಾರಾಟ ನಡೆಯುತ್ತೆ  ಇದಕ್ಕರ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದರು.
ನಕಲಿ ರೇಷನ್ ಕಾರ್ಡ್ ರದ್ದತಿ ಬಗ್ಗೆ ಪ್ರಶ್ನಿಸಿದಾಗ ಆಹಾರ ಇಲಾಖೆಯ ಜೆಡಿ ಅವರು ಉತ್ತರ ನೀಡಿ. 
25 ಲಕ್ಷ ರೂ ಮೇಲ್ಪಟ್ಟು ವ್ಯವಹಾರ ಮಾಡುವ,  7.5 ಎಕರೆ ಜಮೀನು ಇರುವ, ನೆರೆಯ ಆಂದ್ರದಲ್ಲಿಯೂ  ಕಾರ್ಡು ಇರುವವರನ್ನು ಗುರುತಿಸಿ  6238 ಬಿಪಿಎಲ್ ನಿಂದ ಎಪಿಎಲ್ ಮಾಡಿದೆ. ಕಳೆದ ಮೂರು ವರ್ಷದಲ್ಲಿ 29 ಸಾವಿರ ಜನರು ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 13 ಸಾವಿರ ಜಬರಿಗೆ  ಕೊಟ್ಟಿದೆ. ಈಗ 10410 ಬಿಪಿಎಲ್ ಕಾರ್ಡು ಡಿಮ್ಯಾಂಡ್ ಇದೆ. ಅ.1 ರಿಂದ ಮತ್ತೆ ಬಿಪಿಎಲ್ ಕಾರ್ಡು ನೀಡಲು ಅನುಮತಿ ದೊರೆಯಲಿದೆಂದರು. ಬಳ್ಳಾರಿಯಲ್ಲಿ ಅಕ್ಕಿ ಬದಲು ಜನ  ಹಣ ಕೇಳುತ್ತಾರೆ. ಕಾರಣ ಇಲ್ಲಿ ಭತ್ತ ಬೆಳೆಯುವುದರಿಂದ ಎಂದೇಳಿದರು.
ಗೃಹ ಜ್ಯೋತಿಯಲ್ಲಿ  ಮೀಟರ್ ಇಲ್ಲದೆ ಮನೆ ಇವೆ. ಅಂತಹವರು ಮೀಟರ್ ಪಡೆಯಲು ಜನ ರೆಡಿ ಇದ್ದಾರೆ. ಆದರೆ ನೀವು ಹೆಚ್ಚಿನ ಹಣ ಕೇಳುತ್ತಿದ್ದೀರಿ ಎಂದು ದೂರು ಬಂದಿದೆ ಎಂದು  ಜೆಸ್ಕಾಂ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು ಸಚಿವರು. ಬಾಕಿ ಬಿಲ್ ಗೆ  ಬಡ್ಡಿ ಕೇಳಬೇಡಿ. ಬಡ್ಡಿ ಮನ್ನಾಗೆ ಸಿಎಂ ಬಳಿ ಮಾತನಾಡುವೆ. ಅಲ್ಲಿವರೆಗೆ ಸಂಪರ್ಕ ಕಟ್ ಮಾಡಬೇಡಿ ಎಂದು ಸೂಚಿಸಿದರು.
ಉದ್ಯೋಗ ವಿನಮಯ ಕಚೇರಿಯಿಂದ ಉದ್ಯೋಗ ಮೇಳದ ಮೂಲಕ  ಈ ವರ್ಷ ಎರೆಡು ನೂರು ಜನರಿಗೆ ಉದ್ಯೋಗ ನೀಡಿದೆ ಎಂದಿದ್ದಕ್ಕೆ ಇದು ಸರಿಯಿದ್ದರೆ ನಿಮ್ಮನ್ನು ಸನ್ಮಾನ‌ಮಾಡುವೆ ಎಂದರು ಅಧಿಕಾರಿ ಹಟ್ಟಪ್ಪ ಅವರಿಗೆ.
ಕಂಪ್ಲಿಯಲ್ಲಿ 130 ಎಕರೆ ಸ್ಥಳ ಇದೆ.  ಹತ್ತುಕೋಟಿ ರೂ ವೆಚ್ಚದ  ಕೃಷಿ ಸಂಶೋಧನೆ ಕೇಂದ್ರ ಮಾಡಿ  ಎಂದು ಶಾಸಕ  ಗಣೇಶ್  ಹೇಳಿದರು.
ಯೂರಿಯಾ ಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳಿ. ಅಗತ್ಯ ವಿರುವಷ್ಟು ಗೊಬ್ಬರ ತರಿಸಿ ಎಂದು ಶಾಸಕ ನಾಗೇಂದ್ರ ಹೇಳಿದರು.
ಡಿಸಿ.ಕೆ.ನಾಗೇಂದ್ರ ಒ್ರಸಾದ್ ಅವರು ಬರುವ
ಡಿಸೆಂಬರ್ ಒಳಗೆ ಜೋಳ‌ಖರೀದಿ ಕೇಂದ್ರ ತೆರೆಯಿರಿ.
ಮಾರುಕಟ್ಟೆಗೆ ರೆಡಿಯಾಗಿ ಎಂದು ಹೇಳಿದರು.‌
ಸಿರುಗುಪ್ಪ ತಾಲೂಕಿನಲ್ಲಿ ಬೆಳೆ ನಷ್ಟ ಪರಿಹಾರಕ್ಕೆ ಸರ್ವೇ ಮಾಡಲು ಕಳಿಸಿ ಎಂದು ಶಾಸಕ ನಾಗರಾಜ್ ಕೇಳಿದರು.
ಬಳ್ಳಾರಿ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಕುಸಿದಿದೆ. ಹೆಚ್ಚು ಮಾಡಲು ಕ್ರಮ ತೆಗೆದುಕೊಳ್ಳಿ ಎಂದು
ಪ್ರಭುಶಂಕರ್ ಕೆಎಂಎಫ್ ಎಂಡಿ ಪ್ರಭು ಶಂಕರ್ ಅವರಿಗೆ ಸೂಚಿಸಿದರು. ಅವರು 11 ಸಾವಿರ ಲೀಟರ್ ಮಾತ್ರ ಬರುತ್ತಿದೆ. ಕೇವಲ
60 ಹಾಲು ಉತ್ಪಾದಕ ಸಂಘಗಳು ಇದ್ದವು ಅವನ್ನು  96 ಮಾಡಿದೆ 130 ಮಾಡಲಿದೆ ಎಂದು ಹೇಳಿದರು.
ಸಂಡೂರು ತಾಲೂಕಿಗೆ  2500. ಬಳ್ಳಾರಿ ತಾಲೂಕಿಗೆ  2000  ಸಾವಿರ ರಾಸುಗಳನ್ನು ಬರುವ ಆರು ತಿಂಗಳಲ್ಲಿ  ವಿತರಿಸಲಿದೆ ಎಂದು ಪಶು ಸಂಗೋಪನಾಧಿಕಾರಿ ಹೇಳಿದರು.  ಶಾಸಕ ನಾಗೇಂದ್ರ ಅವರು ಜಿಲ್ಲೆಯಲ್ಲಿ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆ ಆಗಬೇಕು ಆ ನಿಟ್ಟಿನಲ್ಲಿ ಕೆಲಸ ಮಾಡಿ ಎಂದರು. ಶಾಸಕ ಗಣೇಶ್
ಬೈಲೂರಲ್ಲಿ ಹತ್ತು ಎಕರೆ ಜಮೀನು ಇದೆ ಅದನ್ನು ಕಂದಾಯ ಇಲಾಖೆಯಿಂದ ಕೆಎಂಎಫ್ ಗೆ ಖರೀದಿಸಲು ಸೂಚಿಸಿದರು.
ಕೊಳಗಲ್ಲು ಬಳಿ ಮೆಗಾ ಡೈರಿ ಮುಖ್ಯ ರಸ್ತೆಗೆ ಸಂಪರ್ಕ ಪಡೆಯಲು ಅನುವಾಗುವಂತೆ ಮತ್ತಷ್ಟು ಅರ್ಧ ಎಕರೆ ಖರೀದಿ ಮಾಡಲು ಪ್ರಸ್ತಾವನೆ ಕಳಿಸಿ ಎಂದು ಸೂಚಿಸಲಾಯ್ತು.
ಮಹಾನಗರ ಪಾಲಿಕೆ ಹಳೆಯ ತಾಲ್ಲೂಕು ಕಚೇರಿ ಆವರಣಕ್ಕೆ:
30 ವರ್ಷಗಳ ಹಳೆಯ ಕಟ್ಟಡವಾದ ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿಯನ್ನು 2.50 ಎಕರೆ ಪ್ರದೇಶವಿರುವ ನಗರದ ಹಳೆಯ ತಾಲ್ಲೂಕು ಕಚೇರಿ ಆವರಣದಲ್ಲಿ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಮಾದರಿಯ ಸುಸಜ್ಜಿತ ಪಾಲಿಕೆ ಕಚೇರಿ ನಿರ್ಮಾಣ ಮಾಡಲಾಗುವುದು ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಹೇಳಿದರು.
ಇದಕ್ಕೆ ಜಾಗ ಒದಗಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾಪಿದರು. ಹಳೆಯ ಪಾಲಿಕೆ ಕಚೇರಿ ಜಾಗದಲ್ಲಿ ವಾಣಿಜ್ಯ-ವ್ಯಾಪಾರ ಮಳಿಗೆಗಳನ್ನು ನಿರ್ಮಿಸಲಾಗುವುದು. ಹಳೆಯ ಕಚೇರಿ ಆವರಣದಲ್ಲಿರುವ ಪೊಲೀಸ್ ಠಾಣೆ, ಕೃಷಿ ಮತ್ತು ತೋಟಗಾರಿಕೆ ಕಚೇರಿಗಳನ್ನು ನೂತನ ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರಿಸಲಾಗುವುದು ಎಂದರು
ಪ್ರಭಾವಿಗಳಿಂದ ಒತ್ತುವರಿ:
ಜಿಲ್ಲೆಯಲ್ಲಿ ಪ್ರಭಾವಿಗಳಿಂದಲೇ ಸರ್ಕಾರಿ ಭೂಮಿ ಒತ್ತುವರಿಯಾಗುತ್ತಿದ್ದು, ಈ ಕುರಿತು ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್ , ನೆರೆಯ ರಾಜ್ಯದಿಂದ ಅಕ್ರಮವಾಗಿ ಸರಬರಾಜಾಗುವ ಸೇಂಧಿ, ಮದ್ಯ ಮತ್ತು ಗಾಂಜಾ, ಮಟ್ಕಾ, ಜೂಜು, ಬೆಟ್ಟಿಂಗ್ ದಂಧೆಗಳಿಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರ ಶಾಸಕ ನಾರಾ ಭರತ್ ರೆಡ್ಡಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕ ಚಂದ್ರ, ಬಳ್ಳಾರಿ ವಲಯ ಐಜಿಪಿ ವರ್ತಿಕಾ ಕಟಿಯಾರ್, ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಉಪಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಬಸವರಾಜ ಮೊದಲಾದವರು ಇದ್ದರು.
ಜನರಿಲ್ಲದೆ ಗ್ಯಾರೆಂಟಿ ಸಭೆ ಉಪಯೋಗ ಇಲ್ಲ;
ಗ್ಯಾರೆಂಟಿ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಸಭೆಯಲ್ಲಿ ಕೇವಲ 20-30 ಜನ ಸೇರಿ‌ ಸಭೆ ಮಾಡಿದರೆ ಉಪಯೋಗ ಇಲ್ಲ.  ಸಭೆಯಲ್ಲಿ  ಹೆಚ್ಚಿನ ಜನರು ಇರಬೇಕು ಸಾಕಷ್ಟು ಅರಿವು ಮೂಡಿಸಿ ಸಭೆ ಮಾಡಿ ಎಂದು  ಕಂಪ್ಲಿ ಶಾಸಕ ಗಣೇಶ್ ಗ್ಯಾರೆಂಟಿ ಯೋಜನೆ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಿಗೆ ಸೂಚಿಸಿದರು.
ಜನರಿಗೋಸ್ಕರ ಕೆಲಸ ಮಾಡಿ:
ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಶಾಸಕ ಗಣೇಶ ಅವರು ದಿನಕ್ಕೆ 200-300 ಪೋನ್ ಅಟೆಂಡ್ ಮಾಡುವೆ ಬೆಳಿಗ್ಗೆ 7 ರಿಂದ ರಾತ್ರಿ 11 ವರೆಗೆ ಕೆಲಸ ಮಾಡ್ತೀವಿ ನಾವು. ನೀವು ಸಂಬಳ ತೆಗೆದುಕೊಳ್ಳುತ್ತೀರಲ್ಲ.  ಜನರಿಗೋಸ್ಕರ್ ಕೆಲಸ ಮಾಡಿ ಎಂದರು.
ಅಂಕೆ ಸಂಖ್ಯೆ ಓದ ಬೇಡಿ:
ಸಭೆಯಲ್ಲಿ ಅಂಕೆ ಸಂಖ್ಯೆ ಓದುತ್ತಿದ್ದ ಅಧಿಕಾರಿಗಳಿಗೆ ಡಿಸಿ  ನಾಗೇಂದ್ರ ಪ್ರಸಾದ್  ಅವರು  ಅಂಕೆ ಸಂಖ್ಯೆ  ನಮ್ಮ ಮುಂದೆ ಇದೆ. ಅದನ್ನು ಬಿಟ್ಟು ಸಮಸ್ಯೆ ಏನಿದೆ. ಹೊಸದೇನಿದೆ. ಏನು ಮಾಡಬೇಕಿದೆ ಅದನ್ನು ಹೇಳಿ  ಇಲಾಖೆಗೆ ಸಂಬಂಧಿಸಿದ ಸಮಗ್ರವಾದ ಬೇಡಿಕೆ ಪಟ್ಟಿ   ನಿಮ್ಮ ಬಳಿ ಇರರಬೇಕು ಎಂದು ಎಂದು ಅಧಿಕಾರಿಗಳಿಗೆ ಹೇಳಿದರು. 

One attachment • Scanned by Gmail